ರಾಜಸ್ತಾನದ ವಿಶ್ವ ವಿದ್ಯಾಲಯದಲ್ಲಿ ಎಂ.ಎ ಪಬ್ಲಿಕ್ ಪಾಲಿಸಿ ಲಾ ಅಂಡ್ ಗವರ್ನಯನ್ಸ್ (M A Public Policy Law And Governance) ಓದುತ್ತಿರುವ ಸೋಮವಾರಪೇಟೆಯ
ಇಶಾ ಎಸ್ ಎ. ಪ್ರಥಮ ವರ್ಷದ ಸೆಮಿಸ್ಟರ್ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿನಿಯಾಗಿದ್ದಾಳೆ.
ಪ್ರಥಮ ವರ್ಷದ ಪರೀಕ್ಷೆಯಲ್ಲಿ ಶೇ. 8.60 ಶ್ರೇಣಿಯಲ್ಲಿ ಉತ್ತರ ಪ್ರದೇಶದ ವಿದ್ಯಾರ್ಥಿನಿಯು ಪ್ರಥಮ ಸ್ಥಾನ ಗಿಟ್ಟಿಸಿ ಕೊಂಡಿದ್ದರೆ,
ಇಶಾ ಶೇ. 8.20 ಶ್ರೇಣಿಯಲ್ಲಿ ಕರ್ನಾಟಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು, ರಾಜ್ಯಕ್ಕೆ ಕೀರ್ತಿಯನ್ನು ತಂದು ಕೊಟ್ಟಿದ್ದಾಳೆ.
ಇಶಾ ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸೋಮವಾರಪೇಟೆಯ ಓ ಎಲ್ ವಿ ಕಾನ್ವೆಂಟ್ ಮತ್ತು ಜವಾಹರ್ ನವೋದಯ ವಿದ್ಯಾಲಯ ಗಾಳಿಬೀಡುವಿನಲ್ಲಿ, ಪದವಿಪೂರ್ವ ಶಿಕ್ಷಣವನ್ನು ಸಂತ ಜೋಸೆಫರ ವಿದ್ಯಾಸಂಸ್ಥೆ ಸೋ.ಪೇಟೆಯಲ್ಲಿ ಮತ್ತು ಪದವಿ ಜೊತೆಗೆ ಯು ಪಿ ಎಸ್ ಸಿ ಕೋರ್ಸನ್ನು ಬೆಂಗಳೂರಿನ ಯೂನಿವರ್ಸಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಮತ್ತು ಹಜ್ ಭವನದಲ್ಲಿ ಮುಗಿಸಿರುತ್ತಾಳೆ.
ಗೋಣಿಮರೂರು ಸರಕಾರಿ ಪ್ರೌಢ ಶಾಲೆಯಲ್ಲಿ ಹಿಂದಿ ಅತಿಥಿ ಶಿಕ್ಷಕಿಯಾಗಿ ಕೆಲವು ತಿಂಗಳು ಕರ್ತವ್ಯ ನಿರ್ವಹಿಸಿರುತ್ತಾಳೆ.
ಇಶಾ ಸೋಮವಾರಪೇಟೆಯ ಲೇಖಕಿ ರುಬೀನಾ ಎಂ.ಎ ಮತ್ತು ಆಸಿಫ್ ದಂಪತಿಗಳ ಪ್ರಥಮ ಪುತ್ರಿಯಾಗಿದ್ದಾಳೆ.
ಎಂ.ಎ ಪರೀಕ್ಷೆಯಲ್ಲಿ ರಾಜ್ಯಕ್ಕೆ ಇಶಾ ಎಸ್.ಎ ದ್ವಿತೀಯ

















