ಬೇರೆ ಪಕ್ಷದಿಂದ ಬಂದವರು ಸಂಪಾಜೆ ಗ್ರಾಮದಲ್ಲಿ ನೈಜ ಕಾಂಗ್ರೆಸ್ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ : ಜಿ.ಕೆ ಹಮೀದ್

ಬೇರೆ ಬೇರೆ ಪಕ್ಷದಿಂದ ಬಂದು ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡವರು ಸಂಪಾಜೆ ಗ್ರಾಮದಲ್ಲಿ ನೈಜ ಕಾಂಗ್ರೆಸ್ ಕಾರ್ಯಕರ್ತರಿಗೆ ತೊಂದರೆ ಕೊಟ್ಟು ಕಡೆಗಣಿಸುತ್ತಿದ್ದಾರೆ. ಎಂದು ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಜಿ.ಕೆ ಹಮೀದ್ ಆರೋಪಿಸಿದ್ದಾರೆ.
ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ನ.18ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಸಂಪಾಜೆ ಗ್ರಾಮದಲ್ಲಿ ನಮಗೆ ಮುಂದಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷ ಅವಕಾಶ ಮಾಡಿ ಕೊಡುತ್ತದೆ ಎಂಬ‌ ಆತ್ಮ ವಿಶ್ವಾಸ ನನಗಿದೆ.ನಾನು ಕೂಡ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಯಾಗಿ ಸ್ಪರ್ಧಿಸುತ್ತೇನೆ.
ನಾವು ಅಭಿವೃದ್ಧಿಗೆ ಹೆಚ್ಚು ಗಮನ ಕೊಡುತ್ತೇವೆ. ಗ್ರಾಮಕ್ಕೆ ಯಾರೇ ಅನುದಾನ ತಂದರೂ ಅವರನ್ನು ಪಂಚಾಯತ್ ನಿಂದ ಗೌರವಿಸುತ್ತೇವೆ. ಟಿ.ಎಂ. ಶಹೀದ್ ರವರು ಅತೀ ಹೆಚ್ಚು ಅನುದಾನ ತರಿಸಿದ್ದಾರೆ. ಅವರನ್ನು ನಾವು ಗೌರವಿಸಿದ್ದೇವೆ‌,ಸನ್ಮಾನಿಸಿದ್ದೇವೆ. ಮುಂದೆ ಯಾರು ಬೇಕಾದರೂ ಅಭಿವೃದ್ಧಿಗೆ ಅನುದಾನ ತರಲಿ ನಾವು ಗೌರವಿಸುತ್ತೇವೆ. ಗುದ್ದಲಿ ಪೂಜೆ ಸಂದರ್ಭ ನಮ್ಮ ಕ್ಚೇತ್ರದ ಶಾಸಕರನ್ನು ಕರೆಯಬೇಕಾದದ್ದು ನಿಯಮ.ಹಾಗೆ ಅವರನ್ನು ಆಹ್ವಾನಿಸಿದ್ದೇವೆ‌.ನಮ್ಮ ಮೇಲೆ ಆರೋಪಗಳು ಇರಬಹುದು. ಆರೋಪ ಮಾಡುವವರು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯ ಇದೆ. ಅವರು ಬಾಲಿಶ ಹೇಳಿಕೆ ನೀಡುವುದು ಸರಿಯಲ್ಲ.
ಸಂಪಾಜೆ ಗ್ರಾಮದಲ್ಲಿ ವಲಯ ಕಾಂಗ್ರೆಸ್ ಎಂಬುದು ಇಲ್ಲ. ಗ್ರಾಮ ಕಾಂಗ್ರೆಸ್ ಮಾತ್ರ. ಅದು ಲಿಮಿಟೆಡ್ ಕಂಪನಿಯಂತೆ ಕೆಲಸ ಮಾಡುತ್ತಿದೆ.ನನ್ನನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಿಲ್ಲ ನನಗೆ ಯಾವುದೇ ಉಚ್ಚಾಟನೆಯ ಬಗ್ಗೆ ಪತ್ರವೇ ಬಂದಿಲ್ಲ. ಬ್ಲಾಕ್ ಸಭೆಗೆ ಅಲ್ಪಸಂಖ್ಯಾತ ಘಟಕ ಸಭೆಗೂ ನನ್ನನ್ನು‌ ಕರೆಯುತ್ತಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಾನು ನಮ್ಮ ಬೂತ್ ನಲ್ಲಿ ಕುಳಿತು‌ ಕೆಲಸ ಮಾಡಿದ್ದೇನೆ ಎಂದು ಅವರು ಹೇಳಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top