ಸುಳ್ಯದ ಅಮರ ಶಿಲ್ಪಿ ಡಾ.ಕುರುಂಜಿ ವೆಂಕಟರಮಣ ಗೌಡರ ದ್ವಿತೀಯ ಪುತ್ರ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಕಮಿಟಿ ಬಿ ಇದರ ಅಧ್ಯಕ್ಷ ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ. ಅವರು ಸೇವಾ ರೂಪದಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆ ಮಾಡಲಿರುವ ಬೆಳ್ಳಿರಥ ಯಾತ್ರೆಗೆ ಸೆ.4ರಂದು ಬೆಳಿಗ್ಗೆ ಕೋಟೇಶ್ವರದಲ್ಲಿ ಚಾಲನೆ ನೀಡಲಾಗಿದೆ.
ಧಾರ್ಮಿಕ ವಿಧಿ ವಿಧಾನಗಳ ಮೂಲಕ ಡಾ.ರೇಣುಕಾಪ್ರಸಾದ್ ಕೆ.ವಿ. ಹಾಗೂ ಮನೆಯವರಿಗೆ ರಥ ಹಸ್ತಾಂತರ ಮಾಡುವ ಕಾರ್ಯಕ್ರಮ ಶ್ರದ್ದಾ ಭಕ್ತಿಯಿಂದ ನಡೆಯಿತು. ರಥಯಾತ್ರೆಗೆ ಉಡುಪಿ, ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಿದರು.ಡಾ.ರೇಣುಕಾಪ್ರಸಾದ್ ಕೆ.ವಿ, ಡಾ.ಜ್ಯೋತಿ ಆರ್.ಪ್ರಸಾದ್, ಡಾ.ಅಭಿಜ್ಞಾ, ಮೌರ್ಯ ಆರ್.ಕುರುಂಜಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಕೋಟೇಶ್ವರದ ರಥ ನಿರ್ಮಾಣದ ಶಿಲ್ಪಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ವಿವಿಧ ಧಾಮಿರ್ಕ ಕ್ಷೇತ್ರಗಳಲ್ಲಿ ಸ್ವಾಗತ, ಪುಷ್ಪಾರ್ಚನೆ ಸ್ವೀಕರಿಸಿ ಬಳಿಕ ಪೈಚಾರು ತಲುಪಲಿದೆ. ಪೂರ್ಣಕುಂಭದ ಸ್ವಾಗತದ ಬಳಿಕ ಭವ್ಯವಾದ ಮೆರವಣಿಗೆ ಮೂಲಕ ಶ್ರೀ ಚೆನ್ನಕೇಶವ ದೇವಸ್ಥಾನದ ವಠಾರಕ್ಕೆ ರಥ ಆಗಮಿಸಲಿದೆ.ಅಲ್ಲಿಂದ ಹೊರಟು ಗುತ್ಯಮ್ಮ ದೇವಳದಲ್ಲಿ ರಥ ತಂಗಲಿದೆ.
ಕೋಟೇಶ್ವರದಿಂದ ಹೊರಟ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆಯಾಗಲಿರುವ ಬೆಳ್ಳಿರಥ

















