ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಪಂಜ ಹೋಬಳಿ ಘಟಕ ಸಾಹಿತ್ಯ ಸಮ್ಮೇಳನ ಸಂಘಟನಾ ಸಮಿತಿ
ಆಶ್ರಯದಲ್ಲಿ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಾಲಯದ ವಠಾರದ ಸರೋಜಿನಿ ಗಂಗಯ್ಯ ಮುಳುಗಾಡು ವೇದಿಕೆ,ಯು.ಸು ಗೌಡ ಸಭಾಂಗಣದಲ್ಲಿ ನ.16ರಂದು ನಡೆದ ಪಂಜ ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನದ ಅಂಗವಾಗಿ ವಿಚಾರಗೋಷ್ಠಿ ನಡೆಯಿತು.
ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಬಾಳಿಲ ವಿದ್ಯಾಭೋದಿನಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಶಿವರಾಮ ಶಾಸ್ತ್ರಿ ಆಚಳ್ಳಿ ವಹಿಸಿದ್ದರು. ಕೃಷಿ ವಿಜ್ಞಾನಿಗಳು ಹಾಗೂ ಅವೆಂಚುರ ಆಕ್ರೋ ಪ್ರಾಡಕ್ಟ್ ವ್ಯವಸ್ಥಾಪಕ ನಿರ್ದೇಶಕರಾದ ಡಾ| ಬಿ.ಕೆ ವಿಶುಕುಮಾರ್ “ಕೃಷಿ ಸಮಸ್ಯೆಗಳು ಮತ್ತು ಪರಿಹಾರಗಳು” ವಿಷಯದ ಬಗ್ಗೆ ಹಾಗೂ ಮ್ಯಾನೇಜೆಂಟ್ ಕನ್ಸಲ್ಟಂಟ್ ಧಿರೇನ್ ಪರಮಲೆ “ಧರ್ಮ ಮತ್ತು ಸಾಹಿತ್ಯ” ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ವಿಜೇಶ್ ಹಿರಿಯಡ್ಕ ಸ್ವಾಗತಿಸಿ ರಮೇಶ್ ಮೆಟ್ಟಿನಡ್ಕ ಧನ್ಯವಾದ ಸಮರ್ಪಿಸಿದರು.ಸಮ್ಮೇಳನದ ಸರ್ವ ಅಧ್ಯಕ್ಷ ಎ.ಕೆ ಹಿಮಕರ,ಸಂಘಟನಾ ಸಮಿತಿ ಅಧ್ಯಕ್ಷ ವೆಂಕಟ್ ದಂಬೆಕೋಡಿ ಇತರರು ಉಪಸ್ಥಿತರಿದ್ದರು.



































