ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ತಾಲೂಕು ಘಟಕ, ಸಮ್ಮೇಳನ ಸ್ವಾಗತ ಸಮಿತಿ ನೇತ್ರತ್ವದಲ್ಲಿ ಕುಕ್ಕುಜಡ್ಕದಲ್ಲಿ 28ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ ನೀಡಲಾಗಿದೆ.ಸುಳ್ಯ ತಾಲೂಕಿನ ಚೊಕ್ಕಾಡಿ ವಿದ್ಯಾಸಂಸ್ಥೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ.
ಕನ್ನಡ ಭುವನೇಶ್ವರಿಯ ವೈಭವದ ಮೆರವಣಿಗೆ ಕುಕ್ಕುಜಡ್ಕದಿಂದ ಶಾಲೆಯ ತನಕ ನಡೆಯಿತು. ತಹಶೀಲ್ದಾರ್ ಎಂ.ಮಂಜುಳ ಮೆರವಣಿಗೆಗೆ ಚಾಲನೆ ನೀಡಿದರು. ಸಾಹಿತ್ಯ ಸಮ್ಮೇಳನದ ಸರ್ವ ಅಧ್ಯಕ್ಷ, ಸಾಹಿತಿ ಕೆ.ಆರ್.ತೇಜಕುಮಾರ್ ಬಡ್ಡಡ್ಕ ಅವರನ್ನು ಆಕರ್ಷಕ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಶಾಲೆಯ ತನಕ ಕರೆತರಲಾಯಿತು.
ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ.ಶ್ರೀನಾಥ್, ತಾಲೂಕು ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಗ್ರಾಮ ಪಂಚಾಯತ್ ಅಧ್ಯಕ್ಷೆ ಜಾನಕಿ,ಸಮ್ಮೇಳನದ ನಿಕಟ ಪೂರ್ವ ಅಧ್ಯಕ್ಷೆ ಲೀಲಾ ದಾಮೋದರ್ ,ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳಾದ ತೇಜಸ್ವಿ ಕಡಪಳ,ಚಂದ್ರಮತಿ ಹೋಬಳಿ ಘಟದ ಅಧ್ಯಕ್ಷರಾದ ಚಂದ್ರಾವತಿ ಬಡ್ಡಡ್ಕ,ಬಾಬು ಮಾಸ್ತರ್,ಸಮ್ಮೇಳನದ ಕಾರ್ಯಾಧ್ಯಕ್ಷ ಕ್ರಷ್ಣಪ್ರಸಾದ್ ಮಾಡಬಾಕಿಲು,ಉಪಾಧ್ಯಕ್ಷ ಅಣ್ಣಾಜಿ ಪೈಲೂರು,ಕೋಶಧಿಕಾರಿ ಅರುಣಕುಮಾರ್ ,ಜತೆಕಾರ್ಯದರ್ಶಿ ಸಂಕೀರ್ಣ,ಚೈತನ್ಯ ,ತಾಲೂಕು ಘಟಕದ ಕೇಶವ ಸಿ.ಎ,ರಮೇಶ್ ನೀರಬಿದಿರೆ,ಲತಾಶ್ರೀ ಸುಪ್ರಿತ್ ಮೋಂಟಡ್ಕ, ಶಶ್ಮಿಭಟ್ ಯೋಗಿಶ ಹೊಸೊಳಿಕೆ ಚರಿಷ್ಮ ಕಡಪಳ ಇತರರು ಉಪಸ್ಥಿತರಿದ್ದರು.
ಕುಕ್ಕುಜಡ್ಕ : ಸುಳ್ಯ ತಾಲೂಕು 28ನೇ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಕನ್ನಡ ಭುವನೇಶ್ವರಿಯ ಮೆರವಣಿಗೆಯೊಂದಿಗೆ ಚಾಲನೆ



































