ಸುಳ್ಯ ತಾಲೂಕಿನ ಕೃಷಿ ಸಖಿಯರು, ಕೃಷಿಕರು ಹಾಗೂ ಸಂಜೀವಿನಿ ಸದಸ್ಯೆಯರಿಗೆ ಕೃಷಿ ಅಧ್ಯಯನ ಪ್ರವಾಸ ಮತ್ತು ಮಾಹಿತಿ ತರಬೇತಿ

ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ (ಭಾ. ಕೃ. ಅ. ಸಂಸ್ಥೆ) ಕೇಂದ್ರ, ವಿಟ್ಲ; 3F ಆಯಿಲ್ ಪಾಮ್ ಪ್ರೈವೇಟ್ ಲಿಮಿಟೆಡ್; ರೇಷ್ಮೆ ಕೃಷಿ ಅಭಿವೃದ್ಧಿ ನಿಗಮ, ಮಂಗಳೂರು; ಹಾಗೂ ಸಂಜೀವಿನಿ ಎನ್‌ಆರ್‌ಎಲ್‌ಎಂ ತಾಲೂಕು ಪಂಚಾಯತ್ ಸುಳ್ಯ ಇವರ ಸಹಯೋಗದಲ್ಲಿ ರೇಷ್ಮೆ ಕೃಷಿ ಮಾಹಿತಿ ಹಾಗೂ ತಾಳೆ ಕೃಷಿ ಕ್ಷೇತ್ರ ಭೇಟಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಭಾ. ಕೃ. ಅ. ಸಂಸ್ಥೆ ಕೇಂದ್ರ, ವಿಟ್ಲದ ವ್ಯವಸ್ಥಾಪನಾ ನಿರ್ದೇಶಕರಾದ ಎಂ. ಪ್ರಸಾದ್ ಶೆಟ್ಟಿ, ನಿವೃತ್ತ ರೇಷ್ಮೆ ನಿರೀಕ್ಷಕರಾದ ಬಿ.ಕೆ. ನಾಯಕ್, ರೇಷ್ಮೆ ವಿಸ್ತರಣಾಧಿಕಾರಿ ಶಾಂಭವಿ ಹೆಚ್ (ದ.ಕ. ಜಿಲ್ಲಾ ಪಂಚಾಯತ್, ಮಂಗಳೂರು), ರೇಷ್ಮೆ ನಿರೀಕ್ಷಕರಾದ ಹೇಮಾ (ದ.ಕ. ಜಿಲ್ಲಾ ಪಂಚಾಯತ್, ಮಂಗಳೂರು), 3F ಆಯಿಲ್ ಪಾಮ್ ಪ್ರೈ. ಲಿ., ಉಡುಪಿಯ ಏರಿಯಾ ಮ್ಯಾನೇಜರ್ ಕೃಷ್ಣಾ ವೈ.ಟಿ., ಸಂಜೀವಿನಿ ಕ್ಲಸ್ಟರ್ ಅಧಿಕಾರಿಗಳಾದ ರವಿಶಂಕರ್ (ಸುಳ್ಯ ತಾಲೂಕು) ಹಾಗೂ ರಾಬರ್ಟ್ (ಬಂಟ್ವಾಳ–ಬೆಳ್ತಂಗಡಿ ತಾಲೂಕು) ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಧಿಕಾರಿಗಳು, ಕೃಷಿ ಭೂಮಿ ಹೊಂದಿರುವವರು ಹಾಗೂ ಅಲ್ಪ ಜಾಗವಿರುವವರಿಗೂ ರೇಷ್ಮೆ ಕೃಷಿ ಕೈಗೊಳ್ಳಲು ಅವಕಾಶವಿದ್ದು, ಉತ್ತಮ ಆದಾಯ ಗಳಿಸಲು ಸಾಧ್ಯವಿದೆ ಎಂದು ತಿಳಿಸಿದರು. ಹೆಚ್ಚಿನ ಭೂಮಿ ಹೊಂದಿರುವ ಕೃಷಿಕರಿಗೆ ತಾಳೆ ಕೃಷಿ ಮಾಡಲು ಅವಕಾಶವಿದ್ದು, ಸಂಬಂಧಿತ ಇಲಾಖೆಗಳಿಂದ ಎಲ್ಲಾ ರೀತಿಯ ಸಹಕಾರ ಲಭ್ಯವಿರುತ್ತದೆ ಎಂದರು. ರೇಷ್ಮೆ ಬೆಳೆಗಾರರಿಗೆ ಉತ್ಪನ್ನಗಳ ಮಾರಾಟ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಅಗತ್ಯ ತಾಂತ್ರಿಕ ಮಾರ್ಗದರ್ಶನ ಹಾಗೂ ಸಲಕರಣೆಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ತಾಳೆ ಬೆಳೆ ಈಗಾಗಲೇ ಹಲವು ಕಡೆಗಳಲ್ಲಿ ಬೆಳೆಸಲಾಗುತ್ತಿದ್ದು, ಅದರ ಮಾರಾಟ ವ್ಯವಸ್ಥೆಯೂ ಇದೆ ಎಂದು ತಿಳಿಸಿದರು. ಬಂಟ್ವಾಳ ತಾಲೂಕಿನ ತಾಳೆ ಕೃಷಿಕರಾದ ಗೋವಿಂದ ಭಟ್ ಇಡುಕ್ಕಿ ಹಾಗೂ ಬಿ. ಬಾಲಕೃಷ್ಣ ಭಟ್ ಸ್ತಂಭ ಗ್ರಾಮಕ್ಕೆ ಭೇಟಿ ಮಾಡಿಸಲಾಯಿತು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top