ಮದುವೆ ವಾಹನ ಅಪಘಾತದಲ್ಲಿ ಗಾಯಗೊಂಡಿದ್ದ ಓರ್ವ ವ್ಯಕ್ತಿ ಸಾವು

ಸಕಲೇಶಪುರ ತಾಲೂಕಿನ ವನಗೂರಿನಿಂದ ಮದುವೆಗೆಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುತ್ತಿದ್ದ ವ್ಯಾನ್ ಚಾಲಕ‌ ನಿಯಂತ್ರಣ ತಪ್ಪಿ ಬಿಸಿಲೆ ಘಾಟ್ ಸಮೀಪ 20 ಅಡಿ ಎತ್ತರದಿಂದ ಮಗುಚಿ ಬಿದ್ದ ಘಟನೆ ಅ.30ರ ಗುರುವಾರ ಬೆಳಿಗ್ಗೆ ನಡೆದಿದ್ದು, ಈ ಪರಿಣಾಮ ಓರ್ವ ಮೃತಪಟ್ಟು, 6 ಜನರ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಶಿವರಾಜ್ ( 50) ಮೃತಪಟ್ಟವರು.
ಈ ವಾಹನದಲ್ಲಿ ಒಟ್ಟು ಸುಮಾರು 30 ಮಂದಿಯಿದ್ದು, 20 ಮಂದಿ ಗಾಯಗೊಂಡಿದ್ದು, ಇದರಲ್ಲಿ 7 ಮಂದಿಗೆ ಗಂಭೀರ ಗಾಯಗಳಾಗಿತ್ತು. ಅವರಲ್ಲಿ ಶಿವರಾಜ್ ಎಂಬವರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮದುವೆ ಸಂಭ್ರಮದಲ್ಲಿ ಇರಬೇಕಾದವರು ಶೋಕದಲ್ಲಿ‌ ಕಾಲ ಕಳೆಯುವಂತಾಗಿ .ಗಾಯಗೊಂಡ 20 ಮಂದಿಯನ್ನು ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top