ಬಸ್ ಡೋರ್ ತೆಗೆಯಲು ಸತಾಯಿಸಿದ ಡ್ರೈವರ್ : ಪ್ರಯಾಣಿಕರಿಂದ ದೂರು,ಡ್ರೈವರ್ ರೂಟ್ ಬದಲಾವಣೆ

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಸುಳ್ಯ‌ ಕೊಯನಾಡು ಕೆಎಸ್ ಆರ್ ಟಿಸಿ ಬಸ್ ಡ್ರೈವರ್ ಪ್ರಯಾಣಿಕರು ಬಸ್‌ನಿಂದ ಇಳಿಯಲು ಕೇಳಿಕೊಂಡರೆ ಬಸ್ ಡೋರ್ ತೆಗೆಯದೇ ಸತಾಯಿಸುತ್ತಿರುವ ಕುರಿತು ಸಾರ್ವಜನಿಕರಿಂದ ಡಿಪ್ಪೋ ಮ್ಯಾನೇಜರ್ ರಿಗೆ ದೂರು ಹೋದ ಪರಿಣಾಮ, ವಿಚಾರಣೆ ‌ನಡೆಸಿದ ಅಧಿಕಾರಿಗಳು ಆ ಡ್ರೈವರ್ ರೂಟ್ ಬದಲಾವಣೆ ಮಾಡಿರುವುದಾಗಿ ತಿಳಿದು ಬಂದಿದೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಸುಳ್ಯ – ಕೊಯನಾಡು‌ ನಡುವೆ ಸಂಚಾರಿಸುವ ಕೆ.ಎಸ್.ಆರ್.ಟಿ‌. ಸಿ ಬಸ್ ನಲ್ಲಿ ಚಾಲಕನೋರ್ವ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿ ಪ್ರಯಾಣಿಕರಿಗೆ ಸಮಸ್ಯೆ ಉಂಟು ಮಾಡುತ್ತಾನೆಂದು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಪ್ರಯಾಣಿಕರು ಹಲವು ಬಾರಿ ದೂರು ನೀಡಿದ ಪರಿಣಾಮ ಚಾಲಕನ ರೂಟ್ ಬದಲಾಯಿಸಿದ ಘಟನೆ ವರದಿಯಾಗಿದೆ.
ಕೊಯನಾಡು ಸುಳ್ಯ ನಡುವೆ ಸಂಚಾರಿಸುವ ಬಸ್ಸು ಚಾಲಕ ಗಫೂರ್ ಎಂಬ ಚಾಲಕ ಪ್ರಯಾಣಿಕರು ನಿಂತಿದ್ದಲ್ಲಿ ಬಸ್ ‌ನಿಲ್ಲಿಸುವುದಿಲ್ಲ. ಬಸ್ ನಿಂದ ಇಳಿಯಲು ಪ್ರಯಾಣಿಕರು ಸಿದ್ಧರಾದಾಗ ಬಸ್ ನ ಡೋರ್ ತೆಗೆಯುವುದಿಲ್ಲ ಎಂಬಿತ್ಯಾದಿ ದೂರುಗಳು ಡಿಪ್ಪೋ‌ ಮ್ಯಾನೇಜರ್ ಗೆ ಬಂದಿದ್ದವು.ಅ.26ರಂದು ಬೆಳಗ್ಗೆ ಕೊಯನಾಡಿನಿಂದ ಸುಳ್ಯಕ್ಕೆ ಬಸ್ ಬರುತ್ತಿರುವಾಗ ಡೋರ್ ತೆಗೆಯದ ವಿಚಾರಕ್ಕೆ ಪ್ರಯಾಣಿಕರೊಂದಿಗೆ ಬಸ್ ನಲ್ಲೇ ವಾಗ್ವಾದ ನಡೆಯಿತೆನ್ನಲಾಗಿದೆ. ಬಸ್ ನಲ್ಲಿದ್ದ ಪ್ರಯಾಣಿಕರು ಪುತ್ತೂರು ಅಧಿಕಾರಿಗಳಿಗೆ, ಸುಳ್ಯ ಡಿಪ್ಪೋ ಮ್ಯಾನೇಜರ್ ರಿಗೆ ದೂರಿಕೊಂಡರೆನ್ನಲಾಗಿದೆ.
