ಆರಂತೋಡು ಗ್ರಾಮ ಪಂಚಾಯತ್ ಘನ ತಾಜ್ಯ ಘಟಕದ ಮರು ನಿರ್ಮಾಣಕ್ಕೆ ಗುದ್ದಲಿ ಪೂಜೆ

ಅರಂತೋಡು ಗ್ರಾಮ ಪಂಚಾಯತ್ ನ ಕೊಡಂಕೇರಿ ಯಲ್ಲಿಯ ಘನ ತ್ಯಾಜ್ಯ ಘಟಕ ಮರು ನಿರ್ಮಾಣಕ್ಕೆ ಮತ್ತು ಅದಕ್ಕೆ ಸಂಪರ್ಕಿಸುವ ಉದಯನಗರ- ಕೊಡಂಕೇರಿ ರಸ್ತೆಯ ಕಾಂಗ್ರಿಟಿಕರಣದ ಗುದ್ದಲಿ ಪೂಜೆ ಕಾರ್ಯಕ್ರಮ ನ 24 ರಂದು ನಡೆಯಿತು.ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಗುದ್ನಲಿ ಪೂಜೆ ನೆರವೇರಿಸಿದರು.ಅರಂತೋಡು ಗ್ರಾಮದಲ್ಲಿ ಅವ್ಯವಸ್ತೆಯಲ್ಲಿದ್ದ ಕಂದಾಯ ಕಚೇರಿ ಯನ್ನು ಗ್ರಾಮ ಪಂಚಾಯತ್ ಹಳೆ ಸಭಾ ಭವನಕ್ಕೆ ಸ್ಥಳಾಂತರಿಸಿ ನೂತನ ಕಚೇರಿಯನ್ನು ಶಾಸಕಿ ಭಾಗೀರಥಿ ಉದ್ಘಾಟನೆ ಮಾಡಿದರು.ಸುಮಾರು1.20 ಸಾವಿರ ವ್ಯಯ ಮಾಡಿ ಜನರ ಸಮಸ್ಯೆಗಳಿಗೆ ಗ್ರಾಮಪಂಚಾಯತ್ ಒಂದೇ ಸೂರಿನಡಿ ಯಲ್ಲಿ ಸಾರ್ವಜನಿಕರ ಸೌಲಭ್ಯಗಳು ತೊರೆಯುವಂತೆ ಕಚೇರಿಯನ್ನು ತೆರೆಯಲಾಯಿತು. ನಂತರ ಸಭಾ ಕಾರ್ಯಕ್ರಮದಲ್ಲಿ. ನಾಲ್ಕು ಮಂದಿ ಸಾಧಕರಾದ ಕೆ. ಆರ್ ಗಂಗಾಧರ, ಕರ್ನಾಟಕ ಸರಕಾರದ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ.ಎಂ.ಶಾಹೀದ್,ಫಾರೆಸ್ಟ್ ಸೀತಾರಾಮ,ಸಹಕಾರಿ ಸಂಘ ದ ಅಧ್ಯಕ್ಷ ಸಂತೋಷ್ ಕುತ್ತ ಮೊಟ್ಟೆ,ಇವರನು ತಹಸೀಲ್ದಾರ್ ಮಂಜುಳಾ, ಇ.ಒ.ರಾಜಣ್ಣ,ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಮೊದಲಾದವರು ಶಾಲು ಹೊದಿಸಿ ಪೇಟ ಸ್ಮರಣಿಕೆ ಫಲ ಪುಷ್ಪವನ್ನು ನೀಡಿ ಸನ್ಮಾನಿಸಿದರು.. ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ವಹಿಸಿದರು.ಸಭೆಯನ್ನು ಉದ್ದೇಶಿಸಿ ಇ ಓ ರಾಜಣ್ಣ ಮಾತನಾಡಿ. ಅರಂತೋಡು ಗ್ರಾಮ ಪಂಚಾಯತ್ ಕಾರ್ಯ ವೈಖರಿಯದ ಬಗ್ಗೆ ಶ್ಲಾಂಘನೆ ವ್ಯಕ್ತ ಪಡಿಸಿದರು.ತಹಸಿಲ್ದಾರ್ ಮಂಜುಳಾ ಶುಭ ಹಾರೈಸಿದರು.ಅಧ್ಯಕ್ಷ ಕೇಶವ ಅಡ್ತಲೆ ಮಾತನಾಡಿ ಸಹಕರಿಸದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಉದ್ಯೋಗ ಖಾತರಿ ಅಧಿಕಾರಿ ಸುಧಾಮ ಕೃಷ್ಣ ಉದ್ಯೋಗ ಖಾತರಿ ಬಗ್ಗೆ ಮಾತನಾಡಿದರು .ಸಭೆಯಲ್ಲಿ ಜನಪ್ರತಿನಿದಿನಗಳು ಅಧಿಕಾರಿಗಳು ಗ್ರಾಮಸ್ಥರು ಉಪಷ್ಟಿತಿದ್ದರು.ಉಪಾಧ್ಯಕ್ಷೆ ಭವಾನಿ ವಂದಿಸಿದರು.ಪಿಡಿಒ ಜಯಪ್ರಕಾಶ್ ಸ್ವಾಗತಿಸಿ ವಂದಿಸಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top