ರೇಬಿಸ್ ಕಾಯಿಲೆಗೊಳಗಾದ ಮಹಿಳೆ ಸಾವು

ಸಂಪಾಜೆ ಗ್ರಾಮದ ನೆಲ್ಲಿಕುಮೇರಿ ನಿವಾಸಿಯ ಮಹಿಳೆಯೊಬ್ಬರು ರೇಬಿಸ್ ಕಾಯಿಲೆಗೆ ತುತ್ತಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ನ.14 ರಂದು ರಾತ್ರಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಕಲ್ಲುಗುಂಡಿಯ ನೆಲ್ಲಿಕುಮೇರಿಯ ಕುಂಬೆ (57 ವರ್ಷ ) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ.
ಕುಂಬೆಯವರು ಕೆಲಸಕ್ಕೆ ಹೋಗುವ ವೇಳೆ ಇತ್ತೀಚೆಗೆ ನಾಯಿಯೊಂದು ಕಚ್ಚಿತ್ತು. ನಾಯಿ ಕಚ್ಚಿದ್ದನ್ನು ಮನೆಯಲ್ಲಿ ಯಾರಿಗೂ ತಿಳಿಸದೆ ಮಹಿಳೆ ಟಿಟಿ ಇಂಜೆಕ್ಷನ್ ಚುಚ್ಚಿಸಿಕೊಂಡು ಸುಮ್ಮನಾಗಿದ್ದರು. ಆದರೆ 40 ದಿನದ ಬಳಿಕ ಅವರಲ್ಲಿ ರೇಬಿಸ್ ಲಕ್ಷಣ ಕಾಣಿಸಿಕೊಂಡಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಪಡಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನ.14 ರಂದು ರಾತ್ರಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ಮಕ್ಕಳಾದ ಶಶಿ, ಸತೀಶ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top