ಸುಳ್ಯ: “ನಮ್ಮ ನಾಡು ಸಾಮರಸ್ಯ ಮತ್ತು ಸೌಹಾರ್ದತೆಯ ಸುದೀರ್ಘ ಇತಿಹಾಸವನ್ನು ಹೊಂದಿದೆ. ಆದರೆ ಇಂದು ಚರಿತ್ರೆಗಳನ್ನು ತಿರುಚುವ ಪ್ರಯತ್ನಗಳು ನಡೆಯುತ್ತಿದ್ದು, ಇದನ್ನು ನಾವೆಲ್ಲರೂ ಒಗ್ಗೂಡಿ ಎದುರಿಸಬೇಕು,” ಎಂದು ಪೇರಡ್ಕ ಜಮಾಅತ್ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಪರಿಷ್ಕರಣೆ ಸಲಹಾ ಮಂಡಳಿಯ ಅಧ್ಯಕ್ಷರಾದ (ಸಚಿವ ದರ್ಜೆ) ಜನಾಬ್ ಟಿ.ಎಂ. ಶಹೀದ್ ತೆಕ್ಕಿಲ್ ತಿಳಿಸಿದರು.
ಇತಿಹಾಸ ಪ್ರಸಿದ್ಧ ಪೇರಡ್ಕ ಗೂನಡ್ಕ ಮಖಾಂ ಉರೂಸ್ ಪ್ರಯುಕ್ತ ‘ತೆಕ್ಕಿಲ್ ಮುಹಮ್ಮದ್ ಹಾಜಿ ವೇದಿಕೆ’ಯಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಸರ್ವ ಧರ್ಮ ಸಮ್ಮೇಳನ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಸೌಹಾರ್ದತೆಯೇ ಸಮಾಜದ ಅಡಿಪಾಯ
ಇಂದಿನ ತಲೆಮಾರಿಗೆ ದೇಶದ ನೈಜ ಇತಿಹಾಸವನ್ನು ಅರಿಯುವ ಪೂರಕ ವಾತಾವರಣ ಸಿಗುತ್ತಿಲ್ಲ ಎಂದು ವಿಷಾದಿಸಿದ ಅವರು, “ಸಣ್ಣಪುಟ್ಟ ತಪ್ಪುಗಳನ್ನು ವೈಭವೀಕರಿಸುವುದನ್ನು ಬಿಟ್ಟು, ಸಮಾಜದಲ್ಲಿನ ಒಳ್ಳೆಯ ವಿಚಾರಗಳನ್ನು ಪ್ರಚುರಪಡಿಸಬೇಕು. ಆಗ ಮಾತ್ರ ಸುಂದರ ಸಮಾಜ ನಿರ್ಮಾಣ ಸಾಧ್ಯ,” ಎಂದರು. ಇದೇ ಸಂದರ್ಭದಲ್ಲಿ ಪೇರಡ್ಕ ಗೂನಡ್ಕ ಭಾಗದಲ್ಲಿ ಸೌಹಾರ್ದಯುತ ಬದುಕಿಗೆ ಅಡಿಪಾಯ ಹಾಕಿದ ತಮ್ಮ ಪೂರ್ವಿಕರಾದ ತೆಕ್ಕಿಲ್ ಮುಹಮ್ಮದ್ ಹಾಜಿ ಅವರ ಕೊಡುಗೆಯನ್ನು ಸ್ಮರಿಸಿದರು.
ಪರಸ್ಪರ ನಂಬಿಕೆ ವೃದ್ಧಿಯಾಗಲಿ
ಪೇರಡ್ಕ ಖತೀಬರಾದ ಅಹ್ಮದ್ ನಈಂ ಮಅಬರಿ ಫೈಝಿ ಸೌಹಾರ್ದ ಸಂದೇಶ ನೀಡಿ, “ದೇಶದ ಪ್ರತಿಯೊಂದು ಹಳ್ಳಿ ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲಾ ಧರ್ಮದವರು ಒಂದೆಡೆ ಸೇರಿ ಮುಕ್ತವಾಗಿ ಸಂವಹನ ನಡೆಸಬೇಕು.ಎಂದರು.ಕರಾವಳಿ ಪ್ರಾಧಿಕಾರ ಅಧ್ಯಕ್ಷ ಎಂ ಎ ಗಫೂರ್ ಮಾತನಾಡಿ ನಾಡಿನ ಸೌಹಾರ್ಧ ತೆಯನ್ನು ಉಳಿಸಲು ಎಲ್ಲ ದರ್ಮದವರು ಕೈ ಜೋಡಿಸಬೇಕು. ಗ್ರಾಮ ಮಟ್ಟದಲ್ಲಿ ಇಂಥ ಕಾರ್ಯಕ್ರಮ ಗಳು ಹೆಚ್ಚು ನಡೆಯಬೇಕು .ಜನರ ಮದ್ಯೆ ದ್ವೇಷ ಕಲ್ಪನೆ ಹುಟ್ಟಿದ ಸಂದರ್ಭಗಳಲ್ಲಿ ಮಾತ್ರ ತಪ್ಪು ಕಲ್ಪನೆಗಳು ದೂರವಾಗಿ ನೈಜ ಸೌಹಾರ್ದತೆ ನೆಲೆಸಲು ಸಾಧ್ಯ,” ಎಂದು ಆಶಯ ವ್ಯಕ್ತಪಡಿಸಿದರು.
ಗಣ್ಯರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ವಿವಿಧ ಧರ್ಮಗಳ ಮುಖಂಡರು ಹಾಗೂ ಗಣ್ಯರು ಪಾಲ್ಗೊಂಡು ಶುಭ ಹಾರೈಸಿದರು:
ರೆವರೆಂಡ್ ಫಾದರ್ ಪೌಲ್ ಕ್ರಾಸ್ತಾ: ಕಲ್ಲುಗುಂಡಿ ಚರ್ಚ್ ಧರ್ಮಗುರುಗಳು,ರಾಜ್ಯ ಅರೆಭಾಷೆ ಸಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ
ಸದಾನಂದ ಮಾವಜಿ,ಸಜ್ಜನ ಪ್ರತಿಷ್ಠಾನ ಅಧ್ಯಕ್ಷ ರಾದ
ಡಾ. ಉಮರ್ ಬೀಜದಕಟ್ಟೆಸುಳ್ಯ ನಗರ ಪ್ರಾಧಿಕಾರ ಅಧ್ಯಕ್ಷ
ಕೆ.ಎಂ. ಮುಸ್ತಫ,ತೊಡಿಕಾನ ದೇವಸ್ಥಾನ ಸಮಿತಿ ಸದಸ್ಯ ತಿರ್ಥರಾಮ ಪರ್ನೋಜಿ ಶುಭ ಹಾರೈಸಿದರು .
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಬೃಹತ್ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಎಂ.ಆರ್.ಡಿ.ಎ ಅಧ್ಯಕ್ಷ ಜಿ.ಕೆ. ಹಮೀದ್ ಸ್ವಾಗತಿಸಿದರು ಮತ್ತು ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಮೊಟ್ಟೆಂಗಾರ್ ವಂದಿಸಿದರು.
ಚರಿತ್ರೆಗಳನ್ನು ತಿರುಚುವ ಪ್ರಯತ್ನ ಸಲ್ಲದು: ಜನಾಬ್ ಟಿ ಎಂ ಶಹೀದ್ ತೆಕ್ಕಿಲ್

















