ತೊಡಿಕಾನ : ಫೆ.7ಕ್ಕೆ ತೊಡಿಕಾನ ಮಲ್ಲಿಕಾರ್ಜುನ ದೇವಳದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ

ತೊಡಿಕಾನ : ಶ್ರೀ.ಕ್ಷೇ.ಧ.ಗ್ರಾ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಸುಳ್ಯ ತಾಲೂಕು, ಸುಳ್ಯ ಸೀಮೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾನ, ಸಂಪಾಜೆ ವಲಯದ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮತ್ತು ಊರವರ ಸಹಯೋಗದೊಂದಿಗೆ ತೊಡಿಕಾನ ದೇವಳದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಕಾರ್ಯಕ್ರಮ ಫೆ.7ರಂದು ನಡೆಸುವುದೆಂದು ತೊಡಿಕಾನ ಬಿ.ಎಸ್ ಗೌಡ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತೀರ್ಮಾ ನಿಸಲಾಯಿತು.
ಪೂರ್ವ ತಯಾರಿ ಸಭೆಯನ್ನು ಶ್ರೀ ಮಲ್ಲಿಕಾರ್ಜುನ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೇಶವ ಕೊಳಲು ಮೂಲೆ ದೀಪ ಪ್ರಜ್ವಲನೆ ಮಾಡಿ ಸಭಾಧ್ಯಕ್ಷತೆ ವಹಿಸಿದ್ದರು. ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷರಾಗಿ ಮಾಲತಿ ಬೋಜಪ್ಪ ಆಯ್ಕೆಯಾದರು ಹಾಗೂ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ಜನಜಾಗೃತಿ ಅಧ್ಯಕ್ಷರಾದ ಲೋಕನಾಥ ಅಮೆಚೂರು ತಾಲೂಕು ಭಜನಾ ಪರಿಷತ್ ಅಧ್ಯಕ್ಷರು ಸೋಮಶೇಖರ್ ಪೈಕ , ವಲಯ ಭಜನಾ ಪರಿಷತ್ ಅದ್ಯಕ್ಷರಾದ ಭಾರತಿ ಪುರುಶೋತ್ತಮ, ಪದಾಧಿಕಾರಿ ಚಂದ್ರಶೇಖರ ಆಚಾರ್ಯ ,ಕಾರ್ಯದರ್ಶಿ ನಾರಾಯಣ ಅಜ್ಜಿ ಕಲ್ಲು, ಚಂದ್ರಾವತಿ ಕುತ್ತಮೊಟ್ಟೆ, ಅಶೋಕ ಪೀಚೆ, ಯೋಜನಾಧಿಕಾರಿ ಮಾಧವ ಗೌಡ, ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪುಷ್ಪಾ ಮೇದಪ್ಪ , ಶ್ರೀ ದೇವಳದ ಮೇನೇಜರ್ ,ಶ್ರೀ ಆನಂದ ಕಲ್ಲಗೆದ್ದೆ, ದೇವ ಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ತಿಮ್ಮಯ್ಯ ಮೆತ್ತೆಡ್ಕ, ಶ್ರೀ ಬಾಲಕೃಷ್ಣ ಕುಂಟು ಕಾಡು, ಚಂಚಾಲಾಕ್ಷಿ ನಾಗೇಶ್ , ಹಾಗೂ ವಲಯ ಅಧ್ಯಕ್ಷರು ,ಒಕ್ಕೂಟ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಗ್ರಾಮಾ ಸ್ಥರು , ವಲಯದ ಮೇಲ್ವಿಚಾರಕರು ಹಾಗೂ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top