ಸುಳ್ಯ : ಚೆನ್ನಕೇಶವ ದೇವಳದಲ್ಲಿ ಡಾ.ವಿರೇಂದ್ರ ಹೆಗ್ಗಡೆಯವರ ಆರೋಗ್ಯಕ್ಕಾಗಿ ವಿಶೇಷ ಪ್ರಾರ್ಥನೆ

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯ ಖಾವಂದರ ಹುಟ್ಟು ಹಬ್ಬದ ಶುಭ ಸಂದರ್ಭದಲ್ಲಿ ನ.25ರಂದು ಸುಳ್ಯ ತಾಲೂಕಿನ ಸುಳ್ಯ ಶ್ರೀ ಚನ್ನಕೇಶವ ಸ್ವಾಮಿ ದೇವರಿಗೆ ವಿಶೇಷ ಅಲಂಕಾರ ಪೂಜೆ ಹಾಗೂ ಮಹಾಪೂಜೆ ಮತ್ತು ವಿಶೇಷ ಪ್ರಾರ್ಥನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತಾಭಿಮಾನಿಗಳ ಬಳಗ ಸುಳ್ಯ ವತಿಯಿಂದ ನೆರವೇರಿಸಲಾಯಿತು.
ಎಂ.ಬಿ ಫೌಂಡೇಶನ್ ನ ಅಧ್ಯಕ್ಷರಾದ ಎಂ.ಬಿ ಸದಾಶಿವ ರವರು ಸಭಾ ಕಾರ್ಯಕ್ರಮದಲ್ಲಿ ಪೂಜ್ಯರ ಆದರ್ಶಗಳು ಮತ್ತು ವಿವಿಧ ಸೇವಾ ಕೈಂಕರ್ಯಯಗಳ ಬಗ್ಗೆ ತಿಳಿಸಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಗಳಾದ ಸುಧಾಕರ್ ರೈ ರವರು ಶ್ರೀ ಕ್ಷೇತ್ರದ ಪೂಜ್ಯರಿಂದ ನಡೆಯಲ್ಪಡುವ ವಿವಿಧ ಸಾಮಾಜಿಕ ಚಟುವಟಿಕೆಗಳ ಬಗ್ಗೆ ತಿಳಿಸಿದರು
ಈ ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆ ಮೈಸೂರಿನ ನಿವೃತ್ತ ಪ್ರಾಂಶುಪಾಲರಾದ ಎಂ. ಬಾಲಚಂದ್ರ ರವರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ತಾಲೂಕ ಅಧ್ಯಕ್ಷರಾದ ಲೋಕನಾಥ ಅಮೆಚೂರು ರವರು, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ತಾಲೂಕಿನ ಅಧ್ಯಕ್ಷರಾದ ಸೋಮಶೇಖರ ಪೈಕ ರವರು ಕೇಂದ್ರ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷರಾದ ಬೂಡು ರಾಧಾಕೃಷ್ಣ ರೈ ರವರು ಜನಜಾಗೃತಿ ವೇದಿಕೆಯ ಸದಸ್ಯರಾದ ಪದ್ಮನಾಭ ಜೈನ್, ಜಾಲ್ಸುರು ವಲಯದ ಅಧ್ಯಕ್ಷರಾದ ಭಾಸ್ಕರ್ ಅಡ್ಕಾರ್ ರವರು ರವರು ಒಕ್ಕೂಟದ ವಲಯದ ಅಧ್ಯಕ್ಷರುಗಳಾದ ಮನೋಹರ್ ಹಾಗೂ ವೇದಶೆಟ್ಟಿ ರವರು ಹಾಗೂ ಒಕ್ಕೂಟದ ಅಧ್ಯಕ್ಷರುಗಳು ಪದಾಧಿಕಾರಿಗಳು ಹಾಗೂ 150 ಕ್ಕಿಂತಲೂ ಹೆಚ್ಚು ಶ್ರೀ ಕ್ಷೇತ್ರ ಧರ್ಮಸ್ಥಳದ ಭಕ್ತರು ಭಾಗವಹಿಸಿ ಪೂಜ್ಯರ ಆರೋಗ್ಯಕ್ಕಾಗಿ ಸಾಮೂಹಿಕ ಪ್ರಾರ್ಥನೆ ಮಾಡಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top