ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ಭಜನಾ ಸಂಘ ತೊಡಿಕಾನ ಇವರ ನೇತ್ರತ್ವದಲ್ಲಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದಲ್ಲಿ ಭಜನಾ ರಂಗಪೂಜೆಯ ಪ್ರಯುಕ್ತ ತಾಲೂಕಿನ ವಿವಿಧ ಭಜನಾ ಸಂಘಗಳಿಂದ ಭಜನಾ ಕಾರ್ಯಕ್ರಮ ನಡೆಯುತ್ತಿದೆ.
ಬೆಳಿಗ್ಗೆ ಪೂಜೆಯಿಂದ ರಾತ್ರಿ ಪೂಜೆ ಗಂಟೆ 7-00ರ ತನಕ ಊರ ಮತ್ತು ಪರವೂರ ಭಜನಾ ಮಂಡಳಿಗಳಿಂದ ನಿರಂತರ ಭಜನಾ ಕಾರ್ಯಕ್ರಮ ಜರಗಲಿರುವುದು. ಭಕ್ತಾಧಿಗಳು ಈ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಿ, ಶ್ರೀ ದೇವದ ಕೃಪೆಗೆ ಪಾತ್ರರಾಗಬೇಕಾಗಿ ಭಜನಾ ಸಂಘದವರು ವಿನಂತಿಕೊಂಡಿದ್ದಾರೆ.
ತೊಡಿಕಾನ : ಶ್ರೀ ಮಲ್ಲಿಕಾರ್ಜುನ ದೇವಳದಲ್ಲಿ ಭಜನಾ ಸತ್ಸಂಗ ಕಾರ್ಯ ಕ್ರಮ



































