ಸುಳ್ಯ ಶ್ರೀ ಚೆನ್ನಕೇಶವ ದೇವರ ಕಾಲಾವಧಿ ಜಾತ್ರೋತ್ಸವ ಅಂಗವಾಗಿ ಬ್ರಹ್ಮ ರಥೋತ್ಸವ ಜ.10ರಂದು ವೈಭವದಿಂದ ನಡೆಯಿತು.
ದೇವಳದಲ್ಲಿ ಶ್ರೀ ದೇವರ ಉತ್ಸವ ಬಲಿ ಪಲ್ಲಕ್ಕಿ ಸೇವೆಯ ಬಳಿಕ ದೇವರನ್ನು ಬ್ರಹ್ಮ ರಥದಲ್ಲಿ ಕುಳ್ಳಿರಿಸಿದ ಬಳಿಕ ದೇವರಿಗೆ ದೇವಳದ ತಂತ್ರಿಯವರು ಪೂಜಾ ವಿಧಿ ವಿಧಾನ ನಡೆಸಿದರು.ಬಳಿಕ ರಥದಲ್ಲಿ ಆರೂಢರಾದ ಶ್ರೀ ಚೆನ್ಮಕೇಶವ ದೇವರ ಪಾದಕ್ಕೆ ಗೋವಿಂದ ಕೂಗುತ್ತಾ ಭಕ್ತರು ಬ್ರಹ್ಮರಥ ಎಳೆದರು.ಸಾವಿರಾರು ಭಕ್ತರು ಶ್ರೀ ಚೆನ್ನಕೇಶವ ದೇವರ ಬ್ರಹ್ಮರಥೋತ್ಸವಕ್ಕೆ ಸಾಕ್ಷಿಯಾಗಿದರು.
ವೈಭವದಿಂದ ನಡೆದ ಸುಳ್ಶ ಶ್ರೀ ಚೆನ್ನಕೇಶವ ದೇವರ ರಥೋತ್ಸವ

















