ಕ್ಯಾಂಪ್ಕೋ‌ ಅಧ್ಯಕ್ಷರಾಗಿ ಎಸ್. ಆರ್.ಸತೀಶ್ಚಂದ್ರ ಎರಡನೇ ಬಾರಿ ಆಯ್ಕೆ

ಕ್ಯಾಂಪ್ಕೋ‌ ಅಧ್ಯಕ್ಷರಾಗಿ ಎಸ್. ಆರ್.ಸತೀಶ್ಚಂದ್ರ ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪದ್ಮರಾಜ ಪಟ್ಟಾಜೆಯವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 19 ನಿರ್ದೇಶಕರ ಪೈಕಿ 13 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 6 ಸ್ಥಾನಗಳಿಗೆ ನ.23 ರಂದು ಚುನಾವಣೆ ನಡೆದು ಸಹಕಾರ ಭಾರತಿ ಬೆಂಬಲಿತ ಎಲ್ಲಾ 6 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.
ಡಿ.2ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಯಿತು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಮುರಳೀಕೃಷ್ಣ ಚಳ್ಳಂಗಾರು, ಪುರುಷೋತ್ತಮ ಭಟ್, ಮಹೇಶ್ ಚೌಟ, ದಯಾನಂದ ಹೆಗ್ಡೆ, ತೀರ್ಥರಾಮ ಎ.ವಿ. ಅಂಬೆಕಲ್ಲು, ಮಾಲಿನಿ ಪ್ರಸಾದ್ ಬಾಳಿಲ, ಸೌಮ್ಯ ಕೇಶವ ಪ್ರಕಾಶ್, ಗಣೇಶ್ ನಾಯ್ಕ, ರಾಘವೇಂದ್ರ ಎಚ್.ಎಂ., ವಿಶ್ವನಾಥ್ ಈಶ್ವರ ಹೆಗ್ಡೆ, ವೆಂಕಟ್ರಮಣ ಭಟ್ ಪೆರ್ಲ, ಕೆ.ಸತೀಶ್ಚಂದ್ರ ಭಂಡಾರಿ, ಸದಾನಂದ ಶೆಟ್ಟಿ, ವಿವೇಕಾನಂದ ಗೌಡ ಪಾಲಾರ್ ಮೂಲೆ, ಕೆ.ಸತ್ಯನಾರಾಯಣ ಪ್ರಸಾದ್‌, ರಾಧಾಕೃಷ್ಣನ್ ಕೆ, ಗಣೇಶ್ ಕುಮಾ‌ರ್ ಎ. ಉಪಸ್ಥಿತರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top