ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ತಾಲೂಕು ಘಟಕ, 28ನೇ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಕುಕ್ಕುಜಡ್ಕ, ಇದರ ಆಶ್ರಯದಲ್ಲಿ ಸುಳ್ಯ ತಾಲೂಕು 28 ನೇ ಕನ್ನಡ ಸಾಹಿತ್ಯ ಸಮ್ಮೇಳನವು ಚೊಕ್ಕಾಡಿ ವಿದ್ಯಾಸಂಸ್ಥೆ ಕುಕ್ಕುಜಡ್ಕದಲ್ಲಿ ಡಿ.30ರಂದು ನಡೆಯಲಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಂದ್ರಶೇಖರ ಪೇರಾಲು ಹಾಗೂ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ತಿಳಿಸಿದ್ದಾರೆ.
ಅವರು ಡಿ.17ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸಾಹಿತ್ಯ ಸಮ್ಮೇಳನದ ಬಗ್ಗೆ ಮಾಹಿತಿ ನೀಡಿದರು.
ಡಿ.30ರಂದು ಬೆಳಗ್ಗೆ ಸಾಹಿತ್ಯ ಸಮ್ಮೇಳನ ಉದ್ಘಾಟನೆಗೆ ಮೊದಲು ಕುಕ್ಕುಜಡ್ಕ ಪೇಟೆಯಿಂದ ಬೆಳಿಗ್ಗೆ 8.45 ಗಂಟೆಗೆ ಕನ್ನಡ ಭುವನೇಶ್ವರಿಯ ಮೆರವಣಿಗೆ ಹೊರಡುವುದು. ಮೆರವಣಿಗೆಗೆ ಮಾಜಿ ಸಚಿವ ಎಸ್.ಅಂಗಾರ ಚಾಲನೆ ನೀಡುವರು.ಹೊರಡುವುದು.ಹಿರಿಯ ಸಾಹಿತಿ ತೇಜಕುಮಾರ್ ಬಡ್ಡಡ್ಕ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ.
ಅಮರಮುಡ್ನೂರು ಗ್ರಾ.ಪಂ. ಅಧ್ಯಕ್ಷೆ ಜಾನಕಿ ಕಂದಡ್ಕ ರಾಷ್ಟ್ರ ಧ್ವಜಾರೋಹಣ ಗೈವರು. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಪರಿಷತ್ತಿನ ಧ್ವಜಾರೋಹಣ ಮಾಡುವರು. ಸುಳ್ಯಕ.ಸಾ.ಪ. ಅಧ್ಯಕ್ಷ ಚಂದ್ರಶೇಖರ ಪೇರಾಲು ಕನ್ನಡ ಧ್ವಜಾರೋಹಣ ಮಾಡುವರು.
ಬೆಳಿಗ್ಗೆ 10 ಗಂಟೆಗೆ ಹಿರಿಯ ಸಾಹಿತಿ ಕೆ.ಪಿ.ಸುರೇಶ್ ಕಂಜರ್ಪಣೆ ಸಮ್ಮೇಳನದ ಉದ್ಘಾಟನೆ ಮಾಡುವರು. ಶಾಸಕಿ ಭಾಗೀರಥಿ ಮುರುಳ್ಯ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಹೊಸ ಕೃತಿಗಳನ್ನು ಅನಾವರಣಗೊಳಿಸುವರು.
ಸಮ್ಮೇಳನದಲ್ಲಿ ಕೆ.ಆರ್. ತೇಜಕುಮಾರ್ ಬಡ್ಡಡ್ಕ ಬರೆದ ಮಜಲಿನಾಚೆ ಕಥಾಸಂಕಲನ ಹಾಗೂ ಮಮತಾ ರವೀಶ್ ಪಡ್ಡಂಬೈಲು ಬರೆದ ಗುಬ್ಬಿ ದನಿ ಕವನ ಸಂಕಲನ ಬಿಡುಗಡೆಗೊಳ್ಳಲಿದೆ. ಉದ್ಘಾನೆಯ ಬಳಿಕ ಸಮ್ಮೇಳನಾಧ್ಯಕ್ಷರ ಸಾಹಿತ್ಯ ಅವಲೋಕನ ನಡೆಯುವುದು.
ಅಪಾರಹ್ನ 12 .20ಗಂಟೆಯಿಂದ ಕವಿಗೋಷ್ಠಿ ನಡೆಯಲಿದ್ದು ಸುಳ್ಯ ಸರಕಾರಿ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ. ಶಾಲಿನಿ ಡಿ.ಎಲ್. ಅಧ್ಯಕ್ಷತೆ ವಹಿಸಲಿದ್ದಾರೆ.ಕವಿಗಳಾದ ಪರಿಮಳ ಐವರ್ನಾಡು,ಮಮತ ಸುಧೀರ್ ಚಿದ್ಗಲ್,ರೇಣುಕಾ ಆರ್ ನಾವಲಗಿ,ಅನುರಾಧ ಶಿವಪ್ರಕಾಶ್,ಮಾನ್ಯಶ್ರೀ ಕೆ.ಎಂ ಪುಳಿಕುಕ್ಕು,ಅಶ್ವಿನಿ ಕೋಡಿಬೈಲ್,ಮುಸ್ತಫಾ ಬೆಳ್ಳಾರೆ,ಗಾಯತ್ರಿ ರಾಜೀವ್ ಸ್ನೇಹಗಿರಿ,ಅಕ್ಷಯ ಕಾಂತಬೈಲು,ಸಮತಿ ಕೆ ಕಾನತ್ತಿಲ,ದೀಪಶ್ರೀ ಅಡ್ತಲೆ ಕವಿಗೋಷ್ಠಿಯಲ್ಲಿ ಭಾಗವಹಿಸುವರು
ಅಪರಾಹ್ನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದು.
