ವೈಭದ ರಥಯಾತ್ರೆಯೊಂದಿಗೆ ಕುಕ್ಕೆ ಪುರಸ್ಪರ್ಶ ಮಾಡಿದ ಬೆಳ್ಳಿ ರಥ

ಸುಬ್ರಹ್ಮಣ್ಯ : ಸುಳ್ಯದ ಡಾ‌.ರೇಣುಕಾಪ್ರಸಾದ್ ಕೆ.ವಿ. ಮತ್ತು ಮನೆಯವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಸೇವಾ ರೂಪದಲ್ಲಿ ಸಮರ್ಪಣೆ ಮಾಡುವ ಬೆಳ್ಳಿರಥ ಯಾತ್ರೆ ಬುಧವಾರ ಸಂಜೆ ಕುಕ್ಕೆ ಸುಬ್ರಹ್ಮಣ್ಯ ತಲುಪಿತು.
ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿ ದೇವಸ್ಥಾನದ ವತಿಯಿಂದ ಬೆಳ್ಳಿರಥ ಯಾತ್ರೆಗೆ ಪೂರ್ಣಕುಂಭ ಸ್ವಾಗತಿಸಲಾಯಿತು. ಅರ್ಚಕರು ಪೂಜೆ ಸಲ್ಲಿಸಿದರು. ಬಳಿಕ ದೇವಸ್ಥಾನದ ವರೆಗೆ ಮೆರವಣಿಗೆಯಲ್ಲಿ ಸಾಗಲಾಯಿತು. ದೇವಸ್ತಾನದ ಆನೆ ಯಶಸ್ವಿ ಮೆರವಣಿಗೆಯಲ್ಲಿ ಸಾಥ್ ನೀಡಿತು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ರೇಣುಕಾಪ್ರಸಾದ್ ಕೆ.ವಿ, ಡಾ.ಜ್ಯೋತಿ ಆರ್.ಪ್ರಸಾದ್, ಡಾ.ಅಭಿಜ್ಞಾ, ಮೌರ್ಯ ಆರ್.ಕುರುಂಜಿ, l ನಿತ್ಯಾನಂದ ಮುಂಡೋಡಿ, ಎನ್‌.ಎ.ರಾಮಚಂದ್ರ ಭರತ್ ಮುಂಡೋಡಿ, ಎಸ್.ಎನ್ ಮನ್ಮಥ, ಪಿ.ಸಿ.ಜಯರಾಮ, ಹರೀಶ್ ಕಂಜಿಪಿಲಿ,ಎ.ವಿ.ತೀರ್ಥರಾಮ, ಜಾಕೆ ಮಾಧವ ಗೌಡ, ವೆಂಕಟ್ ದಂಬೆಕೋಡಿ, ಚಂದ್ರ ಕೋಲ್ಟಾರ್, ಸಂತೋಷ್ ಜಾಕೆ, ಭವಾನಿಶಂಕರ ಅಡ್ತಲೆ, ಮಾಧವ ಬಿ.ಟಿ. ದಿನೇಶ್ ಮಡ್ತಿಲ, ಪ್ರಸನ್ನ ಕಲ್ಲಾಜೆ ಕಮಲಾಕ್ಷ ನಂಗಾರು, ಡಾ.ಮನೋಜ್‌, ಸಂತೋಷ್ ಕುತ್ತಮೊಟ್ಟೆ, ಮೋಹನ್ ರಾಮ್ ಸುಳ್ಳಿ ಶಾಫಿ ಕುತ್ತಮೊಟ್ಟೆ, ರಾಜು ಪಂಡಿತ್ , ಸುಪ್ರೀತ್ ಮೊಂಟಡ್ಕ, ಎಂ ವೆಂಕಪ್ಪ ಗೌಡ ಕೆವಿಜಿ ಶಿಕ್ಷಣ ಸಂಸ್ಥೆಗಳ ಪ್ರಮುಖರು, ಸಿಬ್ಬಂದಿಗಳು ಸೇರಿ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಸಮಿತಿ ಸದಸ್ಯರು, ಮಾಸ್ಟರ್ ಪ್ಲಾನ್ ಸದಸ್ಯರು, ದೇವಸ್ಥಾನದ ಇಒ ಅರವಿಂದ ಅಯ್ಯಪ್ಪ ಸುತಗುಂಡಿ, ಎಇಒ ಯೇಸುರಾಜ್, ಮತ್ತಿತರರು ಉಪಸ್ಥಿತರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top