ಜ.15ರಿಂದ ಎಣ್ಮೂರು ಮಖಾಂ ಉರೂಸ್ ಕಾರ್ಯಕ್ರಮ : ಅಬ್ದುಲ್ ಗಫೂರ್ ಕಲ್ಮಡ್ಕ

ಪ್ರತೀ ಮೂರು ವರುಷಗಳಿಗೊಮ್ಮೆ ಎಣ್ಣೂರು ಮಖಾಂ ಉರೂಸ್ ಕಾರ್ಯಕ್ರಮವನ್ನು ಆಚರಿಸಿಕೊಂಡು ಬರುತ್ತಿದ್ದು, ಅ ಪ್ರಕಾರ ಜನವರಿ ತಿಂಗಳ 15,16 ಮತ್ತು 17ನೇ ದಿನಾಂಕದಂದು ಕಜೆ ನಿಂತಿಕಲ್ಲು, ನೆಕ್ಕಿಲ, ಕರಿಂಬಿಲ, ಅಲೆಕ್ಕಾಡಿ, ಇಂದ್ರಾಜೆ, ಜಮಾಅತ್ ಗಳ ಸಹಕಾರದೊಂದಿಗೆ ಎಣ್ಣೂರು ಮಖಾಂ ಉರೂಸ್ ನಡೆಯಲಿದೆ ಎಂದು ಉರೂಸ್ ಸಮಿತಿ ಅಧ್ಯಕ್ಷ ಅಬ್ದುಲ್ ಗಪೂರ್ ಕಲ್ಮಡ್ಕ ತಿಳಿಸಿದ್ದಾರೆ.
ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ದ.ಕ ಜಿಲ್ಲೆ, ಸುಳ್ಯ ತಾಲೂಕಿನ ಐವತ್ತೊಕ್ಕು ರಹ್ಮಾನಿಯಾ ಕೇಂದ್ರ ಜುಮ್ಮಾ ಮಸ್ಕಿದ್ ಸುಮಾರು 300 ವರುಷಗಳ ಇತಿಹಾಸವನ್ನು ಹೊಂದಿರುವ ಧಾರ್ಮಿಕ ಶ್ರದ್ದಾಕೇಂದ್ರವಾಗಿದೆ. ಇಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಮದ್ದೂರತ್ ಬೀವಿ (ರ.ಅ) ರವರ ಮಖಾಂ ಹಲವಾರು ಪವಾಡಗಳಿಗೆ ಪ್ರಸಿದ್ದಿಯನ್ನು ಪಡೆದಿರುತ್ತದೆ. ಜಾತಿ ಮತ ಭೇಧವಿಲ್ಲದೆ ಇಲ್ಲಿಗೆ ಹರಕೆ ಹೊತ್ತು ಬರುವ ಎಲ್ಲಾ ಧರ್ಮದವರ ಹರಕೆಗಳು ಸಕಾರಗೊಂಡಂತಹ ಹಲವಾರು ನಿದರ್ಶನಗಳೂ ಇವೆ. ಎಲ್ಲಾ ಧರ್ಮದವರಿಂದ ಗೌರವಿಸಲ್ಪಡುವ ಎಣ್ಣೂರು ದರ್ಗಾ ಶರೀಫ್ ಒಂದು ಸಾಮರಸ್ಯದ ಕೇಂದ್ರವೂ ಆಗಿದೆ.
ದಿನಾಂಕ 15.01.2026 ರಂದು ಬೆಳಿಗ್ಗೆ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಧ್ವಜಾರೋಹಣವನ್ನು ಮಹಮ್ಮದ್ ಹನೀಫ್ ಐವತ್ತೊಕ್ಲು ನೆರವೇರಿಸಲಿದ್ದಾರೆ. ಮಗ್ರಿಬ್ ನಮಾಝಿನ ನಂತರ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಬಹು| ಅಸ್ಪಯ್ಯದ್ N.P.M ಝನುಲ್ ಆಬಿಡೀನ್ ತಂಬಳ್ ಅಲ್ ಬುಖಾರಿ ದುಗಲಡ್ಕ ರವರು ದುವಾಶೀರ್ವಚನ ನೀಡಲಿದ್ದಾರೆ. ಎಣ್ಣೂರು ಖತೀಬರಾದ ಬಹು। ಅಲ್ತಾಜ್ ಅಬ್ದುಲ್ಲಾ ಮದನಿಯವರು ಉದ್ಘಾಟನಾ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಪ್ರಖ್ಯಾತ ವಾಗ್ನಿ ಬಹು ಮುಹಮ್ಮದ್ ಇರ್ಷಾದ್ ಅಝರಿ ಮಲಪ್ಪುರಂ ಇವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ದಿನಾಂಕ 16.01.2026 ರಂದು ಮುಖ್ಯ ಪ್ರಭಾಷಣಗಾರರಾಗಿ ಬಹು| ಅನ್ವರ್ ಅಲಿ ಹುದವಿ ಪುಲಿಯಕ್ಕೋಡು ಇವರು ಆಗಮಿಸಲಿದ್ದು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ದಿನಾಕ 17.01.2026 ರಂದು ಸಂಜೆ 3:00 ಗಂಟೆಗೆ ಬೃಹತ್ ಉಮರಾ ಸಮಾವೇಶ ನಡೆಯಲಿದ್ದು, ಈ ಕಾರ್ಯಕ್ರಮವನ್ನು ವಿಧಾನಸಭಾಧ್ಯಕ್ಷರಾದ U .T ಖಾದರ್ ರವರು ಉದ್ಘಾಟಿಸಲಿದ್ದಾರೆ. ಯೆನೆಪೋಯ ವಿಶ್ವವಿದ್ಯಾನಿಲಯ ಮಂಗಳೂರು ಇಲ್ಲಿನ ಕುಲಪತಿಗಳಾದ ಹಾಜಿ| ವೈ.ಎಂ.ಕೆ. ಅಬ್ದುಲ್ಲ ಕುಂಞ ಯೆನೆಪೋಯ ಸಭಾಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಸಚಿವರಾದ ರಹೀಂ ಖಾನ್, ರಾಜ್ಯ ಸರ್ಕಾರದ ಮುಖ್ಯ ಸಚೇತಕರಾದ ಸಲೀಂ ಅಹ್ಮದ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಎ ಗಪೂರ್ ಹಾಗೂ ಇತರ ರಾಜಕೀಯ, ಸಾಮಾಜಿಕ ಹಾಗೂ ಶೈಕ್ಷಣಿಕ ನಾಯಕರುಗಳು ಭಾಗವಹಿಸಲಿದ್ದಾರೆ.
ಉರೂಸ್ ಕಾರ್ಯಕ್ರಮದ ಸಮಾರೋಪ ಸಮಾರಂಭವು ಮಗ್ರಿಬ್ ನಮಾಝಿನ ನಂತರ ನಡೆಯಲಿದ್ದು ಬಹು ಅಸ್ವಯ್ಯದ್ ಝನುಲ್ ಅಜಿದೀನ್ ತಂಜಳ್ ಅಲ್ ಬುಖಾರಿ ಎಣ್ಣೂರು ಇವರು ದುವಾಶೀರ್ವಚನ ನೀಡಲಿದ್ದಾರೆ. ಕರ್ನಾಟಕ ಮತ್ತು ಕೇರಳ ರಾಜ್ಯಾದ್ಯಾಂತ ಅತ್ಯುತ್ತಮ ವಾಗಿ ಎಂದು ಪ್ರಸಿದ್ದಿ ಪಡೆದಿರುವ ಬಹು] ಮುಹಮ್ಮದಲಿ ಸಖಾಫಿ ಮುಳ್ಳೂರ್ಕರ ಇವರು ಮುಖ್ಯ ಪ್ರಭಾಷಣ ನೀಡಲಿದ್ದಾರೆ.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಜಾತಿ ಧರ್ಮ ಬೇಧವಿಲ್ಲದೆ ಎಲ್ಲರೂ ಆಗಮಿಸಿ ಸಕ್ರೀಯವಾಗಿ ಭಾಗವಹಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕಾಗಿ ಅವರು ವಿನಂತಿಸಿಕೊಂಡರು.
ಅಬ್ದುಲ್ ಗಫೂರ್ ಕಲ್ಮಡ್ಕ, ಅಧ್ಯಕ್ಷರು ಉರೂಸ್ ಸಮಿತಿ ದರ್ಗಾ ಶರೀಫ್ ಎಣ್ಣೂರು-ಐವತ್ತೊಕ್ಕು.
ಕೆ.ಎಂ. ಇಸ್ಮಾಯಿಲ್ ಪಡ್ಡಿನಂಗಡಿ, ಅಧ್ಯಕ್ಷರು ರಹ್ಮಾನಿಯಾ ಕೇಂದ್ರ ಜುಮ್ಮಾ ಮಸ್ಟಿದ್ ಎಣ್ಣೂರು-ಐವತ್ತೊಕ್ಕು.
ಟಿ.ಎಸ್.ಅಬ್ದುಲ್ ಖಾದರ್, ಉಪಾಧ್ಯಕ್ಷರು ಉರೂಸ್ ಸಮಿತಿ ದರ್ಗಾ ಶರೀಫ್‌ಎಣ್ಣೂರು-ಐವತ್ತೊಕ್ಕು.
ಟಿ.ಎಸ್. ರಫೀಕ್, ಸಂಚಾಲಕರು ಉರೂಸ್ ಪ್ರಚಾರ ಸಮಿತಿ.ರಫೀಕ್ ಐತ್ಲೋಕು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top