ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದಲ್ಲಿ ಬುಡಕಟ್ಟು ರೈತರು ಹಾಗೂ FPOಗಳಿಗಾಗಿ APEDA ಜಾಗೃತಿ ಕಾರ್ಯಕ್ರಮ

ಕೃಷಿ ಮತ್ತು ಸಂಸ್ಕೃತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (APEDA)ವು ICAR–ಕೃಷಿ ವಿಜ್ಞಾನ ಕೇಂದ್ರ (KVK), ಮಂಗಳೂರು, ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿ. ಕೇಂದ್ರ ವಿಟ್ಲ, ಸಂಜೀವಿನಿ NRLM ಸುಳ್ಯ ತಾಲೂಕು ಪಂಚಾಯತ್, ಆಲೆಟ್ಟಿ ಗ್ರಾಮ ಪಂಚಾಯತ್ ಹಾಗೂ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ, ಆಲೆಟ್ಟಿ ಇವರ ಸಹಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬುಡಕಟ್ಡು ಪ್ರದೇಶಗಳ ರೈತರು, ರೈತ ಉತ್ಪಾದಕ ಸಂಘಗಳು (FPOಗಳು) ಮತ್ತು ಕೃಷಿ ಸ್ಟಾರ್ಟ್‌ಅಪ್‌ಗಳಿಗಾಗಿ ಕೃಷಿ ರಫ್ತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿತು.
ಕಾರ್ಯಕ್ರಮವನ್ನು APEDA ಬೆಂಗಳೂರು ವಿಭಾಗದ AGM ಹಾಗೂ ಪ್ರಾದೇಶಿಕ ಮುಖ್ಯಸ್ಥರಾದ ಶ್ರೀ ಧರ್ಮರಾವ್ ಮತ್ತು ICAR–KVK ಮಂಗಳೂರು ಮುಖ್ಯಸ್ಥರಾದ ಶ್ರೀ ಟಿ. ಜೆ. ರಮೇಶ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ
ಪ್ರಾದೇಶಿಕ ಕೃಷಿ ಹಾಗೂ ತೋಟಗಾರಿಕಾ ಉತ್ಪನ್ನಗಳಿಗೆ ಲಭ್ಯವಿರುವ ರಫ್ತು ಅವಕಾಶಗಳ ಕುರಿತು ವಿಶೇಷವಾಗಿ ಚರ್ಚೆ ನಡೆಸಲಾಯಿತು.
ತಾಂತ್ರಿಕ ಅಧಿವೇಶನಗಳಲ್ಲಿ APEDA ಸಹಾಯಕ ವ್ಯವಸ್ಥಾಪಕಿ ಡಾ. ಪೂಜಾ ಬಿ.ಕೆ. ಅವರು ಪ್ರಮುಖ ಪ್ರಾದೇಶಿಕ ಬೆಳೆಗಳಿಗೆ ಇರುವ ರಫ್ತು ಸಾಧ್ಯತೆಗಳು ಹಾಗೂ ವಿವಿಧ ದೇಶಗಳಲ್ಲಿ ಅವುಗಳಿಗೆ ಇರುವ ಮಾರುಕಟ್ಟೆಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ರೈತರನ್ನು ರಫ್ತುದಾರರೊಂದಿಗೆ ಸಂಪರ್ಕಿಸುವಲ್ಲಿ APEDA ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ರೈತರು ಮತ್ತು FPOಗಳು ರಫ್ತುದಾರರಾಗಿ ರೂಪುಗೊಳ್ಳಲು ಅಗತ್ಯವಾದ ಹ್ಯಾಂಡ್‌ಹೋಲ್ಡಿಂಗ್ ಹಾಗೂ ಮಾರ್ಗದರ್ಶನ ನೀಡುವ ಬದ್ಧತೆಯನ್ನು ಪ್ರಾಧಿಕಾರ ವ್ಯಕ್ತಪಡಿಸಿತು.
ಈ ಪ್ರದೇಶಕ್ಕೆ ವಿಶೇಷವಾದ ಕಾಡು ಜೇನು ಹಾಗೂ ಕೊಡಂಪುಳಿ (ಕೊಕುಂ) ಮೊದಲಾದ ಉತ್ಪನ್ನಗಳನ್ನು ಪ್ರಾದೇಶಿಕ ವಿಶಿಷ್ಟ ಉತ್ಪನ್ನಗಳಾಗಿ ಗುರುತಿಸಲಾಗಿದ್ದು, ಅವುಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ಪ್ರಚಾರ ಮಾಡುವುದಕ್ಕೆ ಅಗತ್ಯ ಸಹಕಾರ ನೀಡಲಾಗುವುದೆಂದು ರೈತರಿಗೆ ಭರವಸೆ ನೀಡಲಾಯಿತು. ಜೊತೆಗೆ KVK ವಿಜ್ಞಾನಿಗಳು ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ರಫ್ತು ಗುಣಮಟ್ಟಕ್ಕೆ ತಕ್ಕಂತೆ ಉತ್ಪಾದನೆ, ಸಮಗ್ರ ಕೀಟ ನಿರ್ವಹಣೆ ಹಾಗೂ ಗುಣಮಟ್ಟದ ಕ್ರಮಗಳ ಕುರಿತು ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡರು. ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕರು ಪ್ರಮೋದ್ ಸಿ ಎಂ, ಅರ್ಭನ್ ಪೂಜಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರೈತರು, FPO ಪ್ರತಿನಿಧಿಗಳು ಹಾಗೂ ಕೃಷಿ ಸ್ಟಾರ್ಟ್‌ಅಪ್‌ಗಳು ಉತ್ಸಾಹದಿಂದ ಭಾಗವಹಿಸಿದ್ದು, ಸಾಮರ್ಥ್ಯ ವೃದ್ಧಿ ಮತ್ತು ಸಂಸ್ಥಾತ್ಮಕ ಬೆಂಬಲದ ಮೂಲಕ ಗಿರಿಜನ ಹಾಗೂ ಗ್ರಾಮೀಣ ಪ್ರದೇಶಗಳಿಂದ ಕೃಷಿ ರಫ್ತು ಉತ್ತೇಜಿಸುವಲ್ಲಿ APEDA ನಿರಂತರ ಪ್ರಯತ್ನಗಳನ್ನು ಮುಂದುವರಿಸುತ್ತಿರುವುದನ್ನು ಈ ಕಾರ್ಯಕ್ರಮ ಮತ್ತೊಮ್ಮೆ ದೃಢಪಡಿಸಿತು. ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿ ವಿಟ್ಲ ವಿಶೇಷವಾಗಿ ರೈತರನ್ನು ಒಗ್ಗೂಡಿಸುವಲ್ಲಿ ಮಹತ್ತರ ಪಾತ್ರ ವಹಿಸಿದೆ.
ಕಾರ್ಯಕ್ರಮವನ್ನು ಕೃಷಿ ಸಖಿ ಮೋಹಿನಿ ವಿಶ್ವನಾಥ್ (ನಿಶಾ) ಅವರು ಸ್ವಾಗತಿಸಿ ನಿರೂಪಿಸಿದರು. ಸಂಜೀವಿನಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಶ್ರೀಮತಿ ಶ್ವೇತಾ ಅವರು ಸಂಜೀವಿನಿ ಯೋಜನೆಯ ಮಾಹಿತಿ ನೀಡಿದ್ದು, ವಂದನಾರ್ಪಣೆ ಮಾಡಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top