ಸಂಪಾಜೆ :: ಗ್ರಾಮ ಪಂಚಾಯತ್‌ ವಿಶೇಷ ಗ್ರಾಮಸಭೆ,ಕೃಷಿಕರಿಗೆ ಏಣಿ ಹಾಗೂ ಜೈವಿಕ ಗೊಬ್ಬರ ವಿತರಣೆ

ದ.ಕ ಸಂಪಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆದ ವಿಶೇಷ ಗ್ರಾಮಸಭೆಯಲ್ಲಿ ಕೃಷಿಕರಿಗೆ ಸಬ್ಸಿಡಿ ದರದಲ್ಲಿ ಏಣಿಗಳ ವಿತರಣೆ ಹಾಗೂ ಉಚಿತ ಜೈವಿಕ ಗೊಬ್ಬರ ವಿತರಣೆ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು ಅಧ್ಯಕ್ಷತೆ ವಹಿಸಿದರು.
ಗ್ರಾಮ ಪಂಚಾಯತ್ ಸಂಪಾಜೆ ಕಲ್ಲುಗುಂಡಿ, ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ (ನಿ.) – ಕೇಂದ್ರ ವಿಟ್ಲ, ಐಸಿಎಆರ್ – ಐಐಹೆಚ್‌ಆರ್ ಬೆಂಗಳೂರು, ಕೃಷಿ ವಿಜ್ಞಾನ ಕೇಂದ್ರ ಮಂಗಳೂರು, ಫುಡ್ ಚೈನ್ ಕ್ಯಾಂಪೇನ್, ಶ್ರೀ ವಿಷ್ಣು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಇವರುಗಳ ಸಹಯೋಗದಲ್ಲಿ ನಡೆಯಿತು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹನೀಫ್ ಎಸ್.ಕೆ, ಸದಸ್ಯರು ಜಿ.ಕೆ ಹಮೀದ್, ಪಿಡಿಓ ಸರಿತಾ ಓಲ್ಗಾ ಡಿಸೋಜಾ, ನರೇಗಾ ಎಂಜಿನಿಯರ್ ಪ್ರಮೀಳಾ, ಸುಧನ ಕೃಷ್ಣ, ಸೆಕ್ರಟರಿ ತಿರುಮಲೇಶ್ವರ ಉಪಸ್ಥಿತರಿದ್ದರು.
ನರೇಗಾ ಯೋಜನೆ ಕುರಿತು ಮಾಹಿತಿ, ಚರ್ಚೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ
ರಸ್ತೆ–ಚರಂಡಿ ನಿರ್ಮಾಣ, ಬಾವಿ ಪುನಶ್ಚೇತನ, ಹೂಳೆತ್ತುವಿಕೆ, ರಬ್ಬರ್ ಗಿಡ ನೆಡುವ ಕಾರ್ಯಗಳಿಗೆ
ನರೇಗಾ ಯೋಜನೆಯಡಿ ಅವಕಾಶ ಕಲ್ಪಿಸಲು ಮನವಿ ನೀಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಅರ್ಕಾ ಜೈವಿಕ ಗೊಬ್ಬರ – ಎ.ಎಂ.ಸಿ ಮಾಹಿತಿ, ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಸರ್ಕಾರದ ಕೃಷಿ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಯಿತು.
ಐಸಿಎಆರ್ – ಐಐಹೆಚ್‌ಆರ್ ಬೆಂಗಳೂರು ಪ್ರತಿಷ್ಠಿತ ಸಂಸ್ಥೆಯ ವಿಜ್ಞಾನಿಗಳು ಸಂಶೋಧಿಸಿ ಅಭಿವೃದ್ಧಿಪಡಿಸಿದ ವಿಶೇಷ ಸೂಕ್ಷ್ಮಾಣು ಜೀವಿಗಳ ಜೈವಿಕ ಗೊಬ್ಬರ ಅರ್ಕಾ ಎಎಂಸಿ ಬಗ್ಗೆ ಸಂಪಾಜೆ ಕೃಷಿ ಸಖಿ ಮೋಹಿನಿ ವಿಶ್ವನಾಥ್ (ನಿಶಾ) ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸುಂದರಿ ಮುಂಡಡ್ಕ, ಸಂಜೀವಿನಿ ಎಂ.ಬಿ.ಕೆ ಕಾಂತಿ ಬಿ.ಎಸ್, ಎಲ್‌ಸಿಆರ್‌ಪಿ ಸೌಮ್ಯ, ಭಾರತಿ, ಪಂಚಾಯತ್ ಸಿಬ್ಬಂದಿಗಳಾದ ಗೋಪಮ್ಮ, ಸವಿತಾ, ಮಧುರಾ, ಉಮೇಶ್, ಬೋಜ, ಕೃಷಿಕರು ಹಾಗೂ ಫಲಾನುಭವಿಗಳು ಭಾಗವಹಿಸಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top