ವಿಚಾರಗೋಷ್ಠಿ ನಡೆಯಲಿದ್ದು ಅಧ್ಯಕ್ಷತೆಯನ್ನು ಹಿರಿಯ ಯಕ್ಷಗಾನ ಅರ್ಥಧಾರಿ ಜಬ್ಬಾರ್ ಸಮೋ ವಹಿಸಲಿದ್ದಾರೆ.ರಾಧೇಶ್ ತೋಳ್ಪಾಡಿ ವಿಚಾರ ಮಂಡಿಸಲಿದ್ದಾರೆ.
ಬಳಿಕ ಕಾವ್ಯ ಕುಂಚ ಗಾಯನ ನಡೆಯುವುದು.
ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು ಸಮಾರೋಪ ಭಾಷಣವನ್ನು ಸಾಹಿತಿಗಳಾದ ಡಾ.ನಾ. ಸೋಮೇಶ್ವರ ಮಾಡಲಿದ್ದಾರೆ.
ಎಂ.ಟಿ.ಶಾಂತಿಮೂಲೆ (ಸಾಹಿತ್ಯ ಮತ್ತು ಕೃಷಿ), ಆನೆಕಾರ ಗಣಪಯ್ಯ (ಧಾರ್ಮಿಕ ಮತ್ತು ಸಂಘಟನೆ), ಶ್ರೀಮತಿ ಸುಲೋಚನಾ ಪಿ.ಕೆ. (ಹಿರಿಯ ಸಾಹಿತಿ), ಮೋಹನ ಶೇಣಿ (ರಂಗಭೂಮಿ ಮತ್ತು ಚಲನಚಿತ್ರ), ಶೇಖರ ಮಣಿಯಾಣಿ (ಯಕ್ಷಗಾನ), ವೈಕುಂಠ ಪ್ರಭು (ಗಣಕ ಯಂತ್ರ ಪರಿಣಿತಿ), ಹರೀಶ್ ಮೋಟುಕಾನ (ಪತ್ರಿಕೋದ್ಯಮ),
ಶ್ರೀನಿವಾಸ ಮಾಸ್ತರ್ ಹಳೆಗೇಟು (ಶಿಲ್ಪಕಲೆ), ಚಂದ್ರಾ ಕೋಲ್ಟಾರ್ (ಸಹಕಾರ ಸಮಾಜಸೇವೆ), ಭವಾನಿ ವಸಂತ್ (ಕ್ರೀಡೆ), ವಿಜಿತ್ ಮೈತಡ್ಕ (ಭೂತಾರಾಧನೆ), ಇಬ್ರಾಹಿಂ ಸುಳ್ಯ (ವ್ಯಾಪಾರೋದ್ಯಮ)ಯವರಿಗೆ ಕನ್ನಡ ಕಸ್ತೂರಿ ಸನ್ಮಾನ ಪುರಸ್ಕಾರ ಹಾಗೂ ಕನ್ನಡ ಕಸ್ತೂರಿ ಗೌರವಾರ್ಪಣೆಯನ್ನು ಬಾಲ ಪ್ರತಿಭೆ ಭಾನವಿ ಪಿ.ಎಸ್. (ಕ್ರೀಡೆ)ಯವರಿಗೆ ನೀಡಿ ಸನ್ಮಾನಿಸಲಾಗುವುದು.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭ್ರಾಮರಿ ನಾಟ್ಯಾಲಯ ಕುಕ್ಕುಜಡ್ಕ ಇವರಿಂದ ನೃತ್ಯ ವೈಭವ ಹಾಗೂ ಬೆಂಗಳೂರು ಕಾಜಾಣ ತಂಡದಿಂದ ಸಾಲು ಮರಗಳ ತಾಯಿ ತಿಮ್ಮಕ್ಕ ನಾಟಕ ಮೂಡಿಬರಲಿದೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಕ.ಸಾ.ಪ. ಗೌರವ ಕಾರ್ಯದರ್ಶಿ ತೇಜಸ್ವಿ ಕಡಪಳ, ಕೋಶಾಧಿಕಾರಿ ದಯಾನಂದ ಆಳ್ವ ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ, ಸಮ್ಮೇಳನ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಕೃಷ್ಣಪ್ರಸಾದ್ ಮಾಡಬಾಕಿಲು, ಕ.ಸಾ.ಪ. ನಿರ್ದೇಶಕರಾದ ಸಂಕೀರ್ಣ ಚೊಕ್ಕಾಡಿ, ಲತಾಶ್ರೀ ಸುಪ್ರೀತ್ ಮೋಂಟಡ್ಕ, ಶಶ್ಮಿ ಭಟ್,ಸ
ಶರೀಫ್ ಜಟ್ಟಿಪಳ್ಳ ಉಪಸ್ಥಿತರಿದ್ದರು.
ಡಿ.30ಕ್ಕೆ ಕುಕ್ಕುಜಡ್ಕ ಚೊಕ್ಕಾಡಿ ವಿದ್ಯಾಸಂಸ್ಥೆಯಲ್ಲಿ ಸುಳ್ಯ ತಾಲೂಕು 28ನೇ ಕನ್ನಡ ಸಾಹಿತ್ಯ ಸಮ್ಮೇಳನ

















