ಸುಳ್ಯ ಶ್ರೀ ಚೆನ್ನಕೇಶವ ಜಾತ್ರೋತ್ಸವದ ಅಂಗವಾಗಿ, ಜನವರಿ 3 ಮತ್ತು 4, 2026 ರಂದು ಸುಳ್ಯದ ಶ್ರೀ ಚೆನ್ನಕೇಶವ ದೇವಾಲಯದ ಮುಂಭಾಗದ ವೇದಿಕೆಯಲ್ಲಿ “ಸುಳ್ಯೋತ್ಸವ ಸಾಂಸ್ಕ್ರತಿಕ ವೈಭವ 2026” ವಿಜೃಂಭಣೆಯಿಂದ ನಡೆಯಲಿದ್ದು ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ. ಸಾರಥ್ಯ ವಹಿಸಲಿದ್ದಾರೆ ಎಂದು ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ ತಿಳಿಸಿದ್ದಾರೆ.
ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
03-01-2026 | ಸಂಜೆ 6:00 ಗಂಟೆಗೆ ಸುಳ್ಯ ಉತ್ಸವ 2026 ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಆರಂಭಗೊಳ್ಳಲಿದೆ.
ಲೋಕ ಏರಿಯಲ್ ಡಾನ್ಸ್ ತಂಡ ಬೆಂಗಳೂರು ಸ್ವಾಹ ವಿಶುವಲ್ ಆರ್ಟ್ಸ್ ಬೆಂಗಳೂರು
ಡಿ-ಯುನೈಟೆಡ್ ಸುಳ್ಯ ಕೆ.ವಿ.ಜಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಸುಳ್ಯ ನೃತ್ಯ ಸಾರಂಗ ಕಲಾಕುಟೀರ ಗುತ್ತಿಗಾರು ಇವರಿಂದ ಸಾಂಸ್ಕೃತಿಕ ವೈಭವ ಏರಿಯಲ್ ಸಿಲ್ಕ್ |ಫೈರ್ ಡ್ಯಾನ್ಸ್ ಬಾಲಿವುಡ್ |ಭರತನಾಟ್ಯ ಬಲೆ ತೆಲಿಪಾಲೆ ಖ್ಯಾತಿಯ ಉಮೇಶ್ ಮಿಜಾರ್ನ ನಮ್ಮ ಕಲಾವಿದೆರ್ ಬೆದ್ರ ಇವರಿಂದ
ವೈರಲ್ ವೈಶಾಲಿ ನಾಟಕ ನಡೆಯಲಿದೆ.
ಈ ಕಾರ್ಯಕ್ರಮ ಪ್ರಾಯೋಜಕರ ಸಹಕಾರದೊಂದಿಗೆ ಆಯೋಜಿಸಲಾಗಿದ್ದು ಸುಳ್ಯೋತ್ಸವ ಸಮಿತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ರಾಜ್ಯದ ಸುಪ್ರಸಿದ್ಧ ಕಲಾ ತಂಡಗಳಿಂದ ನಾನಾ ವಿಧದ ಸಾಂಸ್ಕೃತಿಕ ಕಲಾಪ್ರಕಾರಗಳು ಎರಡೂ ದಿನಗಳೂ ಪ್ರದರ್ಶನಗೊಳ್ಳಲಿದ್ದು, ಪ್ರತಿದಿನ ಸಂಜೆ ಗಂಟೆ 6.00 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಿಸಲಿವೆ.
ಕನ್ನಡ ಚಲನ ಚಿತ್ರದ ಸಂಗೀತ ನಿರ್ದೆಶಕ ಹಾಗೂ ನವೀನ್ ಸಜ್ಜು ಹಾಗೂ ಮಹಾನಟಿ ಖ್ಯಾತಿಯ ವಂಶಿ ಸುಳ್ಯ ಭಾಗವಹಿಸಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿಶೇಷ ಮೆರೆಗು ನೀಡಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಡಾ. ಕೆ.ವಿ. ಚಿದಾನಂದ ಹಾಗೂ ಡಾ. ಹರಪ್ರಸಾದ್ ತುದಿಯಡ್ಕ ಅವರು ಭಾಗವಹಿಸಲಿದ್ದಾರೆ.
ಈ ಸುಳ್ಯೋತ್ಸವ ಮುಖ್ಯ ಉದ್ದೇಶವು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಸಲ್ಲಿಸುವುದರ ಜೊತೆಗೆ, ಜನರಿಗೆ ಮನೋರಂಜನಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒದಗಿಸುವುದಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅವರು ವಿನಂತಿಸಿಕೊಂಡರು. ಪತ್ರಿಕಾಗೋಷ್ಠಿಯಲ್ಲಿ ಸುಳ್ಯೋತ್ಸವ ಸಮಿತಿ 2026 ಅಧ್ಯಕ್ಷ ಸತೀಶ್ ಕೆ ಜಿ
ಉಪಾಧ್ಯಕ್ಷ ಸನತ್ ಪಿ ಹರಿರಾಯ ಕಾಮತ್ ಖಜಾಂಜಿ ಗಣೇಶ್ ಆಳ್ವ ಪ್ರಧಾನ ಕಾರ್ಯದರ್ಶಿ ಡಾ. ಚೈತ್ರಾ ಅವಿನಾಶ್ ಜೊತೆ ಕಾರ್ಯದರ್ಶಿ | ಮಧುರಾ ಜಗದೀಶ್, ಮಿಥುನ್ ಕಡೆಂಗ ಬಾಬುಗೌಡ ಹಾಗೂ ನಿರ್ದೇಶಕರಾದ ಶೈಲೇಂದ್ರ ಸರಳಾಯ ಗಿರೀಶ್ ನಾರ್ಕೋಡು | ಸಾಯಿರಾಂ ದೊರವರಿ ಭುವನ್ ಅತ್ಯಾಡಿ ಅಭಿಷೇಕ್ ಕೇಕಡ್ಡ |ತೀರ್ಥೇಶ್ ಪಾರೆಪ್ಪಾಡಿ |ರಜತ್ ಅಡ್ಡಾರ್ ಕಾರ್ತಿಕ್ ಕುಡೆಕಲ್ಲು ಇತರರು ಉಪಸ್ಥಿತರಿದ್ದರು.
ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವದ ಅಂಗವಾಗಿ ಜ.3 ಮತ್ತು 4ಕ್ಕೆ ಸುಳ್ಯೋತ್ಸವ – 2026 ಸಾಂಸ್ಕೃತಿಕ ವೈಭವ ಕಾರ್ಯಕ್ರಮ : ಅಕ್ಷಯ್ ಕೆ.ಸಿ

















