ಕೆ ಸೆಟ್ (ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ) 2025 ಪರೀಕ್ಷೆಯಲ್ಲಿ ಕುಮಾರಿ ಕೇತನ ಕೆ.ಎಸ್. ಇವರು ಗೃಹ ವಿಜ್ಞಾನ ( Home Science) ವಿಷಯ ದಲ್ಲಿ ಉತ್ತೀರ್ಣರಾಗಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿರುತ್ತಾರೆ. ಇವರು ಎನ್ ಟಿಎ ನಡೆಸಿದ ಯುಜಿಸಿ ನೆಟ್ ಪರೀಕ್ಷೆಯಲ್ಲೂ ಉತ್ತೀರ್ಣರಾಗಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಹರಾಗಿದ್ದಾರೆ. ಇವರು ಸುಳ್ಯ ತಾಲೂಕಿನ ಅಮರಮುಡ್ನೂರು ಗ್ರಾಮದ ಸುರೇಶ ಕೊರತ್ಯಡ್ಕ ಹಾಗೂ ಕಮಲಾಕ್ಷಿ ದಂಪತಿಗಳ ಪುತ್ರಿ. ಪ್ರಸ್ತುತ ಮಂಗಳೂರಿನ ಎಸ್.ಸಿ.ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಹಾರ ವಿಜ್ಞಾನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತನ್ನ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅಮರಪಡ್ನೂರು, ಫ್ರೌಢ ಶಿಕ್ಷಣವನ್ನು ಚೊಕ್ಕಾಡಿ ಫ್ರೌಢಶಾಲೆ ಕುಕ್ಕುಜಡ್ಕ, ಪಿಯುಸಿಯನ್ನು ಸರಕಾರಿ ಪದವಿಪೂರ್ವ ಕಾಲೇಜು ಸುಳ್ಯ, ಬಿ.ಎಸ್ಸಿಯನ್ನು ಮಿಲಾಗ್ರಿಸ್ ಕಾಲೇಜು ಮಂಗಳೂರು, ಎಂ.ಎಸ್ಸಿ (ಆಹಾರ ವಿಜ್ಞಾನ) ಮಂಗಳೂರು ವಿಶ್ವವಿದ್ಯಾಲಯ, ಕೊಣಾಜೆಯಲ್ಲಿ ಪೂರೈಸಿರುತ್ತಾರೆ.
ಹವ್ಯಾಸ : ಪುಸ್ತಕ ಓದುವುದು, ಪ್ರಬಂಧ ಬರೆಯುವುದು, ಭಾಷಣ, ಕಾರ್ಯಕ್ರಮ ನಿರೂಪಣೆ.. ಜಿಲ್ಲಾಮಟ್ಟದ ಬಾಲ್ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದಾರೆ.
ಕೆಸೆಟ್ ಪರೀಕ್ಷೆಯಲ್ಲಿ ಸುಳ್ಯದ ಕೇತನ ರಾಜ್ಯಕ್ಕೆ ಪ್ರಥಮ

















