ಶಾಸಕಿ‌ ಭಾಗೀರಥಿ ಮುರುಳ್ಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್, ತಕ್ಷಣ ಕಾನೂನು ಕ್ರಮಕ್ಕೆ ಒತ್ತಾಯಿಸಿ ಸುಳ್ಯದಲ್ಲಿ ಬಿಜೆಪಿಯಿಂದ ಪ್ರತಿಭಟನೆ

ಸುಳ್ಯ ವಿಧಾನ ಸಭಾ ಕ್ಷೇತ್ರ ಶಾಸಕರಾದ ಕು.ಭಾಗೀರಥಿ ಮುರುಳ್ಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿರುವವರ ವಿರುದ್ಧ ತಕ್ಷಣ ಕಾನೂನು ಕ್ರಮಕ್ಕೆ ಒತ್ತಾಯಿಸಿ ಸುಳ್ಯ ಬಿಜೆಪಿ ಮಂಡಲ ಸಮಿತಿ ನೇತೃತ್ವದಲ್ಲಿ ಸುಳ್ಯದ ಖಾಸಗಿ ಬಸ್ಸು ನಿಲ್ದಾಣ ಬಳಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ಸಭೆಯಲ್ಲಿ ಮಾತನಾಡಿದ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆಯವರು ಮಾತನಾಡಿ ಶಾಸಕಿ ಭಾಗೀರಥಿ ಮುರುಳ್ಯರವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿರುವವರನ್ನು ಇನ್ನೂ ಪೊಲೀಸರು ಬಂದಿಲ್ಲ ಶಾಸಕರ ಜನಪ್ರಿಯತೆಯನ್ನು‌ ಸಹಿಸದೇ ಈ ರೀತಿ ಕ್ರತ್ಯ ಎಸಗಿದ್ದಾರೆ ೨೪ ಗಂಟೆಯೊಳಗೆ ಆರೋಪಿಯನ್ನು ಬಂಧಿಸುವ ಕೆಲಸ ಮಾಡಬೇಕು.ತಪ್ಪಿದಲ್ಲಿ ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ ಶಾಸಕರಿಗೆ ಅವಮಾನ ಮಾಡುವುದು ಸರಿಯಲ್ಲಆರೋಪಿಯನ್ನು ತಕ್ಷಣ ಪೊಲೀಸ್ ಇಲಾಖೆ ಬಂಧಿಸಬೇಕು . ಸರಕಾರ ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದ ಅವರು, ಹಿಂದೆ ಬೆಳ್ಳಾರೆಯ ವ್ಯಕ್ತಿಯೊಬ್ಬರು ವಿದ್ಯುತ್ ಇಲ್ಲವೆಂದು ಡಿ.ಕೆ. ಶಿವಕುಮಾರ್ ರಿಗೆ ಕರೆ ಮಾಡಿದರೆಂಬ ಕಾರಣಕ್ಕೆ ರಾತ್ರೋರಾತ್ರಿ ಆ ವ್ಯಕ್ತಿಯ ಮನೆಗೆ ಪೋಲೀಸರು ಬಂದು ಮನೆಯ ಹಂಚು ತೆಗೆದು ಬಂಧಿಸುವ ಕೆಲಸ ಮಾಡಿದ್ದಾರೆ. ಆದರೆ ಈ ಪ್ರಕರಣದಲ್ಲಿ ಯಾಕೆ ಸುಮ್ಮನಿದ್ದಾರೆ. ಪೋಸ್ಟ್ ಹಾಕಿ ೨ ದಿನವಾದರೂ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.
ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕರು ಮಾತನಾಡಿ, ಕ್ಷೇತ್ರದ ಶಾಸಕರಿಗೆ ಅವಮಾನ ಮಾಡಿ ಪೋಸ್ಟ್ ಹಾಕಿರುವುದಕ್ಕೆ ಎಲ್ಲರೂ ಖಂಡನೆ ವ್ಯಕ್ತ ಪಡಿಸುತ್ತಿದ್ದಾಗ ಕಾಂಗ್ರೆಸ್ ನಾಯಕರು ಖಂಡಿಸದೇ ಇದ್ದುದು ದುರಾದೃಷ್ಟ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವುದನ್ನು ಪೋಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಆ ವ್ಯಕ್ತಿಯ ವಿರುದ್ಧ ಕ್ರಮ ಜರುಗಿಸಬೇಕೆಂದು ಅವರು ಒತ್ತಾಯಿಸಿದರು.ಬಿಜೆಪಿ ಮುಖಂಡರಾದ ಎಸ್.ಎನ್. ಮನ್ಮಥ, ವೆಂಕಟ್ ದಂಬೆಕೋಡಿ, ಸಂತೋಷ್ ಕುತ್ತಮೊಟ್ಟೆ,ಸುರೇಶ್ ಕಣೆಮರಡ್ಕ,ಚಂದ್ರಾ ಕೋಲ್ಟಾರ್ ಕೇಶವ ಅಡ್ತಲೆ, ಅಶೋಕ್ ಪೀಚೆ, ಗುರುದತ್ ಶೇಟ್, ವಸಂತ ನಡುಬೈಲು, ಶಿವರಾಮ ಕೇರ್ಪಳ, ಶಾಂತಾರಾಮ ಕಣಿಲೆಗುಂಡಿ, ಅನೂಪ್ ಬಿಳಿಮಲೆ, ಜಾನಕಿ ಮುರುಳ್ಯ, ಸುವರ್ಣಿನಿ ಪಂಜ, ಶಿಲ್ಪಾ ಸುದೇವ್, ಗಿರೀಶ್ ಕಲ್ಲುಗದ್ದೆ,ಪ್ರಭೋದ್ ಶೆಟ್ಟಿ ಮೇನಾಲ, ಶಶಿಕಲಾ ನೀರಬಿದಿರೆ, ಕಿರಣ್‌ ಕುರುಂಜಿ, ಅಶೋಕ್ ಅಡ್ಕಾರು, ಶಂಕರ ಪೆರಾಜೆ, ಸೀತಾರಾಮ ಕೊಲ್ಲರಮೂಲೆ, ಅಬ್ದುಲ್ ಕುಂಞ ನೇಲ್ಯಡ್ಕ, ಸಂತೋಷ್ ಜಾಕೆ, ಶಾರದಾ ಡಿ. ಶೆಟ್ಟಿ, ಗುಣವತಿ ಕೊಲ್ಲಂತಡ್ಕ, ಪುಷ್ಪಾ ಮೇದಪ್ಪ,ಎ.ಟಿ.ಕುಸುಮಾಧರ, ವಾಸುದೇವ ಪುತ್ತಿಲ, ಕೇಶವ ಮಾಸ್ತ‌ರ್ ಹೊಸಗದ್ದೆ, ಶ್ರೀಕಾಂತ್ ಮಾವಿನಕಟ್ಟೆ, ಶೀನಪ್ಪ ಬಯಂಬು, ಜಿನ್ನಪ್ಪ ಪೂಜಾರಿ ಕಲ್ಲುಮುಟ್ಟು, ಜಯಂತಿ ಜನಾರ್ದನ ಅಜ್ಜಾವರ, ಜಯರಾಮ ಕುಕ್ಕೆಟ್ಟಿ, ಶಿವಪ್ರಸಾದ್ ಉಗ್ರಾಣಿಮನೆ, ಅವಿನಾಶ್ ಕುರುಂಜಿ, ಚನಿಯ ಕಲ್ತಡ್ಕ, ಭಾರತಿ ಉಳುವಾರು, ಜಯಪ್ರಕಾಶ್ ಕುಂಚಡ್ಕ, ಧನಂಜಯ ಕುಂಚಡ್ಕ, ಕೃಷ್ಣಯ್ಯು ಮೂಲೆತೋಟ, ರಾಜೇಶ್‌ ಶೆಟ್ಟಿ ಮೇನಾಲ, ಸುಭೋದ್ ಶೆಟ್ಟಿ ಮೇನಾಲ, ಶಿವಾನಂದ ಕುಕ್ಕುಂಬಳ, ಶ್ರೀದೇವಿ ನಾಘರಾಜ ಭಟ್, ಜಾಹ್ನವಿ ಕಾಂಚೋಡು, ಲೋಹಿತ್ ಕೊಡಿಯಾಲ, ಕೃಷ್ಣ ಶೆಟ್ಟಿ ಕಡಬ, ರಾಜೇಶ್ ಬಿ.ಎನ್. ಸುಬ್ರಹ್ಮಣ್ಯ, ವನಿತಾ ಸುವರ್ಣ, ಪುಷ್ಪಲತಾ ಕುಕ್ಕಟ್ಟೆ, ವೀಣಾ ಮೋಂಟಡ್ಕ, ಹರಿಣಾಕ್ಷಿ ಬೇಲ್ಯ, ಶಾರದಾ ಡಿ. ಶೆಟ್ಟಿ, ಚಂದ್ರಶೇಖರ ನೂಜಿಬಾಳ್ತಿಲ, ಮಧುಸೂಧನ ಕೊಂಬಾರು, ಚಂದ್ರಹಾಸ ಶಿವಾಲ, ವಿಜಯ ಕುಶಾಲಪ್ಪ ಪೆರುವಾಜೆ, ರಾಜೇಶ್ ಕಿರಿಭಾಗ, ದಿವ್ಯಾ ಮಡಪ್ಪಾಡಿ, ಪೂರ್ಣಿಮಾ ಸೂಂತೋಡು, ಶೀಲಾ ಕುರುಂಜಿ, ಪ್ರಮೀಳಾ ಜನಾರ್ಧನ, ಶಿವಪ್ರಸಾದ್ ನಡುತೋಟ, ಚಿದಾನಂದ ಕುದ್ರಾಜೆ, ಪ್ರದೀಪ್ ಕೊಲ್ಲರಮೂಲೆ, ಲತೀಶ ಗುಂಡ್ಯ, ರಮಾನಂದ ಎಣ್ಣೆಮಜಲು, ಚಿನ್ನಪ್ಪ ಚೊಟ್ಟೆಮಜಲು, ಚಂದ್ರಶೇಖರ ದೇರಾಜೆ ಕುದ್ವಾ, ಸುಬ್ರಹ್ಮಣ್ಯ ಕುಳ, ಚಂದ್ರಶೇಖರ ಶಾಸ್ತ್ರಿ ಪಂಜ, ಲೋಕೇಶ್ ಬರೆಮೇಲು, ದಯಾನಂದ ಕುರುಂಜಿ , ನವೀನ್ ಚಾತುಬಾಯಿ, ಸುನಿಲ್ ಕೇರ್ಪಳ, ಚಿದಾನಂದ ಕುದ್ಪಾಜೆ , ಚಂದ್ರಶೇಖರ ಕೇರ್ಪಳ, ಸುಧಾಕರ ಕುರುಂಜಿಭಾಗ್, ಬುದ್ಧ ನಾಯ್, ಶಿಲ್ಪಾ ಸುದೇವ್, ನಾರಾಯಣ ಬಂಟ್ರಬೈಲು, ಸೋಮನಾಥ ಪೂಜಾರಿ, ರಮೇಶ್‌ ಇರಂತಮಜಲು, ಜಯರಾಜ ಕುಕ್ಕೆಟ್ಟಿ, ಕಿಶೋರಿ ಶೇಟ್, ಕಿಶನ್ ಜಬಳೆ, ಶ್ರೀನಾಥ ರೈ ಬಾಳಿಲ, ಮಹೇಶ್ ರೈ ಮೇನಾಲ, ಪ್ರವೀಣ ಜಯನಗರ, ಶಿವಪ್ರಸಾದ್ ಉಗ್ರಾಣಿಮನೆ,ವಿಜಯ ಆಲಡ್ಕ, ಜಗನ್ನಾಥ ಜಯನಗರ ಇತರರು‌ ಉಪಸ್ಥಿತರಿದ್ದರು‌.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top