ಕನ್ನಡ ತುಂಬಾ ಸುಂದರವಾದ ಭಾಷೆ.ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೆ ಭಾಷೆ ಕನ್ನಡ ಎಂದು ಸುಳ್ಯ ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶ್ರೇಯಾ ಸುಳ್ಯ ಹೇಳಿದರು.
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ಹೋಬಳಿ ಘಟಕ ಆಶ್ರಯದಲ್ಲಿ ಅಮೃತ ಮಹೋತ್ಸವ ಸಮಿತಿ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಇವರ ಸಹಕಾರದೊಂದಿಗೆ ದಿ. ಯು. ಸು. ಗೌ ಸ್ಮರಣಾರ್ಥ ಸುಳ್ಯ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ನ.2ರಂದು ನಡೆದ ಸುಳ್ಯ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನದ ಸಮರೋಪ ಸಮಾರಂಭದಲ್ಲಿ ಅವರು ಸಮರೋಪ ಭಾಷಣ ಮಾಡಿದರು.
ನಾವು ಸ್ವಾತಂತ್ರ್ಯಗೊಂಡ ಬಳಿಕ ಇಂಗ್ಲಿಷ್ ವ್ಯಾಮೋಹ ಜಾಸ್ತಿಯಾಗಿ ಕನ್ನಡ ಮಾತನಾಡುವ ಜನರ ಸಂಖ್ಯೆ ಕಡಿಮೆಯಾಗಿದೆ.ಆಂಗ್ಲಭಾಷೆಯಲ್ಲಿನಾವು ಹೇಳಿದ ಹಾಗೆ ಬರೆಯಲಾಗುವುದಿಲ್ಲ.ಬರೆದ ಹಾಗೆ ಓದಲು ಆಗುವುದಿಲ್ಲ. ಹೇಳಿದ ಹಾಗೆ ಬರೆಯಲು ಓದಲು ಕನ್ನಡದಲ್ಲಿ ಮಾತ್ರ ಸಾಧ್ಯ. ಕನ್ನಡದ ಬಗ್ಗೆ ಪ್ರತಿಯೊಬ್ಬರಲ್ಲಿ ಜಾಗ್ರತಿ ಮೂಡಿದ್ದಾಗ ಕನ್ನಡ ಇನ್ನಷ್ಟು ಬೆಳೆಯಲು ಸಾಧ್ಯ.ಪ್ರತಿಯೊಬ್ಬರಲ್ಲಿ ನಾವು ಕನ್ನಡ ಮಾತಾನಾಡಿ ಕನ್ನಡ ಬೆಳೆಸೋಣ ಎಂದು ಅವರು ಹೇಳಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಪೆರಾಲು ರವರು ವಹಿಸಿದ್ದರು.
ವೇದಿಕೆಯಲ್ಲಿ ಸಮ್ಮೇಳಾನಧ್ಯಕ್ಷೆ ಪೌರ್ಣಮಿ,ಕ.ಸಾ.ಪ ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ, ಪ್ರಾಂಶುಪಾಲ ಮೋಹನ್ ಗೌಡ ಬೊಮ್ಮೆಟ್ಟಿ,ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಮಂಜುಳಾ ಬಡಿಗೇರ್, ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ಇದರ ಕೋಶಧಿಕಾರಿ ದಯಾನಂದ ಆಳ್ವ.ಕೆ,ಬಾಬು ಗೌಡ ಅಚ್ರಪ್ಪಾಡಿ, ಗೌರವ ಕಾರ್ಯದರ್ಶಿಗಳಾದ ತೇಜಸ್ವಿ ಕಡೆಪಳ,ಕ.ಸಾ.ಪ ಸುಳ್ಯ ಹೋಬಳಿ ಘಟಕದ ಕಾರ್ಯದರ್ಶಿ ಎ.ಅಬ್ದುಲ್ಲ,
ಚಂದ್ರಮತಿ ಕೆ, ರಾಮಚಂದ್ರ ಪಲ್ಲತ್ತಡ್ಕ, ಕೇಶವ ಸಿ.ಎ,ಸಿಆರ್ಪಿ ಮಮತಾ ಪಡ್ಡಂಬೈಲು, ಶಾಲಾ ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ,ಸಹಶಿಕ್ಷಕಿ ಮಮತಾ ಮೂಡಿತಾಯ, ಲತಾ ಶ್ರೀ ಸುಪ್ರೀತ್ ಮೋಂಟಡ್ಕ ಇತರರು ಉಪಸ್ಥಿತರಿದ್ದರು.
ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೆ ಭಾಷೆ ಕನ್ನಡ : ಶ್ರೇಯಾ ಸುಳ್ಯ

















