ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದದಲ್ಲಿ ಡಿ.16ರಿಂದ ಆರಂಭ ಗೊಂಡ ಧನು ಪೂಜೆ ಜ. 14 ರಂದು ಸಂಪನ್ನ ಗೊಂಡಿತು.
ಶ್ರೀ ದೇವರಿಗೆ ಪ್ರಾತಃ ಕಾಲ ರುದ್ರಾಭಿಷೇಕ, ಧನು ಪೂಜೆ,ಮಹಾಪೂಜೆ ಸೇವೆಗಳು, ಭಜನಾ ಸಂಕೀರ್ತನೆ ನಡೆಯಿತು. ಸೀಮೆಯ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಪ್ರತೀ ದಿನ ಬೆಳಗ್ಗಿನ ಫಲಾಹಾರದ ವ್ಯವಸ್ಥೆ ಇತ್ತು .
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ವ್ಯವಸ್ಥಾಪನಾ ಸಮಿತಿ ಸದಸ್ಯರಾದ,ಧರ್ಮಣ್ಣ ನಾಯ್ಕ ಗರಡಿ,ಮಾಯಿಲಪ್ಪ ಗೌಡ ಪಟ್ಟೆ ಎಣ್ಮರು, ಸಂತೋಷ್ ಕುಮಾರ್ ರೈ ಪಲ್ಲತ್ತಡ್ಕ, ಶ್ರೀಮತಿ ಮಾಲಿನಿ ಕುವ್ವ, ಶ್ರೀಮತಿ ಪವಿತ್ರ ಮಲ್ಲೆಟಿ, ಸೀಮೆಯ ಭಕ್ತಾದಿಗಳು ಪಾಲ್ಗೊಂಡಿದ್ದರು.
ಪಂಜ : ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದದಲ್ಲಿ ಧನುಪೂಜೆ ಸಂಪನ್ನ

















