ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ.ಟ್ರಸ್ಟ್. (ರಿ).ಗುತ್ತಿಗಾರು ವಲಯ.ಸಾಮೂಹಿಕ ಶ್ರೀ ಧನ್ವಂತರಿ ಪೂಜಾ ಕಾರ್ಯಕ್ರಮ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ,ವಳಲಂಬೆ ಶ್ರೀ ಶಂಕಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಿತು. ಸಾಮೂಹಿಕ ಶ್ರೀ ಧನ್ವಂತರಿ ಪೂಜಾ ಸಮಿತಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಜನಜಾಗೃತಿ ವೇದಿಕೆ, ಶೌರ್ಯ ವಿಪತ್ತು ನಿರ್ವಹಣಾ ತಂಡ, ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ವಳಲಂಬೆ ಹಾಗೂ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಗುತ್ತಿಗಾರು ವಲಯ.ಇವರ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಧಾರ್ಮಿಕ ಮುಖಂಡರಾಗಿರುವ ಶ್ರೀ ರಾಜೇಶ್ ಮೇನಾಲರವರು ದೀಪ ಬೆಳಗಿಸಿ ಉದ್ಘಾಟಿಸಿ, ಧಾರ್ಮಿಕ ಉಪನ್ಯಾಸ ನೀಡಿದರು.
ಧನ್ವಂತರಿ ಪೂಜೆಯ ಮಹತ್ವ ಮತ್ತು ಹಿಂದೂ ಸಂಸ್ಕೃತಿ, ಸಂಸ್ಕಾರದ, ಆಚರಣೆ, ವಿಚಾರ,ಕಾರ್ಯಕ್ರಮದ ಮಹತ್ವದ ಕುರಿತು ಮಾಹಿತಿಯನ್ನು ನೀಡಿದರು.
ಸದ್ರಿ ಕಾರ್ಯಕ್ರಮದಲ್ಲಿ ಜನಜಾಗೃತಿ ನಿಕಟಪೂರ್ವ ಅಧ್ಯಕ್ಷರಾಗಿರುವ ಶ್ರೀ .ಪಿ.ಸಿ ಜಯರಾಮ ಗೌಡ ಮಡಪ್ಪಾಡಿ ಇವರಿಗೆ ಸಹಕಾರ ರತ್ನ ಪ್ರಶಸ್ತಿ ಕುರಿತು ವೇದಿಕೆಯಲ್ಲಿ ಗೌರವಿಸಲಾಯಿತು. ಹಾಗೂ ಸದ್ರಿ ಕಾರ್ಯಕ್ರಮದ ಕುರಿತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಲವು ಸಮಾಜಮುಖಿ ಕಾರ್ಯಕ್ರಮಗಳು ಇನ್ನು ಹೆಚ್ಚಿನ ಜನತೆಗೆ ತಲುಪಲಿ ಎನ್ನುವ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾಗಿರುವ ಶ್ರೀ ಬಾಬು ನಾಯ್ಕ್ ಇವರು ಮಾತನಾಡಿ ಧನ್ವಂತರಿ ಪೂಜೆ ಇದು ವಿಶೇಷ ಪೂಜೆಯಾಗಿದ್ದು, ಈ ಕಾರ್ಯಕ್ರಮದಲ್ಲಿ ಭಾಗಸಿರುವ ಎಲ್ಲರಿಗೂ ಆರೋಗ್ಯ,ಹಾಗೂ ನೆಮ್ಮದಿ ನೀಡಲಿ ಎಂದು ಶುಭ ಹಾರೈಸಿದರು.
