ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘ ದ.ಕ. ಜಿಲ್ಲೆ ಇದರ ೨೦೨೪ – ೨೫ನೇ ಸಾಲಿನ ವಾರ್ಷಿಕ ಮಹಾಸಭೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಕೌಟುಂಬಿಕ ಸಮೀಕ್ಷೆ ಅರ್ಜಿ ಫಾರಂ ಬಿಡುಗಡೆಯು ಸುಳ್ಯ ಕೊಡಿಯಾಲಬೈಲು ಗೌಡ ಸಮುದಾಯ ಭವನದಲ್ಲಿ ಜ.೪ರಂದು ನಡೆಯಿತು.
ಸಂಘದ ಅಧ್ಯಕ್ಷ ಲೋಕಯ್ಯ ಗೌಡ ಕೆ. ಯವರ ಅಧ್ಯಕ್ಷತೆ ವಹಿಸಿದ್ದರು.
ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘ (ರಿ.)
ಸಂಘದ ಕಾರ್ಯದರ್ಶಿ ರಾಮಣ್ಣ ಗೌಡ ಕೊಂಡೆಬಾಯಿ ವಾರ್ಷಿಕ ವರದಿ ವಾಚಿಸಿದರು.
ಕೋಶಾಧಿಕಾರಿ ಪದ್ಮ ಗೌಡ ಬೆಳಾಲು ಲೆಕ್ಕಪತ್ರ ಮಂಡಿಸಿದರು.ಮಹಾಸಭೆಯ ಬಳಿಕ ಸಮಾಜದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಜಿಲ್ಲಾ ಸಂಘದ ಅಧ್ಯಕ್ಷ ಲೋಕಯ್ಯ ಗೌಡರ ಅಧ್ಯಕ್ಷತೆಯಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಮ್ಮ ಈ ಜಿಲ್ಲಾ ಸಂಘಕ್ಕೆ ೧೦ ಸಾವಿರ ಮಂದಿ ಸದಸ್ಯರನ್ನು ಮಾಡಬೇಕೆಂಬ ಗುರಿ ನಮ್ಮಲ್ಲಿದೆ. ಆಗ ೧ ಕೋಟಿ ರೂ. ನಮ್ಮಲ್ಲಿ ಆಧಾಯ ಬಂದು ಅದರ ಬಡ್ಡಿಯಲ್ಲಿ ವರ್ಷಂಪ್ರತಿ ಕಾರ್ಯಕ್ರಮ ಮಾಡುವ ಯೋಜನೆಯನ್ನು ನಾವು ಹಾಕಿಕೊಂಡಿದ್ದೇವೆ.ಸಮಾಜದ ಎಲ್ಲರೂ ನಮ್ಮೊಡನೆ ಸಹಕಾರ ನೀಡಬೇಕು. ಕೌಟುಂಬಿಕ ಸಮೀಕ್ಷೆಗಾಗಿ ಅರ್ಜಿ ಫಾರಂನ್ನು ನಾವು ಸಿದ್ದಗೊಳಿಸಿದ್ದೇವೆ ಈ ಫಾರಂ ನ್ನು ಪ್ರತೀ ಮನೆಗೂ ನೀಡಲಾಗುವುದು. ಅವರು ಅದನ್ನು ಭರ್ತಿ ಮಾಡಿ ನೀಡಿದಾಗ ನಮ್ಮ ಜನಸಂಖ್ಯೆ, ವೃತ್ತಿ, ಕುಲ ಗೋತ್ರ, ಆರ್ಥಿಕತೆ ಹೀಗೆ ಎಲ್ಲ ಮಾಹಿತಿಗಳು ನಮ್ಮಲ್ಲಿ ಇರುತ್ತದೆ ಎಂದು ಹೇಳಿದರು.
ಸಮಾರಂಭವನ್ನು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ| ರೇಣುಕಾಪ್ರಸಾದ್ ಕೆ.ವಿ. ಯವರು ಉದ್ಘಾಟಿಸಿ, ೬ ಮಂದಿ ಸಾಧಕರನ್ನು ಸನ್ಮಾನಿಸಿ, ಕೌಟುಂಬಿಕ ಸಮೀಕ್ಷೆ ಅರ್ಜಿ ಫಾರಂ ನ್ನು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ನಮ್ಮ ಹಿರಿಯರು ಮಾಡಿದ ಸಾಧನೆಯನ್ನು ಯುವ ಜನಾಂಗಕ್ಕೆ ತಿಳಿಸಿ, ಅದರಿಂದ ಅವರು ಪ್ರೇರಣೆ ಪಡೆಯುವಂತಾಗಬೇಕು. ಮತ್ತು ಇಂತಹ ಕಾರ್ಯಕ್ರಮಕ್ಕೆ ನಾವು ಬರುವುದರ ಜತೆಗೆ ನಮ್ಮ ಮಕ್ಕಳನ್ನು ಕೂಡಾ ಕರೆದುಕೊಂಡು ಬರಬೇಕು. ನಮ್ಮ ಹಿರಿಯರು ಮಾಡಿದ ಸಾಧನೆಗಳ ಚರಿತ್ರೆಯನ್ನು ದಾಖಲಿಸುವ ಕೆಲಸವನ್ನು ಎಲ್ಲರೂ ಸೇರಿ ಮಾಡಬೇಕು. ಇದು ನಮ್ಮ ಸಮುದಾಯದ ಎಲ್ಲರ ಜವಾಬ್ದಾರಿ. ಅದನ್ನು ಪ್ರಿಂಟ್ ಮಾಡಿ ಸಮಾಜಕ್ಕೆ ಕೊಡುವ ಕೆಲಸ ನನ್ನದು. ಕೌಟುಂಬಿಕ ಸಮೀಕ್ಷೆಯಯಲ್ಲಿ ಕೂಡಾ ನಾವೆಲ್ಲರೂ ಉದಾಸೀನ ಮಾಡದೇ ತೊಡಗಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಸಹಕಾರಿ ಕ್ಷೇತ್ರದ ಸಾಧಕ ಪಿ.