ಸಂಪಾಜೆ ಗ್ರಾಮದ ದೊಡ್ಡಡ್ಕ ಬಳಿ ರಾಷ್ಟ್ರೀಯ ಹೆದ್ದಾರಿಗೆ ಭಾರೀ ಗಾತ್ರದ ಮರ ಬಿದ್ದು ವಾಹನ ಸಂಚಾರಕ್ಕೆ ತಡೆ ಉಂಟಾದ ಘಟನೆ ಜ.8ರಂದು ಮುಂಜಾನೆ 2 ಗಂಟೆ ಸುಮಾರಿಗೆ ನಡೆದಿದೆ.ಅರಣ್ಯ ಇಲಾಖೆಯವರು ಸುಳ್ಯ ಹಾಗೂ ಕಲ್ಲುಗುಂಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಮರವನ್ನು ರಸ್ತೆಯಿಂದ ತೆರವುಗೊಳಿಸಿಲು ಪ್ರಯತ್ನಿಸಿದರು.
ಸಂಚಾರ ಪುನರ್ ಸ್ಥಾಪನೆಗೆ ಕಲ್ಲುಗುಂಡಿ–ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಜಿ.ಕೆ. ಹಮೀದ್ ಗೂನಡ್ಕ, ಉಪಾಧ್ಯಕ್ಷರಾದ ಎಸ್.ಕೆ. ಹನೀಫ್ ಸೇರಿದಂತೆ ಸ್ಥಳೀಯರು ಸಹಕಾರ ನೀಡಿದರು. ಆಟೋ ಚಾಲಕರಾದ ಯಶೋಧರ, ದೊಡ್ಡಡ್ಕ ರವಿ ಅವರುಗಳ ಸಹಾಯದಿಂದ ಮರವನ್ನು ತೆರವುಗೊಳಿಸಲಾಯಿತು.
ಸಂಪಾಜೆ : ರಾಷ್ಟ್ರೀಯ ಹೆದ್ದಾರಿಗೆ ಮರ ಬಿದ್ದು ರಸ್ತೆ ತಡೆ



































