ಕ್ರೀಡೆಯ ಸೋಲು ಗೆಲುವನ್ನು ಕ್ರೀಡಾಪಟುಗಳು ಸಮಾನಾಗಿ ಕಾಣಾಬೇಕು : ಡಾ. ಹರ್ಷವರ್ದನ

ಕ್ರೀಡೆಯ ಸೋಲು ಗೆಲುವನ್ನು ಕ್ರೀಡಾಪಟುಗಳು ಸಮಾನಾಗಿ ಕಾಣಾಬೇಕೆಂದು ಸುಳ್ಯ ಕೆ.ವಿ.ಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರೋಪೆಸರ್ ಡಾ. ಹರ್ಷವರ್ದನ ಹೇಳಿದರು.
ಅಮೃತ ಮಹೋತ್ಸವ ಆಚರಣಾ ಸಮಿತಿ, ಹಿರಿಯ ವಿದ್ಯಾರ್ಥಿ ಸಂಘ ಮತ್ತು ಶಾಲಾಭಿವೃದ್ಧಿ ಸಮಿತಿ
ಇವರ ಜಂಟಿ ಆಶ್ರಯದಲ್ಲಿ
ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ತೊಡಿಕಾನ ಇದರ 75 ನೇ ವರ್ಷದ ಸವಿ ನೆನಪಿಗಾಗಿ ಅಮೃತ ಕ್ರೀಡೋತ್ಸವನ್ನು ಹಿರಿಯ ವಿದ್ಯಾರ್ಥಿ ಗಳಿಗೆ ಮತ್ತು ತೊಡಿಕಾನ ಗ್ರಾಮದ ಸಾರ್ವಜನಿಕರಿಗೆ ಶಾಲಾ ಆವರಣದಲ್ಲಿ ಜ.4ರಂದು ಹಮ್ಮಿಕೊಂಡ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತ‌ನಾಡಿದರು.
ಕ್ರೀಡೆ ದೈಹಿಕ ಬಲವನ್ನು ಹೆಚ್ಚಿಸಿದರೆ ಮಾನಸಿಕ ಬಲವನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.
ಅಮೃತ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ
ಸಂತೋಷ್ ಕುತ್ತಮೊಟ್ಟೆ ಕ್ರೀಡಾ ಧ್ವಜಾ ರೋಹಣ ನೆರವೇರಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗ್ರಾಮ ಪಂಚಾಯತ್ ಸದಸ್ಯರಾದ ರವೀಂದ್ರ ಪಂಜಿಕೋಡಿ ಉಷಾ ಅಡ್ಯಡ್ಕ ಹಿರಿಯ ವಿದ್ಯಾರ್ಥಿ ಸಂಘದ ಹಿರಿಯ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ನವೀನ್ ಅಮೆಮನೆ ಮುಖ್ಯೋಪಾಧ್ಯಾಯರಾದ ಅರುಣ್ ಕುಮಾರ್,
ಕ್ರೀಡಾ ಸಮಿತಿ ಸಂಚಾಲಕ ಉಮಾಶಂಕ‌ರ್ ಎ.ಜಿ
ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕಿ ಮಮತ ಸ್ಚಾಗತಿಸಿದರು.ಶಿಕ್ಷಕಿ ಸ್ನೇಹಲತಾ ವಂದಿಸಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top