ಸಂಪಾಜೆ ಗ್ರಾಮದ ಪೆರುಂಗೊಡಿ ಹಾಗೂ ದರ್ಕಾಸ್ ಕೊಪ್ಪತಕಜೆ ರಸ್ತೆ ಕಾಂಕ್ರಿಟ್ ಕಾಮಗಾರಿಗೆ 65 ಲಕ್ಷ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಯೋಜನೆಯಡಿ ರಸ್ತೆ ಕಾಂಕ್ರಿಟ್ ಕಾಮಗಾರಿಗೆ ತಲಾ 20ಲಕ್ಷದಂತೆ 2 ರಸ್ತೆಗಳಿಗೆ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ ಮುಖಾಂತರ 40ಲಕ್ಷ ಮಂಜೂರಾಗಿದ್ದು ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ರವರು ಅಭಿವೃದ್ಧಿ ಕಾರ್ಯಕ್ಕೆ ರಾಜಕೀಯ ಸಲ್ಲದು, ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಅನುದಾನ ದೊರಕಿಸಿಕೊಟ್ಟ ಟಿ ಎಂ ಶಾಹಿದ್ ತೆಕ್ಕಿಲ್ ರವರಿಗೆ ಅಭಿನಂದನೆ ಎಂದು ಹೇಳಿದರು. ನನಗೆ ತಾಲೂಕಿನಾದ್ಯಂತ ಅನುದಾನ ಹಂಚಿಕೆ ಮಾಡಬೇಕು ಸಂಪಾಜೆ ಗ್ರಾಮಕ್ಕೆ ಹಂತ ಹಂತವಾಗಿ ಅನುದಾನ ನೀಡುವ ಭರವಸೆ ನೀಡಿದರು. ತೀರಾ ಹಿಂದುಳಿದ ಮೂಲೆ ದರ್ಕಾಸ್ ರಸ್ತೆಗೆ 5 ಲಕ್ಷ ರೂಪಾಯಿ ಅನುಧಾನ ನೀಡುವುದಾಗಿ ಭರವಸೆ ನೀಡಿದರು.
ಕರ್ನಾಟಕ ಸರ್ಕಾರದ ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ ಸಲಹಾ ಸಮಿತಿ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಮಾತನಾಡಿ ಸಂಪಾಜೆ ಗ್ರಾಮದ ಪ್ರತಿಯೊಂದು ಕಡೆ ರಸ್ತೆ ಅಭಿವೃದ್ಧಿ ಪಡಿಸಲು ಹಾಗೂ ಜನರ ಜೀವನ ಮಟ್ಟ ಸುಧಾರಣೆಗೆ ನಮ್ಮ ಸರಕಾರ ಬದ್ಧವಾಗಿದೆ. ಸರಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನ ಮಾಡುವ ಮೂಲಕ ಜನರ ಸಹ ಬಾಗಿತ್ವ ಕೂಡ ಅಸ್ಟೇ ಬೇಕು ಜನರು ಸಾರ್ವಜನಿಕ ಆಸ್ತಿ ಹಾಳಾಗದಂತೆ ಎಚ್ಚರ ವಹಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮತಿ ಶಕ್ತಿವೇಲು ವಹಿಸಿದ್ದರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎಸ್ ಕೆ ಹನೀಫ್ ಸಂಪಾಜೆ ಮಾಜಿ ಅಧ್ಯಕ್ಷರುಗಳಾದ ಜಿ ಕೆ ಹಮೀದ್ ಗೂನಡ್ಕ, ಸುಂದರಿ ಮುಂಡಡ್ಕ, ಜಗದೀಶ್ ರೈ, ಲಿಸ್ಸಿ ಮೊನಾಲಿಸಾ ವಿಮಲಾ ಪ್ರಸಾದ್ ಅನುಪಮ ವಿಜಯ ಕುಮಾರ್ ಅಲಡ್ಕ ರಜನಿ ಶರತ್, ಅಬುಸಾಲಿ ಗೂನಡ್ಕ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜ. ಸೊಸೈಟಿ ಉಪಾಧ್ಯಕ್ಷರಾದ ಯಮುನಾ ಬಿ ಎಸ್, ಸೊಸೈಟಿ ನಿರ್ದೇಶಕರಾದ ಗಣಪತಿ ಭಟ್, ಗ್ಯಾರಂಟೀ ಅನುಷ್ಠಾನ ಸಮಿತಿ ಸದಸ್ಯರಾದ ಕಾಂತಿ. ಆಶಾ ವಿನಯ್ ಕುಮಾರ್, ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗದ ಮುಖ್ಯಸ್ಥ ರಾದ ಫಯಾಜ್. ಮಣಿಕಂಠ, ಮಾಜಿ ಪಂಚಾಯತ್ ಸದಸ್ಯರುಗಳಾದ ಜಿ ರಾಮಚಂದ್ರ, ತಾಜ್ ಮಹಮ್ಮದ್,. ನಾಗೇಶ ಪಿ. ಆರ್. ಅರಂತೋಡು ಪಂಚಾಯತ್ ಅಧ್ಯಕ್ಷರಾದ ಕೇಶವ ಆಡ್ತಲೆ. ಅರಂತೋಡು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ ಚಿದಾನಂದ ಮಾಸ್ಟರ್, ನಿವೃತ ಯೋದರಾದ ,ಲಕ್ಷ್ಮಿ ನಾರಾಯಣ ಸತ್ಯಜಿತ್, ಪಿ.ಎ.ಅಬ್ದುಲ್ಲ ಕೊಪ್ಪತಕಜೆ, ಸತ್ಯ ಭಟ್ ಕೊಪ್ಪತಕಜೆ.ಇಬ್ರಾಹಿಂ ಟಿ.ಎ. ಪುಟ್ಟಯ್ಯ ಪೆರುಂಗೊಡಿ.ಸೌಮ್ಯ ಮೋಹಿನಿ ವಿಶ್ವನಾಥ್, ರುಕ್ಮಯ್ಯ ಗೌಡ. ವೆಂಕಪ್ಪ ಗೌಡ, ನಾರಾಯಣ ಪೆರುಂಗೊಡಿ. ಯಾಯ್ಯ ದೊಡ್ಡಡ್ಕ ಸಲೀಂ ದರ್ಕಾಸ್ ಮಹಮ್ಮದ್ ತೆಕ್ಕಿಲ್. ಅಶ್ರಫ್ ಪೇರಡ್ಕ. ಹ್ಯಾರೀಸ್ ಆರೀಫ್, ಕಲ್ನಾಡ್ ಮಹಮ್ಮದ್ ಕುಂಞಿ, ಅಂಗನವಾಡಿ ಕಾರ್ಯಕರ್ತೆ ಶಾರದಾ. ಮಧುಸೂದನ, ಅಮೀರ್ ದರ್ಕಾಸ್. ಸಲೀಂ ಪೆರುಂಗೊಡಿ. ದರ್ಕಾಸ್ ಆಯುಷ್ಮಾನ್ ಕೇಂದ್ರದ ಹರ್ಷಿತಾ. ಊರವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಗ್ರಾಮ ಪಂಚಾಯತಿ ಸದಸ್ಯರಾದ ಅಬುಸಾಲಿ ಸ್ವಾಗತಿಸಿ ಎಸ್ ಕೆ ಹನೀಫ್ ಸಂಪಾಜೆ ವಂದಿಸಿದರು.
ಸಂಪಾಜೆ ಗ್ರಾಮದ ದರ್ಕಾಸ್ ಹಾಗೂ ಪೆರುಂಗೊಡಿ ರಸ್ತೆ ಕಾಂಕ್ರಿಟ್ ಕಾಮಗಾರಿಗೆ ಶಿಲಾನ್ಯಾಸ

















