ಅರಂತೋಡು ಮೆಸ್ಕಾಂ ಶಾಖೆಯ ಪ್ರಭಾರ ಜೆ.ಇ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪರಶುರಾಮ ವಳಲಂಬೆ ರವರು ಲೈನ್ ದುರಸ್ತಿ ವೇಳೆ ಪವರ್ ಮ್ಯಾನ್ ಜತೆಗೆ ತಾನೂ ಕೂಡ ಕಂಬ ಹತ್ತಿ ಕೆಲಸ ನಿರ್ವಹಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನ.10 ರಂದು ಅರಂತೋಡು ಭಾಗಕ್ಕೆ ವಿದ್ಯುತ್ ಸಂಪರ್ಕಿಸುವ ಲೈನ್ ನಲ್ಲಿ ಅರಂಬೂರು ಸಮೀಪ ತುರ್ತು ದುರಸ್ತಿ ಆಗಬೇಕಿತ್ತು. ಆ ವೇಳೆಗೆ ಓರ್ವ ಸಿಬ್ಬಂದಿ ಮಾತ್ರ ಇದ್ದ ಹಿನ್ನೆಲೆಯಲ್ಲಿ ಪ್ರಭಾರ ಜೆ.ಇ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪರಶುರಾಮ ವಳಲಂಬೆ ಅವರು ಸಿಬ್ಬಂದಿ ಜತೆಗೆ ತಾನೂ ಕೂಡ ಕಂಬ ಏರಿ ಕೆಲಸ ನಿರ್ವಹಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. “ತನ್ನ ಕೆಲಸ ಏನಿದೆಯೋ ಅದನ್ನಷ್ಟೇ ಮಾಡುತ್ತೇನೆ” ಎಂದು ಇತರೆ ಕೆಲಸಗಳನ್ನು ಮಾಡಲು ಸಬೂಬು ಹೇಳಿ ದೂರ ಸರಿಯುವ ಜನರುಗಳೇ ಹೆಚ್ಚಾಗಿರುವ ಈಗಿನ ಕಾಲಘಟ್ಟದಲ್ಲಿ ತಾವೊಬ್ಬ ಅಧಿಕಾರಿಯಾಗಿದ್ದರೂ ಕೂಡ ಕಂಬವೇರಿ ಕೆಲಸ ಮಾಡಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ವಿದ್ಯುತ್ ಕಂಬವೇರಿ ವಿದ್ಯುತ್ ಲೈನ್ ದುರಸ್ತಿ ಮಾಡಿದ ಪ್ರಭಾರ ಜೆ.ಇ



































