21 ಕಿ.ಮೀ.ರಾತ್ರಿ ಪಾದಾಯಾತ್ರೆ ಕೈಗೊಂಡು ಮುಂಜಾನೆ ಧನು ಪೂಜೆಗೆ ತೊಡಿಕಾನ ಮಲ್ಲಿಕಾರ್ಜುನ ದೇವರ ಸನ್ನಿಧಿ ಸೇರಿಕೊಂಡ ಭಕ್ತ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದಲ್ಲಿ ಧನುರ್ ಮಾಸ ಪ್ರಯುಕ್ತ ಇದೀಗ ಮುಂಜಾನೆ ಧನುಪೂಜೆ ನಡೆಯುತ್ತಿದ್ದು ಭಕ್ತರೊಬ್ಬರು ಜ.3ರಂದು ರಾತ್ರಿ ಪಾದಯಾತ್ರೆಯಲ್ಲಿ ಹೊರಟು ಗುರಿ ತಲುಪಿ ಜ.4ರಂದು ಮುಂಜಾನೆ ನಡೆದ ಧನುಪೂಜೆಯಲ್ಲಿ ಪಾಲ್ಗೋಂಡು ಶ್ರೀ ಮಲ್ಲಿಕಾರ್ಜುನ ದೇವರ ದರ್ಶ‌ನ ಪಡೆದ ಅಪರೂಪದ ಘಟನೆ ವರದಿಯಾಗಿದೆ.
ಮೂಲತ ಅಜ್ಜಾವರ ಗ್ರಾಮದ ಮೇನಾಲ ಇರಂತಕಜೆ ನಿವಾಸಿ ರಮೇಶ್ ಕಾಲ್ನಡಿಯಲ್ಲಿ ಸಾಗಿ ಧನು ಪೂಜೆಯಲ್ಲಿ ಭಾಗಿಯಾಗಿ ಶ್ರೀ ದೇವರ ದರ್ಶನ ಪಡೆದ ಭಕ್ತರಾಗಿದ್ದಾರೆ.
ಅವರು ಸುಳ್ಯ ಜಯನಗರದ ಕೊರಂಬಡ್ಕದ ತನ್ನ ಮನೆಯಿಂದ ಮನೆಯ ಪಕ್ಕದ ದೈವಸ್ಥಾನಕ್ಕೆ ತೆರಳಿ ಕೊರಗಜ್ಜ ದೈವಕ್ಕೆ ಕೈ ಮುಗಿದು ಜ.3ರಂದು ರಾತ್ರಿ 10.45ಕ್ಕೆ ತೊಡಿಕಾನ ದೇವಳದತ್ತ ಹೊರಟರು ಜ.4ರಂದು ಬೆಳಿಗ್ಗೆ 3.30 ಗಂಟೆಗೆ ದೇವಳಕ್ಕೆ ತಲಪಿ ಸುಮಾರು 21 ಕಿ.ಮೀ ದೂರ ಕ್ರಮಿಸಿದ್ದಾರೆ.ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ ದೇವಳದಲ್ಲಿ ನಡೆಯುವ ಧನು‌ ಪೂಜೆಗೆ ಕಾಲ್ನಡಿಗೆಯಲ್ಲಿ ತೆರಳಬೇಕು ಎಂದು ನಾನು ಬಯಸಿದ್ದೆ.ಆ ಕಾಲ ಯಾವುದೇ ವಿಘ್ನವಿಲ್ಲದೆ ಕೂಡಿ ಬಂದಿರುವುದು ನನಗೆ ಮಲ್ಲಿಕಾರ್ಜುನ ದೇವರು ಆಶೀರ್ವಾದ ಮಾಡಿದ್ದಾರೆ ಎಂದು ನಾನು ತಿಳಿದುಕೊಂಡಿದ್ದೇನೆ ಎಂದು ರಮೇಶ್ ಮಾರ್ದನಿ ಡಿಜಿಟಲ್ ಮಾದ್ಯಮಕ್ಕೆ ತಿಳಿಸಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top