ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮತಿ ಶಕ್ತಿವೇಲು ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಕೆ. ಡಿ. ಪಿ. ತ್ರೈಮಾಸಿಕ ಸಭೆ ನಡೆಯಿತು
ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಮಾಹಿತಿಯನ್ನು ನೀಡಿದರು.
ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಯಿಂದ ಹೊರಗೆ ಉಳಿದ ಮಕ್ಕಳ ಮಾಹಿತಿ. ಶಾಲಾ ಪಠ್ಯ ಪಠ್ಯತರ ಚಟುವಟಿಕೆ ಶಾಲಾ ಅಭಿವೃದ್ಧಿ ಕಾರ್ಯ ವಿವಿಧ ವಿಷಯಗಳ ಬಗ್ಗೆ ಶಿಕ್ಷಣ ಇಲಾಖೆಯ ಭವಾನಿಶಂಕರ ಹಾಗೂ ಪವಿತ್ರ ಸುಜಯ ಕುಮಾರಿ ಮಾಹಿತಿ ನೀಡಿದರು.
ಮೆಸ್ಕಾಂ ಇಲಾಖೆಯ ಅಧಿಕಾರಿಗಳು
ಇಲಾಖೆಯ ಮಾಹಿತಿಯನ್ನು ನೀಡಿದರು
ಗೂನಡ್ಕ ಶಾಲಾ ಬಳಿ ಇರುವ ಹೈಟೆನ್ಷನ್ ತಂತಿಗಳ ಬದಲಾವಣೆ ಮಾಡುವ ಬಗ್ಗೆ ಹಲವು ಬಾರಿ ಪ್ರಸ್ತಾಪ ಮಾಡಲಾಗಿದ್ದು ಕೂಡಲೇ ಸರಿ ಪಡಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು,
ಸಂಪಾಜೆ ಗ್ರಾಮದ ಪೆರುಂಗೊಡಿ ಬಳಿ ಪರಿಶಿಷ್ಟ ಜಾತಿ ಕಾಲನಿ ಹಳೆಯ ಕಬ್ಬಿಣದ ಕರೆಂಟ್ ಕಂಬ ಹಾಗೂ ವಯರ್ ಹಳೆಯದಾಗಿದ್ದು ಅಂಗವಿಕಲರ ಮನೆ ಇದೆ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾಗ
ಜೂನಿಯರ್ ಇಂಜಿನಿಯರ್ ಪರಶುರಾಮ ಸೂಕ್ತ ಕ್ರಮದ ಭರವಸೆ ನೀಡಿದರು.
ಸಹಕಾರಿ ಸಂಘಗಳ ಬಗ್ಗೆ ಮಾಹಿತಿಯನ್ನು ವೀರೇಂದ್ರ ಕುಮಾರ್ ಜೈನ್ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಟಿ. ವಿಠಲ್ ಮಾಹಿತಿಯನ್ನು ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಅಲಡ್ಕ ಪರಿಶಿಷ್ಟ ಜಾತಿ ಕಾಲನಿಗೆ ವರ್ಷಗಳ ಹಿಂದೆ ಹೈಮಾಸ್ಟ್ ದೀಪ ಅಳವಡಿಕೆಗೆ ಸ್ಥಳಕ್ಕೆ ಇಲಾಖೆಯ ಅಧಿಕಾರಿಗಳು ಬಂದು ಜಿ.ಪಿ.ಎಸ್ ಮಾಡಿ ಹೋಗಿದ್ದು ಹೈಮಾಸ್ಟ್ ದೀಪ ಅಳವಡಿಸಿದ ಬಗ್ಗೆ ಚರ್ಚೆ ನಡೆಯಿತು.
ಸಂಪಾಜೆ ಗ್ರಾಮದಲ್ಲಿ ಅತೀ ಹೆಚ್ಚು ಪರಿಶಿಷ್ಟ ಜಾತಿ ಮನೆಗಳಿದ್ದು ಗ್ರಾಮಕ್ಕೆ ಹಲವು ವರ್ಷಗಳಿಂದ ಅನುದಾನ ಬರುತ್ತಿಲ್ಲ. ಇಲಾಖೆಯ ಅಧಿಕಾರಿಗಳು ಸರಿಯಾದ ಮಾಹಿತಿ ಕಲೆ ಹಾಕಿಲ್ಲ ಕೂಡಲೇ ತಾರತಮ್ಯ ಸರಿಪಡಿಸಿ ಅನುದಾನ ದೊರಕಿಸಿಕೊಡುವಂತೆ ನಿರ್ಣಯಿಸಲಾಯಿತು.
ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಮಂಜುನಾಥ್ ಇಲಾಖೆಯ ಮಾಹಿತಿಯನ್ನು ನೀಡಿದರು 94 ಸಿ ಹಾಗೂ ಇತರ ವಿಚಾರಗಳ ಬಗ್ಗೆ ಪ್ರಸ್ತಾಪವಾಯಿತು.
ಸಭೆಯಲ್ಲಿ ಉಪಾಧ್ಯಕ್ಷರಾದ ಎಸ್ ಕೆ ಹನೀಫ್, ಸದಸ್ಯರುಗಳಾದ ಜಿ ಕೆ ಹಮೀದ್ ಗೂನಡ್ಕ
ಜಗದೀಶ್ ರೈ. ವಿವಿದ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಂಪಾಜೆ : ಗ್ರಾಮ ಪಂಚಾಯತ್ ಕೆ. ಡಿ. ಪಿ. ಸಭೆ

