ಈ ಹಿಂದೆ ಡ್ರೈವರ್ ಕಲ್ಲುಗುಂಡಿಯ ಗಫೂರ್ ಮೇಲೆ ಬಂದ ದೂರು‌ ಹಾಗೂ ಅ.26ರಂದು ಪ್ರಯಾಣಿಕರು ದೂರಿಕೊಂಡಿರುವ ಮೇರೆಗೆ ಸುಳ್ಯ -ಕೊಯನಾಡು ರೂಟ್ ನಿಂದ ಡ್ರೈವರ್ ಗಫೂರ್ ರನ್ನು ಬದಲಾಯಿಸಿದ್ದಾರೆಂದು ತಿಳಿದು ಬಂದಿದೆ.
ಘಟನೆಯ ಕುರಿತು ಸುಳ್ಯ‌ ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳನ್ನು ಸಂಪರ್ಕಿಸಿ ವಿಚಾರಿಸಿದಾಗ, ಡ್ರೈವರ್ ವಿರುದ್ಧ ದೂರು ಬಂದಿರುವುದು ಹೌದು. ಅದಕ್ಕಾಗಿ ಅವರ ರೂಟ್ ಬದಲಾವಣೆ ಮಾಡಲಾಗಿದೆ ಎಂದು‌ ತಿಳಿಸಿದ್ದಾರೆ.
ಸುಳ್ಯ ಕೊಯನಾಡು ನಗರ ಸಂಚಾರಿ ಬಸ್ಸು ಜನರಿಗೆ ಅನುಕೂಲ ಸೌಕರ್ಯವಾಗಿದೆ..
ಇತ್ತೀಚೆಗೆ ಈ ಬಸ್ಸೀನಲ್ಲಿ ಚಾಲಕರಾಗಿ ಕಲ್ಲುಗುಂಡಿ ಗಫೂರ್ ಎಂಬವರು ಕರ್ತವ್ಯದಲ್ಲಿ ಇದ್ದು ಪ್ರಯಾಣಿಕರಿಗೆ ತುಂಬಾ ಕಿರಿಕಿರಿ ಕೊಡುವ ಚಾಲಕರಾಗಿದ್ದಾರೆ.ಜನರು ನಿಂತಲ್ಲಿ ನಿಲ್ಲಿಸದೆ ಸುಮಾರು ಸಾವಿರ ಮೀಟರ್ ದೂರದಲ್ಲಿ ನಿಲ್ಲಿಸುದು, ಇಳಿಸುವಾಗ ಜಾಗದಲ್ಲಿ ಇಳಿಸಿದೆ ಹತ್ತು ನಿಮಿಷ ನಡೆಯುವಷ್ಟು ದೂರದಲ್ಲಿ ನಿಲ್ಲಿಸುವುದು ಈತನ ಚಾಳಿಯಾಗಿದೆ.ಹಲವು ಬಾರಿ ಆತನಿಗೆ ಹೇಳಿದರು ಇಲಾಖೆಗೆ ದೂರು ನೀಡಿದರು ಪ್ರಯೋಜನವೇ ಆಗಿಲ್ಲ. ಇತ್ತೀಚಿನ ದಿನಗಳಿಂದ ಹಿಂಬದಿಯ ಬಾಗಿಲು ತೆರೆಯಾದೆ ಎದುರಿನ ಎಷ್ಟು ಜನ ಇದ್ದರು ಹತ್ತಬೇಕು..ಇಂದು ಇದೆ ವಿಚಾರಕ್ಕೆಚಾಲಕನ ಜೊತೆ ಚರ್ಚೆ ಮಾಡಿದರು ಪ್ರಯಾಣಿಕರಿಗೆ ಗೌರವ ಕೊಡದೆ ಉದ್ದಟತನದಿಂದ ಅಹಂಕಾರದಿಂದ ಮೆರೆಯುತ್ತಿದ್ದಾನೆ.ಇಂಥ ಚಾಲಕರನ್ನು ದಯಮಾಡಿ ವರ್ಗಾಯಿಸಬೇಕಾಗಿ ಸಂಪಾಜೆಯ ರುಮಲ ಸೋನ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

Leave a Comment

Your email address will not be published. Required fields are marked *

error: Content is protected !!
Scroll to Top