ಡಿ.21ಕ್ಕೆ‌‌ ಸುಳ್ಯದಲ್ಲಿ ಗೌಡರ ಯುವ ಸೇವಾ ಸಂಘ (ರಿ)ತಾಲೂಕು ಮಹಿಳಾ ಘಟಕ ವತಿಯಿಂದ ಮಹಿಳೆಯರ ಹಗ್ಗಜಗ್ಗಟ ಮತ್ತು ತ್ರೋಬಾಲ್ ಪಂದ್ಯಾಟ

ಸುಳ್ಯ:ಗೌಡರ ಯುವ ಸೇವಾ ಸಂಘ (ರಿ)ತಾಲೂಕು ಮಹಿಳಾ ಘಟಕ ವತಿಯಿಂದ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗೌಡ ಸಮುದಾಯದ ಮಹಿಳೆಯರ ಹಗ್ಗಜಗ್ಗಟ ಮತ್ತು ತ್ರೋಬಾಲ್ ಪಂದ್ಯಾಟ ‘ಗೌಡ ಮಹಿಳಾ ಕಪ್’ ಡಿ.21 ರಂದು ಸುಳ್ಯ ಯುವಜನ ಸಂಯುಕ್ತ ಮಂಡಳಿ ಬಳಿಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವಿನುತಾ ಪಾತಿಕಲ್ಲು ತಿಳಿಸಿದ್ದಾರೆ.
ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗೌಡ ಮಹಿಳೆಯರಿಗಾಗಿ ಪ್ರಥಮ ಭಾರಿಗೆ ಸುಳ್ಯದ ಗೌಡ ಮಹಿಳಾ ಘಟಕದಿಂದ ಹಗ್ಗಜಗ್ಗಾಟ ಮತ್ತು ತ್ರೋಬಾಲ್‌ ಪಂದ್ಯಾಟ ನಡೆಯಲಿದೆ ಎಂದು‌ ತಿಳಿಸಿದರು.
ಪತ್ರ ಚಿಕಾಗೋಷ್ಠಿಯಲ್ಲಿ ಮಹಿಳಾ ಘಟಕದ ಸ್ಥಾಪಕಾಧ್ಯಕ್ಷೆ ರೇಣುಕಾ ಸದಾನಂದ ಜಾಕೆ, ಕಾರ್ಯದರ್ಶಿ ಸವಿತಾ ಸಂದೇಶ್, ಮಹಿಳಾ ಕಪ್ ಸಂಚಾಲಕರಾದ ಬೀನಾ ಕರುಣಾಕರ ಅಡ್ಡಂಗಾಯ, ಜಯಲಕ್ಷ್ಮಿ ನಾರ್ಕೋಡು, ಸಹ ಸಂಚಾಲಕರಾದ ಮೀನಾಕ್ಷಿ ಸುಂದರ ರಾಮಕಜೆ, ಕುಸುಮಾ ಜನಾರ್ಧನ ಕೊಳಂಜಿರೋಡಿ ಉಪಸ್ಥಿತರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top