ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ ತಾಲ್ಲೂಕಿನ ಸಿಡ್ಬಿ ಉದ್ಯಮ ಮಾಡುವವರ ವಿಶೇಷ ತರಬೇತಿ ಕಾರ್ಯಾಗಾರವನ್ನು ದ.ಕ-2 ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕ ರವರು ಉದ್ಘಾಟಿಸಿ ಶ್ರೀ ಕ್ಷೇತ್ರ ದ ವೈಶಿಷ್ಟ್ಯ, ಕ್ಷೇತ್ರದ ಕಾರ್ಯಕ್ರಮಗಳು ಮತ್ತು ಸಿಡ್ಬಿ ಸ್ವ-ಉದ್ಯೋಗ ಮಾಡುವವರಿಗೆ ರುಡ್ಸೆಟ್ ಸಂಸ್ಥೆಯಿಂದ ಹಲವು ರೀತಿಯ ಕೌಶಲ್ಯಾಭಿವೃದ್ಧಿ ತರಬೇತಿ ಇರುವ ಬಗೆ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯ ಬಹುದೆಂಬುದರ ಬಗ್ಗೆ ಮಾಹಿತಿ ನೀಡಿದರು.
ರುಡ್ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಶ್ರೀ ಕರುಣಾಕರ ಜೈನ್ ರವರು ಉದ್ಯಮ ಮಾಡುವ ಹಾಗೂ ಮಾಡಿರುವ ಸದ್ಯಸರಲ್ಲಿ ಪ್ರತ್ಯೇಕವಾಗಿ ಪ್ರತಿಯೊಬ್ಬರಲ್ಲಿ ಮಾತನಾಡಿ ಸಲಹೆ ಸೂಚನೆಯನ್ನು ನೀಡಿದರು.
ಕೇಂದ್ರ ಕಚೇರಿಯ ಸಿಡ್ಬಿ ವಿಭಾಗದ ಯೋಜನಾಧಿಕಾರಿಯವರಾದ ಶ್ರೀಮತಿ ಅನುಷಾ ರೈ ರವರು ಸ್ವ ಉದ್ಯೋಗ ಬಗ್ಗೆ ಹಾಗೂ ಯಾವ ಯಾವ ಉದೇಶಗಳಿಗೆ ಸಾಲ ಪಡೆಯಬಹುದು,
ಸಾಲ ಪಡೆಯುವ ಸಂದರ್ಭ ಬೇಕಾಗುವ ದಾಖಲಾತಿಗಳ ಬಗ್ಗೆ,
ಸಿಡ್ಬಿ ಸಾಲದ ನಿಯಮ ಮತ್ತು ನಿಬಂಧನೆಗಳ ಬಗ್ಗೆ, ಸಿಡ್ಬಿ ಸಾಲದ ಮರುಪಾವತಿ ಬಗ್ಗೆ ಹಾಗೂ ಸಿಬಿಲ್ ರಿಪೋರ್ಟ್ ಇತ್ಯಾದಿ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.
ಯೋಜನಾಧಿಕಾರಿಯಾದ ಶ್ರೀ ಮಾಧವ ಗೌಡ ರವರು ಸಾಲ ಬೇಡಿಕೆಯ ಬಗ್ಗೆ ಬಗ್ಗೆ ಸದಸ್ಯರಲ್ಲಿ ಚರ್ಚಿಸಿದ್ದರು.
ಸುಳ್ಯ ವಲಯದ, ಮೇಲ್ವಿಚಾರಕರಾದ ಶ್ರೀ ದಿನೇಶ್ ರವರು ನಿರೂಪಣೆ ಮಾಡಿದರು ಹಾಗೂ
ಸುಳ್ಯ ಯೋಜನಕಚೇರಿಯ ಕಛೇರಿ ಸಹಾಯಕಿ ಶ್ರೀಮತಿ ಮಮತಾ ರವರು ಎಲ್ಲರನು ಸ್ವಾಗತಿಸಿದರು. ಆಡಳಿತ ಸಹಾಯಕ ಪ್ರಬಂಧಕರಾದ ರೋಷನ್ ಆಂಟೋನಿ ರವರು, ಎಲ್ಲರನ್ನು ವಂದಿಸಿದರು.
🌹🌹💐



































