ಭಾರತದ ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಯವರ ಜನ್ಮ ಶತಮಾನೋತ್ಸವ ಪ್ರಯುಕ್ತ ನ.19ರಂದು ಪುತ್ತೂರಿನಲ್ಲಿ ಅಟಲ್ ವಿರಾಸತ್ ಸಮಾವೇಶ ನಡೆಯಲಿದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ.
ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಅವರು ಮಾತನಾಡಿದರು. ದೇಶ ಕಂಡ ಅಪೂರ್ವ ರಾಷ್ಟ್ರಭಕ್ತ ಅಟಲ್ ಬಿಹಾರಿ ವಾಜಪೇಯಿ ಯವರ ಜನಶತಾಬ್ದಿ ಪ್ರಯುಕ್ತ ದೇಶಾದ್ಯಂತ ಅಟಲ್ ವಿರಾಸತ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.ಆ ದಿನ ಬೆಳಗ್ಗೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಮೆರವಣಿಗೆ ಆರಂಭವಾಗಿ ಪುತ್ತೂರು ಲಕ್ಷ್ಮೀವೆಂಕಟರಮಣ ದೇವಸ್ಥಾನದ ಬಳಿಯ ಮೈದಾನದಲ್ಲಿ ಸಮಾವೇಶ ನಡೆಯುವುದು ಎಂದು ವಿವರ ನೀಡಿದರು. ಅವರ ಆಡಳಿತದ ಅವಧಿಯಲ್ಲಿ ಗ್ರಾಮ ಸಡಕ್ ಅಂತ ಯೋಜನೆ ತಂದು ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿ ಗೆ ಮುನ್ನುಡಿ ಬರೆದಿದ್ದಾರೆ. ಅಲ್ಪ ಅವಧಿಯಲ್ಲೇ ಅತ್ಯುತ್ತಮ ಕಾರ್ಯ ನಡೆಸಿದ್ದಾರೆ. ಹಲವು ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಅಟಲ್ ವಿರಾಸತ್ ಹಮ್ಮಿಕೊಳ್ಳಲಾಗಿದೆ ಎಂದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪ್ರಮುಖರಾದ ವೆಂಕಟ್ ವಳಂಬೆ ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ವಿಜಯಕುಮಾರ್ ಮುಳುಗಾಡು, ವಿನಯಕುಮಾರ್ ಕಂದಡ್ಕ, ಪ್ರದೀಪ್ ಮನವಳಿಕೆ, ಶ್ರೀಕಾಂತ್ ಮಾವಿನಕಟ್ಟೆ, ಶಶಿಕಲಾ ಎ. ನೀರಬಿದಿರೆ, ಸುಬೋನ್ ಶೆಟ್ಟಿ ಮೇನಾಲ, ಕುಸುಮಾಧರ ಎ.ಟಿ., ನಾರಾಯಣ ಶಾಂತಿನಗರ, ಬಾಲಸುಬ್ರಹ್ಮಣ್ಯ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ನ.19ಕ್ಕೆ ಪುತ್ತೂರಿನಲ್ಲಿ ಅಟಲ್ ವಿರಾಸತ್ ಸಮಾವೇಶ

