25 ರಿಂದ 2025 ವರೆಗೆ ಒಕ್ಕೂಟದ ಪದಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ ಪದಾಧಿಕಾರಿಗಳನ್ನು ವಿಶೇಷವಾಗಿ ಗೌರವಿಸಲಾಯಿತು. ಹಾಗೂ ಒಕ್ಕೂಟದ ಪದಾಧಿಕಾರಿಗಳಿಗೆ ಮತ್ತು ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ವೆಂಕಟ್ ದಂಬೆಕೋಡಿ. ನಿಕಟಪೂರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವೆಂಕಟ ವಳಲಂಬೆ. ಸುಳ್ಯ ತಾಲೂಕು ಸ್ವಸಹಾಯ ಸಂಘಗಳ ಒಕ್ಕೂಟಗಳ ಕೇಂದ್ರ ಸಮಿತಿ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ. ಸಮಿತಿಯ ಗೌರವಾಧ್ಯಕ್ಷರಾದ ಮಿತ್ರದೇವ ಮಡಪ್ಪಾಡಿ. ಶುಭಹಾರೈಕೆ ಮಾಡಿದರು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂಜಾ ಸಮಿತಿ ಅಧ್ಯಕ್ಷರಾಗಿರುವ ಶ್ರೀ ಯೋಗೀಶ್ ದೇವ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ತಾಲೂಕು ನಿರ್ದೇಶಕಿ ಶ್ರೀಮತಿ ರವಿಕಲಾ ಚೆಮ್ನೂರು,ಗುತ್ತಿಗಾರು ಭಜನಾ ಪರಿಷತ್ ಅಧ್ಯಕ್ಷ ರಾದ ಶ್ರೀ ಪೂರ್ಣಚಂದ್ರ ಪೈಕ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ತಾಲೂಕು ಕ್ಯಾಪ್ಟನ್ ಸತೀಶ್ ಬಂಬುಳಿ,
ಪೂಜಾ ಸಮಿತಿ ಗೌರವ ಸಲಹೆಗಾರದ ಶ್ರೀ ಬಾಬು ಮಾಸ್ತರ್ ಆಚ್ರಪ್ಪಾಡಿ, ಶ್ರೀ ಮುಳಿಯ ಕೇಶವ ಭಟ್, ಶ್ರೀ ಬಿ.ಕೆ.ಬೆಳ್ಯಪ್ಪ ಗೌಡ,ನಳಿನಾಕ್ಷ ಹಿರಿಯಡ್ಕ, ಶ್ರೀ ವಿಜಯಕುಮಾರ್ ಚಾರ್ಮಾತ, ಶ್ರೀ ಕೇಶವ ಹೊಸೊಲಿಕೆ, ಶ್ರೀ ವೇಣುಕುಮಾರ್ ಚಿತ್ತಡ್ಕ, ಉಪಸ್ಥಿತರಿದ್ದರು.
ಪ್ರಾಸ್ತವಿಕ ಮತ್ತು ಸ್ವಾಗತವನ್ನು ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀ ಮಾದವ ಗೌಡ ಇವರು ನಡೆಸಿಕೊಟ್ಟರು.ಗುತ್ತಿಗಾರು ವಲಯ ಮೇಲ್ವಿಚಾರಕ ಶ್ರೀ ರಾಜೇಶ್ ಅವರು ವಲಯದ ವರದಿ ವಾಚಿಸಿದರು.
ಕಾರ್ಯಕ್ರಮದಲ್ಲಿ ಸಮಿತಿ ಎಲ್ಲ ಪದಾಧಿಕಾರಿಗಳು, ವಲಯದ ಸೇವಾ ಪ್ರತಿನಿಧಿಗಳು ವಲಯದ ಎಲ್ಲಾ ಒಕ್ಕೂಟದ ಅಧ್ಯಕ್ಷರು,ಹಾಗೂ ಪದಾಧಿಕಾರಿಗಳು, ಜ್ಞಾನವಿಕಾಸ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.
ಒಕ್ಕೂಟಗಳ ಸದಸ್ಯರಿಗೆ ಹಗ್ಗ ಜಗ್ಗಾಟ ಸ್ಪರ್ಧೆಗಳನ್ನು ಏರ್ಪಡಿಸಿ, ಸ್ವಸಹಾಯ ಸಂಘಗಳ ನಡುಗಲ್ಲು ಒಕ್ಕೂಟ ಪ್ರಥಮ ಬಹುಮಾನ. ಹಾಗೂ ಹಾಲೆಮಜಲು ಒಕ್ಕೂಟ ದ್ವಿತೀಯ ಬಹುಮಾನ.
ಪ್ರಗತಿ ಬಂದು ಸಂಘಗಳಲ್ಲಿ ನಾಲ್ಕೂರು ಶೌರ್ಯ ಘಟಕ ಪ್ರಥಮ, ಹಾಗೂ ಹಾಲೆಮಜಲು ಒಕ್ಕೂಟದ ಸದಸ್ಯರು ದ್ವಿತೀಯ ಬಹುಮಾನ ಪಡೆದರು.ವಿಜೇತರಿಗೆ ಸಮಿತಿ ವತಿಯಿಂದ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮವನ್ನು ಕಿಶೋರ್ ಕುಮಾರ್ ಪೈಕ, ಹಾಗೂ ಹರಿಶ್ಚಂದ್ರ ಕುಳ್ಳಂಪ್ಪಾಡಿ ನಿರ್ವಹಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ.ಟ್ರಸ್ಟ್. (ರಿ).ಗುತ್ತಿಗಾರು ವಲಯದಿಂದ ಸಾಮೂಹಿಕ ಶ್ರೀ ಧನ್ವಂತರಿ ಪೂಜಾ ಕಾರ್ಯಕ್ರಮ

















