ಯುವಜನ ಸಂಯುಕ್ತ ಮಂಡಳಿ (ರಿ.) ಸುಳ್ಯ ಇದರ ಪಂಚಸಪ್ತತಿ ಸ್ವಚ್ಛತಾ ಅಭಿಯಾನ-2025 ರ ಅಂಗವಾಗಿ ಸ್ಪಂದನ ಗೆಳೆಯರ ಬಳಗ (ರಿ.) ಅಡ್ತಲೆ ಇವರ ವತಿಯಿಂದ ಗ್ರಾಮ ಪಂಚಾಯತ್ ಅರಂತೋಡು ಇವರ ಸಹಯೋಗದೊಂದಿಗೆ ಸ್ವಚ್ಛತಾ ಜಾಗೃತಿ ಕುರಿತ ಭಿತ್ತಿಪತ್ರಗಳ ಅನಾವರಣ ಹಾಗೂ ಅಳವಡಿಸುವ ಕಾರ್ಯವು ಅರಂತೋಡಿನಲ್ಲಿ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ.ಆರ್ ಭಿತ್ತಿಪತ್ರವನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ರವೀಂದ್ರ ಪೂಜಾರಿ ಪಂಜಿಕೋಡಿ,ಅರಂತೋಡು ಸೊಸೈಟಿಯ ಉಪ-ಮುಖ್ಯಕಾರ್ಯನೀರ್ವಹಣಾಧಿಕಾರಿ ಪ್ರದೀಪ್ ಕುಮಾರ್, ಪಂಚಾಯತ್ ಸಿಬ್ಬಂದಿಗಳು ಹಾಗೂ ಸ್ಪಂದನದ ಸದಸ್ಯರು ಹಾಜರಿದ್ದರು. ಅರಂತೋಡಿನ ಎಲ್ಲಾ ಅಂಗಡಿಗಳಿಗೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಭಿತ್ತಿಪತ್ರವನ್ನು ಅಳವಡಿಸಲಾಯಿತು.
ಸ್ಪಂದನ ಗೆಳೆಯರ ಬಳಗದ ವತಿಯಿಂದ ಪಂಚಸಪ್ತತಿ ಸ್ವಚ್ಛತಾ ಅಭಿಯಾನದ 9 ನೇ ಕಾರ್ಯಕ್ರಮ-ಸ್ವಚ್ಚತೆಯ ಅರಿವಿನ ಕುರಿತ ಭಿತ್ತಿಪತ್ರಗಳ ಅನಾವರಣ ಹಾಗೂ ಆಳವಡಿಸುವಿಕೆ ಕಾರ್ಯಕ್ರಮ

















