ಮಿಸೆಸ್ ಮಂಗಳೂರು ಸ್ಪರ್ಧೆಯಲ್ಲಿ ಕಿರೀಟ ತನ್ನದಾಗಿಸಿಕೊಂಡ ನೆಲ್ಯಾಡಿಯ ಯುವತಿ

ದುಬೈನಲ್ಲಿ ನಡೆದ ಮಿಸೆಸ್ ಮಂಗಳೂರು ದಿವಾ 2025 ಸ್ಪರ್ಧೆಯಲ್ಲಿ ಕಡಬ ತಾಲೂಕಿನ ನೆಲ್ಯಾಡಿ ನಿವಾಸಿ ಮಿನು ಜೋಸ್ ಅವರು ಈ ಬಾರಿಯ ಕಿರೀಟ ತನ್ನದಾಗಿಸಿಕೊಂಡಿದ್ದಾರೆ‌.
ಪ್ರಿಯಾ ಫ್ಯಾಶನ್ಸ್ ಸಂಸ್ಥೆ ಈ ಸ್ಪರ್ಧೆಯನ್ನು ಗೋಶನ್ ಈವೆಂಟ್ ಮೀಡಿಯಾ ಸಹಯೋಗದೊಂದಿಗೆ ಹಮ್ಮಿಕೊಂಡಿತ್ತು.ಆಕರ್ಷಕ ವೇಷಭೂಷಣ, ಆತ್ಮ ವಿಶ್ವಾಸಭರಿತ ಪ್ರದರ್ಶನ, ಸರಳ ವ್ಯಕ್ತಿತ್ವದಿಂದ ಮಿನು ಜೋಸ್ ಅವರು ದುಬೈ ತೀರ್ಪುಗಾರರ ಮೆಚ್ಚುಗೆ ಗಳಿಸಿದರು.
ಈ ಸ್ಪರ್ಧೆಯಲ್ಲಿ ನಯನಾ ಶೆಟ್ಟಿ ಫಸ್ಟ್ ರನ್ನರ್ ಅಪ್ ಹಾಗೂ ಅಶ್ಮಿತಾ ಕೊಟ್ಯಾನ್ ಸೆಕೆಂಡ್ ರನ್ನರ್ ಅಪ್ ಆದರು. ಮಿಸ್ ವಿಭಾಗದಲ್ಲಿ ತನುಶ್ರೀ ಶೆಟ್ಟಿ ವಿಜೇತೆ ಆಗಿ, ಶೆರ್ಲಿ ಕ್ರಾಸ್ತಾ ಫಸ್ಟ್ ರನ್ನರ್ ಅಪ್ ಮತ್ತು ಸಿಂಥಿಯಾ ಡಿ’ಸೋಝಾ ಸೆಕೆಂಡ್ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಮಂಗಳೂರು ಮೂಲದ ಪ್ರತಿಭೆಗಳಿಗೆ ತಮ್ಮ ಕಿರೀಟದ ಕನಸನ್ನು ನನಸು ಮಾಡಿಕೊಳ್ಳಲು ಈ ವೇದಿಕೆ ಮತ್ತೊಮ್ಮೆ ಸಾಕ್ಷಿಯಾಯಿತು. ಇವರ ಈ ಸಾಧನೆ ವಿದೇಶದಲ್ಲಿರುವ ಕರಾವಳಿ ಮಹಿಳೆಯರಿಗೆ ಪ್ರೇರಣೆಯಾದಂತಾಗಿದೆ.
ಕೊಕ್ಕಡ ಸಮೀಪದ ಶಿಶಿಲದಲ್ಲಿ ಜನಿಸಿದ ಮಿನು ಜೋಸ್, ನೆಲ್ಯಾಡಿಯ ಯುವಕನನ್ನು ವಿವಾಹವಾಗಿದ್ದು, ಪ್ರಸ್ತುತ ದುಬೈನಲ್ಲಿ ವಾಸವಾಗಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top