ಆರಂತೋಡು ಗ್ರಾಮ ಪಂಚಾಯತ್ ನ 2025-26ಸಾಲಿನ ಮಕ್ಕಳ ಗ್ರಾಮ ಸಭೆಯು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಆರಂತೋಡು ಶಾಲೆಯ ಸಭಾ ಭವನದಲ್ಲಿ ಅಡ್ತಲೆ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಕುl ಧ್ವನಿ ಯವರ ಅಧ್ಯಕ್ಷತೆಯಲ್ಲಿ ಜ.13ರಂದು ನಡೆಯಿತು.
ಮಕ್ಕಳ ಗ್ರಾಮ ಸಭೆಯಲ್ಲಿ ಶಿಕ್ಷಣ ಇಲಾಖೆಯ ಸಿ. ಆರ್. ಪಿ. ಮಮತ ಮಹಿಳಾ ಮತ್ತು ಮಕ್ಕಳ ಇಲಾಖೆ ದೀಪಿಕಾ ಮತ್ತು ಅರೋಗ್ಯ ಇಲಾಖೆ ಭಾಗೀರಥಿ. ಇಲಾಖಾ ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷರು ಮಕ್ಕಳ ಪ್ರಶ್ನೆಗಳು ಮತ್ತು ಬೇಡಿಕೆಗಳಿಗೆ ಉತ್ತರ ನೀಡಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಮ್ ಆರ್. ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪಂಚಾಯತ್ ವ್ಯಾಪ್ತಿಯ ಶಾಲೆಯಲ್ಲಿ ನಡೆಸಿದ ಸ್ಪರ್ಧಾ ವಿಜೇತ ಮಕ್ಕಳಿಗೆ ಬಹುಮಾನವನ್ನು ಪಂಚಾಯತ್ ವತಿಯಿಂದ ವಿತರಿಸಲಾಯಿತು. ಮಕ್ಕಳ ಗ್ರಾಮ ಸಭೆಯ ವೇದಿಕೆಯಲ್ಲಿ ಪಂಚಾಯತ್ ಸದಸ್ಯರುಗಳಾದ ಶ್ರೀಮತಿ ಹರಿಣಿ ದೇರಾಜೆ, ಶ್ರೀಮತಿ ಮಾಲಿನಿ ಉಳುವಾರು ಉಪಸ್ಥಿತರಿದ್ದರು. ಆರಂತೋಡು ಶಾಲೆಯ ದೈಹಿಕ ಶಿಕ್ಷಕರಾದ ಶ್ರೀ ಧನಂಜಯ ಮೆರ್ಕಜೆಯರ ಧನ್ಯವಾದದೊಂದಿಗೆ ಸಭೆ ಮುಕ್ತಾಯಗೊಂಡಿತು. ಪಂಚಾಯತ್ ಸಿಬ್ಬಂದಿಗಳು ಮತ್ತು ಆರಂತೋಡು ಪ್ರಾಥಮಿಕ ಶಾಲೆಯ ಶಿಕ್ಷಕರ ವೃಂದವರು ಸಹಕರಿಸಿದರು.



































