ಸುಳ್ಯ :ವೇಟ್ಲಿಫ್ಟರ್ಸ್ ಸಂಸ್ಥೆ ಬೆಂಗಳೂರು ಮಾನ್ಯತೆಯೊಂದಿಗೆ ಸ್ಪೋಟ್ಸ್ ಎಂಡ್ ಆಟ್ಸ್ ಎಸೋಸಿಯೇಶನ್ಸುಳ್ಯ ವತಿಯಿಂದ ಸುಳ್ಯದ ಜೂನಿಯರ್ಕಾಲೇಜು ಮೈದಾನದಲ್ಲಿ ನ.7ರಿಂದ 9ರ ತನಕ ನಡೆದ ರಾಜ್ಯ ಮಟ್ಟದ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ ವರ್ಣರಂಜಿತ ತೆರೆ ಕಂಡಿದೆ. ಸುಳ್ಯ ರಾಷ್ಟ್ರ ಮಟ್ಟದ ಕ್ರೀಡೆಗಳನ್ನು ಹಮ್ಮಿಕೊಳ್ಳುತ್ತಿದ್ದು ರಾಜ್ಯ ಮಟ್ಟದ ವೇಟ್ ಲಿಪ್ಟಿಂಗ್ ಯಶಸ್ವಿಯಾಗಿ ನಡೆಯುವುದರ ಮೂಲಕ ಕ್ರೀಡಾ ಇತಿಹಾಸ ಪುಟದಲ್ಲಿ ಇದು ಮತ್ತೊಂದು ಹೊಸ ಭಾಷ್ಯ ಬರೆದಿದೆ.
ನ.9ರಂದು ಸಂಜೆ ಸಮರೋಪ ಸಮಾರಂಭ ನಡೆಯಿತು.
ಕೆ.ವಿ.ಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಿ.ವಿ ಲೀಲಾಧರ ಅಧ್ಯಕ್ಷತೆ ವಹಿಸಿ ಮಾತನಾಡಿ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಿರಿಯ ನ್ಯಾಯವಾದಿ ಹಾಗೂ ನಗರ ಪಂಚಾಯತ್ ಮಾಜಿ ಅಧ್ಯಕ್ಷ ವೆಂಕಪ್ಪ ಗೌಡ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕ್ರೀಡೆಯನ್ನು ಕ್ರೀಡಾಸ್ಪೂರ್ತಿಯಿಂದ ನೋಡಬೇಕು.ಕ್ರೀಡೆಗೆ ಸುಳ್ಯದ ಕೊಡುಗೆ ಅಪಾರವಾದುದು.ಸುಳ್ಯದಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡೆಗಳು ನಡೆಯುತ್ತಿರುತ್ತವೆ.ಗೆದ್ದವರು ಗೆಲ್ಲುತ್ತ ಹೋಗಿ ಸೋತವರು ಮತ್ತೆ ಗೆಲ್ಲಿ ಎಂದು ಹೇಳಿ ಶುಭ ಹಾರೈಸಿದರು.
ಪದ್ಮಶ್ರೀ ಪುರಸ್ಕೃತರಾದ ಗಿರೀಶ್ ಭಾರದ್ವಾಜ್, ಡಾ.ರಾಮ್ ಮೋಹನ್,ಭಾರತೀಯ ವೇಟ್ ಲಿಪ್ಟಿಂಗ್ ಫೇಡರೇಶನ್ ಗೌರವ ಕಾರ್ಯದರ್ಶಿ ಆನಂದೇ ಗೌಡ,ಸಮಾಜ ಸೇವಕ ರವಿಕಕ್ಕೆ ಪದ ವು,ವೇಟ್ ಲಿಪ್ಟಿಂಗ್ ಸಂಘಟನಾ ಸಮಿತಿ ಕೋಶಾಧಿಕಾರಿ ಆಶೋಕ ಪ್ರಭು,ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್,ಜೂನಿಯರ್ ಕಾಲೇಜು ಉಪಪ್ರಾಂಶುಪಾಲ ಪ್ರಕಾಶ ಮೂಡಿತ್ತಾಯ,ಸ್ಪೋಟ್ಸ್ ಆಟ್ಸ್ ಸಮಿತಿಯ ಜಾನ್ ವಿಲಿಯಂ ಲಸ್ರಾದೋ,ಕಾರ್ಯದರ್ಶಿ ಎ.ರಮೇಶ್,ಗೋಕುಲದಾಸ್,ಲತಾಮಧಸೂದನ,ಧೀರಾ ಕ್ರಾಸ್ತ,ರಾಮಚಂದ್ರ ಪಲ್ಲತ್ತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಾರಾಯಣ ಕೇಕಡ್ಕ ಸ್ವಾಗತಿಸಿದರು.ಸುನೀಲ್ ಕೇರ್ಪಳ ವಂದಿಸಿದರು.ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಉತ್ತಮ ಕ್ರೀಡಾ ಸಂಘಟನೆಯಿಂದ ರಾಜ್ಯ ಮಟ್ಟದ ಮಟ್ಟದ ವೇಟ್ ಯಶಸ್ವಿಯಾಗಿ ನಡೆಯಿತು.
ಸುಳ್ಯ: ರಾಜ್ಯ ಮಟ್ಟದ ವೇಟ್ ಲಿಫ್ಟಿಂಗ್ ಚಾಂಪಿಯನ್ಶಿಪ್ ಗೆ ವರ್ಣ ರಂಜಿತ ತೆರೆ

















