ವಳಲಂಬೆ : ಸಾಹಿತ್ಯ ಸಮ್ಮೇಳನದಲ್ಲಿ ಮನರಂಜಿಸಿದ ಗೀತ ಗಾಯನ ಮತ್ತು ವಿದ್ಯಾರ್ಥಿ ಕವಿಗೋಷ್ಠಿ

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಪಂಜ ಹೋಬಳಿ ಘಟಕ ಸಾಹಿತ್ಯ ಪರಿಷತ್, ಸಾಹಿತ್ಯ ಸಮ್ಮೇಳನ ಸಂಘಟನಾ ಸಮಿತಿ ಆಶ್ರಯದಲ್ಲಿ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಾಲಯದ ವಠಾರದ ಸರೋಜಿನಿ ಗಂಗಯ್ಯ ಮುಳುಗಾಡು ವೇದಿಕೆ,ಯು.ಸು ಗೌಡ ಸಭಾಂಗಣದಲ್ಲಿ ನ.16ರಂದು ನಡೆದ ಪಂಜ ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದ ಅಂಗವಾಗಿ ಗೀತ-ಗಾಯನ ಕಾರ್ಯಕ್ರಮ ನಡೆಯಿತು.
ಸರ್ಕಾರಿ ಪ್ರೌಢಶಾಲೆ ಗುತ್ತಿಗಾರು, ಸರ್ಕಾರಿ ಪದವಿಪೂರ್ವ ಕಾಲೇಜು ಗುತ್ತಿಗಾರು, ಪಿ.ಎಂ.ಶ್ರೀ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗುತ್ತಿಗಾರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಳಲಂಬೆ, ಸರ್ಕಾರಿ ಪ್ರೌಢಶಾಲೆ ಎಲಿಮಲೆ ಹಾಗೂ ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಂಜಿತ್ ಅಂಬೆಕಲ್ಲು ಕಾರ್ಯಕ್ರಮ ನಿರೂಪಣೆ ಮಾಡಿದರು. ಅಪರಾಹ್ನ ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ 9ನೇ ತರಗತಿಯ ಧೃತಿ.ಎಂ.ಜೆ ಮರಕತ ಇವರ ಅಧ್ಯಕ್ಷತೆಯಲ್ಲಿ ನಡೆದ ವಿದ್ಯಾರ್ಥಿ ಕವಿಗೋಷ್ಠಿಯಲ್ಲಿ ಗುತ್ತಿಗಾರು ಸರ್ಕಾರಿ ಪದವಿಪೂರ್ವ ಕಾಲೇಜಿನ 8ನೇ ತರಗತಿಯ ನಿತಾಶ್ರೀ.ಕೆ.ಆರ್, 10ನೇ ತರಗತಿಯ ಸುಜನ್.ಎ.ಜೆ, ಎಣ್ಣೂರು ಸರ್ಕಾರಿ ಪ್ರೌಢಶಾಲೆಯ 8ನೇ ತರಗತಿಯ ಅಮಿನಾ ಮರ್ಜಾನ, ಗುತ್ತಿಗಾರು ಸರ್ಕಾರಿ ಪದವಿಪೂರ್ವ ಕಾಲೇಜಿನ 8ನೇ ತರಗತಿಯ ಅಮಿನಾ ಮರ್ಜಾನ, ಗುತ್ತಿಗಾರು ಸರ್ಕಾರಿ ಪದವಿಪೂರ್ವ ಕಾಲೇಜಿನ 10ನೇ ತರಗತಿಯ ಧನ್ವಿತಾ, ಎಣ್ಣೂರು ಸರ್ಕಾರಿ ಪ್ರೌಢಶಾಲೆಯ 8ನೇ ತರಗತಿಯ ಹಂಸಿನಿ, ಗುತ್ತಿಗಾರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ಮೇಘ.ಹೆಚ್.ಕೆ, 10ನೇ ತರಗತಿಯ ಸುಶ್ಮಿತಾ, ಎಣ್ಣೂರು ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿಯ ಯಜ್ಞ ಹಾಗೂ ಪಂಜ ಸರ್ಕಾರಿ ಪದವಿಪೂರ್ವ ಕಾಲೇಜಿನ 8ನೇ ತರಗತಿಯ ಜಾಹ್ನವಿ.ಎಂ ಭಾಗವಹಿಸಿದ್ದರು. ಕುಶಾಲಪ್ಪ ತುಂಬತ್ತಾಜೆ ಸ್ವಾಗತಿಸಿ ತೇಜಪ್ಪ ಸಂಪ್ಯಾಡಿ ಧನ್ಯವಾದ ಸಮರ್ಪಣೆ ಮಾಡಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top