ಸ್ವಂತಿಕಾ ಸಾಹಿತ್ಯ ಸಾಂಸ್ಕೃತಿಕ ಬಳಗ ಸುಳ್ಯ, ದ. ಕ. “ಚಂದನಾ ಸಾಹಿತ್ಯ ವೇದಿಕೆ ಸುಳ್ಯ ಇದರ ವತಿಯಿಂದ
ಸಂಧ್ಯಾರಶ್ಮಿ ಸಾಹಿತ್ಯ ಸಂಘ’, ಸುಳ್ಯ ತಾಲೂಕು ಪಿಂಚಣಿದಾರರ ಮತ್ತು ನಿವೃತ್ತ ನೌಕರರ ಸಂಘ ಸುಳ್ಯ ತಾಲೂಕು ಇವರುಗಳ ಸಹಯೋಗದೊಂದಿಗೆ
ಕನ್ನಡಕ್ಕೆ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ರಾಷ್ಟ್ರಕವಿ ಡಾ| ಕುವೆಂಪು ಅವರ ಜನ್ಮದಿನಾಚರಣೆ 2025 ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ಡಿ.29ರಂದು ಸಂಧ್ಯಾ ರಶ್ಮಿ ಸಭಾಂಗಣದಲ್ಲಿ ನಡೆಯಿತು.
ಸ್ವಂತಿಕಾ ಸಾಹಿತ್ಯ-ಸಾಂಸ್ಕೃತಿಕ ಬಳಗ ಸುಳ್ಯದ ಅಧ್ಯಕ್ಷ ಹಾಗೂ ನಿವೃತ್ತ ಸಿ.ಡಿ.ಪಿ.ಒ. ನಾರಾಯಣ ನೀರಬಿದಿರೆ ಅಧ್ಯಕ್ಷತೆ ವಹಿಸಿದ್ದರು.ಚಂದನಾ ಸಾಹಿತ್ಯ ವೇದಿಕೆಯ ಅಧ್ಯಕ್ಷೆ ಹಾಗೂ ಕವಯತ್ರಿ ಸಂಧ್ಯಾ ಕುಮಾರ್, ಶ್ರೀ ಸ್ವಾಮಿ ಯೋಗೇಶ್ವರಾನಂದ ಸರಸ್ವತಿ ಚೈತನ್ಯ ಸೇವಾಶ್ರಮ, ದೇವರಕಳಿಯ ಅಜ್ಜಾವರ ಅವರು ಮುಖ್ಯ ಅಥಿತಿಗಳಾಗಿ ಭಾಗವಹಿಸಿದರು.
ನಿವೃತ್ತ ಪ್ರೌಢಶಾಲಾ ಅಧ್ಯಾಪಿಕೆ ಶಿವದೇವಿ ಅವನೀಶ್ಚಂದ್ರ ಕುವೆಂಪು ಅವರ ಬಗ್ಗೆ ಉಪನ್ಯಾಸ ನೀಡಿದರು.ಸುಳ್ಯ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ ನೀನಾಸು ಅವರ ಪ್ರಶೋತ್ತರಗಳು’ (ಹಾಸ್ಯ) ಹಾಗೂ ಅಕ್ಷತಾ ನೀರಬಿದಿರೆ ಅವರ ಕವನ ಸಂಕಲನ ಸಂಭಾಷಣೆಯನ್ನು ಹಾಗೂ ಶ್ರೀ ಸ್ವಾಮಿ ಯೋಗೇಶ್ವರಾನಂದ ಸರಸ್ವತಿ (ಚೈತನ್ಯ ಸ್ವಾಮಿ) ಅವರ ವಿದ್ಯೆಯ ಅಮೃತ ಮಶ್ನುತೇ ಕ್ರತಿಗಳನ್ನು ಹಿರಿಯ ಸಾಹಿತಿಗಳಾದ ಜಯಮ್ಮ ಚೆಟ್ಟಿಮಾಡ,ಶೀಲಾವತಿ ಕೊಳಂಬೆ ಬಿಡುಗಡೆಗೊಳಿಸಿದರು.
ನಿವೃತ್ತ ಶಿಕ್ಷಕ ಲಿಂಗಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಳ್ಯ : ರಾಷ್ಟ್ರ ಕವಿ ಡಾ| ಕುವೆಂಪು ಅವರ ಜನ್ಮದಿನಾಚರಣೆ 2025 ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ



































