ಸಂಪಾಜೆ ಗ್ರಾಮದ ಗಡಿಕಲ್ಲು ಅಂಗನವಾಡಿ ಕೇಂದ್ರದಲ್ಲಿ ಎಲ್. ಕೆ. ಜಿ. ಯು. ಕೆ. ಜಿ.. ತರಗತಿ ಆರಂಭ

ಸಂಪಾಜೆ ಗ್ರಾಮದ ಗಡಿಕಲ್ಲು ಅಂಗನವಾಡಿ ಕೇಂದ್ರದಲ್ಲಿ ಕೇಂದ್ರದಲ್ಲಿ ಐ ಸಿ. ಡಿ ..ಎಸ್ ಯೋಜನೆಯಡಿ ಎಲ್ ಕೆ. ಜಿ. ಯು. ಕೆ. ಜಿ. ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು ದೀಪ ಬೆಳಗಿಸಿ ಉದ್ಘಾಟಿಸಿದರು. ಮಕ್ಕಳಿಗೆ ಪುಸ್ತಕವನ್ನು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ ಮಕ್ಕಳಿಗೆ ವಿತರಿಸಿದರು. ಪಂಚಾಯತ್ ಉಪಾಧ್ಯಕ್ಷರಾದ ಎಸ್ ಕೆ ಹನೀಫ್ ಸಂಪಾಜೆ. ಸ್ಮಾರ್ಟ್ ಕ್ಲಾಸ್ ದೂರದರ್ಶನ ಉದ್ಘಾಟಿಸಿದರು ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರು ಮೈಸೂರಿನಲ್ಲಿ 50 ವರ್ಷಗಳ ಹಿಂದೆ ಆರಂಬಿಸಿದ ಐ. ಸಿ. ಡಿ. ಎಸ್. ಯೋಜನೆಯ ಸುವರ್ಣಮಹೋತ್ಸವ ಅಂಗವಾಗಿ ಸುಳ್ಯ ತಾಲೂಕಿನ 169 ಅಂಗನವಾಡಿ ಪೈಕಿ 13 ಅಂಗನವಾಡಿ ಈ ಯೋಜನೆಗೆ ಆಯ್ಕೆ ಮಾಡಲಾಗಿದ್ದು ಸಂಪಾಜೆ ಗ್ರಾಮದ ಗಡಿಕಲ್ಲು ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕ್ರಮ ನಡೆಯಿತು
ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಸುಂದರಿ ಮುಂಡಡ್ಕ. ಬಾಲವಿಕಾಶ ಸಮಿತಿ ಅಧ್ಯಕ್ಷರಾದ ಶ್ರೀಮತಿ ರಮ್ಲತ್ . ಗ್ರಾಮ ಪಂಚಾಯತ್ ಸದಸ್ಯರಾದ ವಿಜಯ ಕುಮಾರ್. ಸದಸ್ಯರಾದ ರಜನಿ ಶರತ್, ಲತೀಫ್ ಎಸ್.ಪಿ. ಅಂಗನವಾಡಿ ಕಾರ್ಯಕರ್ತೆ ಶಿಲಾವತಿ ನೆಲ್ಲಿಕುಮೇರಿ ಅಂಗನವಾಡಿ ಕಾರ್ಯಕರ್ತೆ ಧರ್ಮಕಾಲ.ಆಶಾ ಕಾರ್ಯಕರ್ತೆ ಸೌಮ್ಯ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top