ಸುಳ್ಯ ತಾಲೂಕು ಆಟೋರಿಕ್ಷಾ ಚಾಲಕರ ಸಂಘ (ರಿ.) ಬಿಎಂಎಸ್ ಸಂಯೋಜಿತ ಸುಳ್ಯ ದ ಕ ಇದರ ವತಿಯಿಂದ ತಾಲೂಕಿನ ಎಲ್ಲಾ ಬಿಎಂಎಸ್ ಆಟೋ ಚಾಲಕ ಸದಸ್ಯರಿಗೆ ಕ್ರಿಕೇಟ್ ಪಂದ್ಯಾಟ ಸುಳ್ಯದ ಪ್ರಥಮ ದರ್ಜೆ ಕಾಲೇಜ್ ಕೊಡಿಯಾಲ್ ಬೈಲ್ ಕ್ರೀಡಾಂಗಣದಲ್ಲಿ ನಡೆಯಿತು. ತಾಲೂಕಿನ ಸುಬ್ರಮಣ್ಯ ಜಾಲ್ಸೂರು ಪಂಜ ಎಡಮಂಗಲ ಕಲ್ಲುಗುಂಡಿ ಹರಿಹರ, ನಗರದ ಪೈಚಾರ್ ನಿಲ್ದಾಣ ಶ್ರೀ ರಾಮ್ ಪೇಟೆ ಗೋಪಿಕಾ ನಿಲ್ದಾಣ ಬಸ್ ನಿಲ್ದಾಣ ರಥಬೀದಿ ನಿಲ್ದಾಣ ಕೆವಿಜಿ ನಿಲ್ದಾಣ ಗಾಂಧಿನಗರ ನಿಲ್ದಾಣ.. ತಾಲೂಕಿನ ಎಲ್ಲಾ ಸದಸ್ಯರು.. ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಿದರು ಪಂದ್ಯಾಟವನ್ನು ಸಂಘದ ಹಿತೈಷಿ ಮಧುಸೂದನ್ ಕಸ್ತೂರಿ ಓಡಬಾಯಿ ಉದ್ಘಾಟಿಸಿದರು.
ಸಂಘದ ಅಧ್ಯಕ್ಷರಾದ ಪ್ರಕಾಶ್ ಎಂ ಎಸ್ ಅಧ್ಯಕ್ಷತೆ ವಹಿಸಿದ್ದರು ನಿಕಟಪೂರ್ವ ಅಧ್ಯಕ್ಷರಾದ ರಾಧಾಕೃಷ್ಣ ಬೈತಡ್ಕ ಕೋಶಾಧಿಕಾರಿ ರವಿ ಎಸ್ ಸಂಘಟನಾ ಕಾರ್ಯದರ್ಶಿ ಸುಂದರ್ ಪೆರಾಜೆ ಉಪಾಧ್ಯಕ್ಷರಾದ ಪ್ರಶಾಂತ್ ಭಟ್ ಹರಿಹರ ಘಟಕ ದ ಅಧ್ಯಕ್ಷರಾದ ಮಧು ಕುಕ್ಕುಜಡ್ಕ ಘಟಕ ದ ಅಧ್ಯಕ್ಷರಾದ ಸತೀಶ್ ಜಾಲ್ಸೂರು ಘಟಕದ ಅಧ್ಯಕ್ಷರಾದ ಗೋಪಾಲ ಕಾರ್ಯದರ್ಶಿ ದಿನೇಶ್ ಪಂಜ ಘಟಕದ ಕಾರ್ಯದರ್ಶಿ ಜೀನತ್ ಚಿಮುಳ್ಳು ಕಲ್ಲುಗುಂಡಿ ಘಟಕದ ಕಾರ್ಯದರ್ಶಿ ವಿನೋದ್ ನಿರೇಶಕರಾದ ಜಗದೀಶ್ ಎನ್.ಆರ್ ಭಾಸ್ಕರ್ ಜನಾರ್ದನ ಜಯರಾಮ ಕುಲಾಲ್ ಚಾಮಯ್ಯ ಶಿವಪ್ರಸಾದ ಮಹೇಶ್ ಬಾನು ಪ್ರಕಾಶ್ ಪ್ರಸನ್ನ ಪ್ರದೀಪ ರೋಹಿತ್ ವೇಣುಗೋಪಾಲ ನಾಯರ್ ಶಂಕರ ಉಪಸ್ಥಿತರಿದ್ದರು .
ವಿಜಯ ಕುಮಾರ್ ಉಬರಡ್ಕ ವಿನೀತ್ ಕೊಲ್ಚಾರ್ ಧನು ಕೆವಿಜಿ ರಕ್ಷಿತ್ ಜಯನಗರ ಬಹಳ ಸುಂದರವಾಗಿ ಮನೋರಂಜನೆ ಮುಖಾಂತರ ವೀಕ್ಷಣೆ ವಿವರಣೆನೀಡಿದರು. ಪ್ರಥಮ ದ್ವಿತೀಯ ಹಾಗೂ ಎಲ್ಲಾ ವೈಯಕ್ತಿಕ ಟ್ರೋಪಿಯನ್ನು ಸಂಘಕ್ಕೆ ಉಚಿತವಾಗಿ ನೀಡಿದವರು ವಿನಾಯಕ ಆಟೋ ತ್ರಿವೀಲ್ ವರ್ಕ್ ವಿಷ್ಣು ಸರ್ಕಲ್ ನ ಮಾಲಕರಾದ ಮೋಹನದಾಸ್ ಪಂಜ ನೀಡಿದರು . ಪ್ರದಾನ ಕಾರ್ಯದರ್ಶಿ ನಾರಾಯಣ ಎಸ್ ಎಂ ಕ್ರೀಡಾ ಸಂಚಾಲಕರಾದ ಸುರೇಂದ್ರ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು. .. ಮದ್ಯಾಹ್ನ ಎಲ್ಲರಿಗೂ ಊಟದ ಸಂಘದ ವತಿಯಿಂದ ವ್ಯವಸ್ಥೆ ಮಾಡಲಾಯಿತು ಆಗಮಿಸಿದ ಆಟಗಾರರಿಗೆ ಹಾಗೂ ಸದಸ್ಯರಿಗೆ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ರಥಬೀದಿ ಸದಸ್ಯರಾದ ವೆಂಕಟ್ರಮಣ ಭಟ್ ಮುಳ್ಯ ವ್ಯವಸ್ಥೆ ಮಾಡಿದರು.
ಸುಳ್ಯ : ಆಟೋ ಚಾಲಕರಿಗೆ ಕ್ರಿಕೆಟ್ ಪಂದ್ಯಾಟ

