ಸಿ. ಜಯರಾಮ್ (ಸುಳ್ಯ ತಾಲೂಕು), ಯಕ್ಷಗಾನ ಕ್ಷೇತ್ರದಲ್ಲಿ ಬೆಳಾಲು ಲಕ್ಷ್ಮಣ ಗೌಡ (ಬೆಳ್ತಂಗಡಿ ತಾಲೂಕು), ದೇಶ ಸೇವೆಯಲ್ಲಿ ಚಿದಾನಂದ ಗೌಡ ಕಡಮ್ಮಾಜೆ (ಬಂಟ್ವಾಳ ತಾಲೂಕು), ಧಾರ್ಮಿಕ ಕ್ಷೇತ್ರದಲ್ಲಿ ಪರಮೇಶ್ವರ ಗೌಡ ಬಲ್ನಾಡು ಕಟ್ಟೆಮನೆ (ಪುತ್ತೂರು ತಾಲೂಕು), ಸಮಾಜ ಸೇವೆಯಲ್ಲಿ ಜನಾರ್ದನ ಮಾಸ್ತರ್ ಪಣೆಮಜಲು (ಕಡಬ ತಾಲೂಕು), ಉದ್ಯಮ ಕ್ಷೇತ್ರದಲ್ಲಿ ಪುರುಷೋತ್ತಮ ಗೌಡ ಕಮಿಲ (ಮಂಗಳೂರು ತಾಲೂಕು) ಇವರನ್ನು ಸನ್ಮಾನಿಸಲಾಯಿತು.ಕ್ಯಾಂಪ್ಕೋ ನಿರ್ದೇಶಕರಾಗಿ ಚುನಾಯಿತರಾದ ಎ.ವಿ. ತೀರ್ಥರಾಮ, ಹಿರಿಯರಾದ ಪಾರ್ವತಿ ಕಡಪಳ, ಗಾಂಧಾರಿ ವಿದ್ಯೆ ಪರಿಣಿತೆ ಕು. ಶಮಿಕ ಉಪ್ಪಿನಂಗಡಿ ಯವರನ್ನು ಗೌರವಿಸಲಾಯಿತು. ಸನ್ಮಾನಿತರ ಪರವಾಗಿ ಪಿ.ಸಿ.ಜಯರಾಮರು ಮಾತನಾಡಿದರು.ಸಂಘದ ಉಪಾಧ್ಯಕ್ಷರುಗಳಾದ ನಿತ್ಯಾನಂದ ಮುಂಡೋಡಿ,, ಕೆ.ಲಿಂಗಪ್ಪ ಗೌಡ ಬಂಟ್ವಾಳ, ರಾಮದಾಸ್ ಗೌಡ ಎಸ್. ಪುತ್ತೂರು, ಪ್ರಧಾನ ಕಾರ್ಯದರ್ಶಿ ದಿನೇಶ್ ಮಡಪ್ಪಾಡಿ, ಕೋಶಾಧಿಕಾರಿ ಹೆಚ್. ಪದ್ಮ ಗೌಡ ಬೆಳಾಲು, ಕಾರ್ಯದರ್ಶಿ ರಾಮಣ್ಣ ಗೌಡ ಕೊಂಡೆಬಾಯಿ, ಸುಳ್ಯ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ್, ಬೆಳ್ತಂಗಡಿ ಒಕ್ಕಲಿಗರ ಗೌಡ ಸೇವಾ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಬೆಳ್ತಂಗಡಿ, ಮಂಗಳೂರು ಒಕ್ಕಲಿಗರ ಸಂಘದ ಅಧ್ಯಕ್ಷೆ ಸೌಮ್ಯ ಸುಕುಮಾರ್ ವೇದಿಕೆಯಲ್ಲಿ ಇದ್ದರು.ರಾಕೇಶ್ ಕುಂಟಿಕಾನ, ಶ್ರೀನಾಥ್ ಕೆ., ರಾಮಣ್ಣ ಗೌಡ ಅನಂತಾಡಿ, ರಾಮದಾಸ್ ಗೌಡ, ತಿಮ್ಮಯ್ಯ ಪಿಂಡಿಮನೆ, ಇಂದಿರಾವತಿ ಮಂಗಳೂರು ಸನ್ಮಾನಿತರನ್ನು ಪರಿಚಯಿಸಿದರು. ಪ್ರಧಾನ ಕಾರ್ಯದರ್ಶಿ ದಿನೇಶ್ ಮಡಪ್ಪಾಡಿ ಸ್ವಾಗತಿಸಿದರು. ಲತಾಶ್ರೀ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು.
ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘ ದ.ಕ. ಜಿಲ್ಲೆ ಇದರ ೨೦೨೪ – ೨೫ನೇ ಸಾಲಿನ ವಾರ್ಷಿಕ ಮಹಾಸಭೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ

















