ಹೋರಿಗಳನ್ನು ಕಡಿದು ಮಾಂಸ ಮಾಡುತ್ತಿದ್ದ ಸ್ಥಳಕ್ಕೆ ಪೊಲೀಸ್ ದಾಳಿ

ಅಕ್ರಮವಾಗಿ ಜಾನುವಾರುಗಳನ್ನು ಕಡಿದು ಮಾಂಸ ಮಾಡುತ್ತಿದ್ದಾರೆಂಬ ಮಾಹಿತಿಯ ಮೇರೆಗೆ ಪೋಲೀಸರು ಐವತ್ತೊಕ್ಕು ಗ್ರಾಮದ ಕರಿಕ್ಕಳ ಶಾಲಾ ಬಳಿಯ ಗುಡ್ಡೆಗೆ ಪೊಲೀಸರು ದಾಳಿ ನಡೆಸಿದ್ದಾಗ ಆರೋಪಿಗಳು ಪರಾರಿಯಾದ ಘಟನೆ ವರದಿಯಾಗಿದೆ.
ನಾಲ್ವರು ಸ್ಥಳದಲ್ಲಿದ್ದ ದುಷ್ಕರ್ಮಿಗಳು ಮಾಂಸ ಮತ್ತಿತರ ವಸ್ತುಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಲು‌ ಯತ್ನಿಸಿದ್ದಾಗ ಬೆನ್ನಟ್ಟಿದ್ದ ಪೊಲೀಸರಿಗೆ ಒಬ್ಬ ಸಿಕ್ಕಿಬಿದ್ದಿರುವುದಾಗಿ ತಿಳಿದು ಬಂದಿದೆ.
ಐವತ್ತೊಕ್ಲು ಗ್ರಾಮದ ನಿಡ್ವಾಳ ಮತ್ತು ಕರಿಕ್ಕಳ ಶಾಲಾ ಸಮೀಪದ ಗುಡ್ಡೆಯೊಂದರಲ್ಲಿ ನಾಲ್ವರು ದುಷ್ಕರ್ಮಿಗಳು ಹೋರಿಗಳನ್ನು ತಂದು ಕಟ್ಟಿ ಹಾಕಿ ಕಡಿದು ಮಾಂಸ ಮಾಡುತ್ತಿದ್ದರೆನ್ನಲಾಗಿದೆ. ಈ ಮಾಹಿತಿ ತಿಳಿದ ಪೊಲೀಸರು ನ.18ರಂದು ದಾಳಿ ನಡೆಸಿದರು. ಪೊಲೀಸರನ್ನು ಕಂಡ ಕೂಡಲೇ ನಾಲ್ವರು ದುಷ್ಕರ್ಮಿಗಳೂ ನಾಲ್ಕು ದಿಕ್ಕಿಗೆ ಓಡಿದರೆನ್ನಲಾಗಿದೆ. ಪೋಲೀಸರೂ ಬೆನ್ನೆಟ್ಟಿದರು. ಪಡ್ಡಿನಂಗಡಿ ಸಮೀಪ ಓರ್ವ ಯುವಕ ಪೊಲೀಸರ ಕೈಗೆ ಸಿಕ್ಕಿಬಿದ್ದ ಆತ ಜಾನುವಾರುಗಳನ್ನು ಕಡಿದು ಮಾಂಸ ಮಾಡುತ್ತಿದ್ದ ಸ್ಥಳದ ಸಮೀಪದ ನಿವಾಸಿ ಹಮೀದ್ ಎಂದು ತಿಳಿದು ಬಂದಿದೆ. ಇತರ ಮೂವರು ಕಡಬ ಕಡೆಯವರು ಎನ್ನಲಾಗಿದ್ದು ಅವರು ಸಿಕ್ಕಿಲ್ಲ.
ಕಡಬ ಕಡೆಯ ವ್ಯಕ್ತಿಗಳು ಸ್ಥಳಕ್ಕೆ ಬಂದಿದ್ದ ಕಾರನ್ನು ಮತ್ತು ಸ್ಥಳದಲ್ಲಿ ಒಂದು ಹೋರಿಯನ್ನು ಕಡಿದು ಮಾಡಲಾಗಿದ್ದ ಸುಮಾರು 40 ಕೇಜಿಯಷ್ಟು ಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top