ಸುಳ್ಯದ ವಿಷ್ಣು ಸರ್ಕಲ್ ನಿವಾಸಿ ಶ್ರೀನಿವಾಸ್ ರವರ ಪುತ್ರ ದೀಪಕ್ ರವರು ನ.2ರಂದು ಸಂಜೆ ಮಡಿಕೇರಿಯಲ್ಲಿ ಹೃದಯಾಘಾತದಿಂದ ನಿಧನರಾದರು.
ಮೃತರು ಅವಿವಾಹಿತ ರಾಗಿದ್ದು ತಂದೆ ಶ್ರೀನಿವಾಸ್, ತಾಯಿ ಚಂದ್ರಿಕಾ, ಸಹೋದರ ಅನಿಲ್, ವಿನೋದ್ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.
ಇಂದು ಸಂಜೆ ತನ್ನ ಕಾರಿನಲ್ಲಿ ಗೆಳೆಯನೊಂದಿಗೆ ಮಡಿಕೇರಿಗೆ ಹೋಗಿದ್ದರು. ಅಲ್ಲಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ಮೃತರು ಸುಳ್ಯ ಶಾರದಾಂಬಾ ಸೇವಾ ಸಮಿತಿಯ ಸದಸ್ಯರಾಗಿ, ವಿಷ್ಣು ಸರ್ಕಲ್ ವೀರಕೇಸರಿ ಬಳಗದ ಪದಾಧಿಕಾರಿಯಾಗಿ ಉತ್ತಮ ಸಂಘಟಕರಾಗಿದ್ದರು. ಕಳೆದ ಕೆಲ ವರ್ಷಗಳ ಹಿಂದೆ ಅಂಬಟೆಡ್ಕದಲ್ಲಿ ರೆಡ್ ಬರ್ಡ್ ಹೆಸರಿನ ರೇಡಿಮಡ್ ವಸ್ತ್ರ ಮಳಿಗೆ ಹೊಂದಿದ್ದರು.ತನ್ನ ಸಂಗಡಿಗರೊಂದಿಗೆ ಆತ್ಮೀಯಯಿಂದ ಇದ್ದರು.ಮ್ರತ ದೇಹ ನಾಳೆ ಸುಳ್ಯಕ್ಕೆ ಆಗಮಿಸಲಿದೆ ಎಂದು ಅವರ ಆಪ್ತವಲಯ ತಿಳಿಸಿದೆ.
ಸುಳ್ಯ ವಿಷ್ಣು ಸರ್ಕಲ್ ನಿವಾಸಿ ದೀಪಕ್ ನಿಧನ

















