ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕದ ಅಧ್ಯಕ್ಷರಾಗಿ ಯಶ್ವಿತ್ ಕಾಳಮನೆ ಆಯ್ಕೆ

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕದ ವಾರ್ಷಿಕ ಮಹಾಸಭೆಯು ಸುಳ್ಯ ತಾಲೂಕು ಘಟಕದ ಅಧ್ಯಕ್ಷೆ ಜಯಶ್ರೀ ಕೊಯಿಂಗೋಡಿ ಅಧ್ಯಕ್ಷತೆಯಲ್ಲಿ ನ.28 ರಂದು ನಡೆಯಿತು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ಜಿಲ್ಲಾ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್‌, ಕೆಜೆಯು ತಾಲೂಕು ಅಧ್ಯಕ್ಷೆ ಜಯಶ್ರೀ ಕೊಯಿಂಗೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯದರ್ಶಿ ಗಣೇಶ್ ಕುಕ್ಕುದಡಿ
ವರದಿ ವಾಚಿಸಿ, ಕೋಶಾಧಿಕಾರಿ ಕುಶಾಂತ್ ಕೊರತ್ಯಡ್ಕ ಲೆಕ್ಕಪತ್ರ ಮಂಡಿಸಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಈ ಸಂದರ್ಭದಲ್ಲಿ ಮುಂದಿನ 2025-26 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಜಿಲ್ಲಾ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್ ನಡೆಸಿಕೊಟ್ಟರು. ಗೌರವಾಧ್ಯಕ್ಷರಾಗಿ ಜಯಶ್ರೀ ಕೊಯಿಂಗೋಡಿ, ಅಧ್ಯಕ್ಷರಾಗಿ ಯಶ್ವಿತ್ ಕಾಳಮ್ಮನೆ, ಕಾರ್ಯದರ್ಶಿಯಾಗಿ ಶ್ರೀಜಿತ್ ಸಂಪಾಜೆ, ಕೋಶಾಧಿಕಾರಿಯಾಗಿ ಅನಿಲ್ ಕಳಂಜ, ಉಪಾಧ್ಯಕ್ಷರಾಗಿ ಶ್ರೀಧರ ಕಜೆಗದ್ದೆ, ಶಿವರಾಮ ಕಜೆಮೂಲೆ, ಜತೆ ಕಾರ್ಯದರ್ಶಿಯಾಗಿ ರೇಖಾ ಸುಭಾಷ್, ಕ್ರೀಡಾ ಕಾರ್ಯದರ್ಶಿಯಾಗಿ ರಮೇಶ್ ನೀರಬಿದಿರೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಕ್ಷಿತ್ ಆನೆಕಾರ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಶಿವಪ್ರಸಾದ್ ಆಲೆಟ್ಟಿ, ಈಶ್ವರ ವಾರಣಾಸಿ ಭಾಗೀಶ್ ಕೆ.ಟಿ. ಚೈತ್ರ ವಿನಯ್ ಕೇರ್ಪಳ, ಕುಶಾಂತ್ ಕೊರತ್ಯಡ್ಕ
ಉಮೇಶ್ ಮಣಿಕ್ಕರ, ಸಂಕಪ್ಪ ಸಾಲ್ಯಾನ್, ಮಧು ಪಂಜ, ಶ್ರೀಧಾಮ ಅಡ್ಕಾರ್, ಅನಿಲ್ ಸಂಪ, ಕೌಶಿಕ್ ಬಳ್ಳಕ್ಕ, ಕರುಣಾಕರ ಕೆಮ್ಮಾರ, ಪ್ರಜ್ಞಾ ಕೇರ್ಪಳ, ಮಂಜುನಾಥ ಪೈಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಶಿವಪ್ರಸಾದ್ ಆಲೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶ್ರೀಜಿತ್ ಸಂಪಾಜೆ ವಂದಿಸಿದರು.

Leave a Comment

Your email address will not be published. Required fields are marked *

error: Content is protected !!
Scroll to Top