ಜ.18ರಿಂದ ಫೆ.2ರ ತನಕ 14 ಮಂಡಲಗಳಲ್ಲಿ ಬೃಹತ್ ಹಿಂದೂ ಸಂಗಮ ಮತ್ತು‌ ಶೋಭಾಯಾತ್ರೆ

ಸುಳ್ಯ: ರಾಷ್ಟ್ರೀಯ ಸ್ವಯಂ ಸೇವಕ ಸಂಘ 100 ವರ್ಷಗಳ ಯಾತ್ರೆಯಲ್ಲಿ ಮುನ್ನಡೆಯುತ್ತಿರುವುದರಿಂದ
ನಮ್ಮಲ್ಲಿ ಸಾಮರಸ್ಯ, ಸಾಮಾಜಿಕ ಪರಿವರ್ತನೆ, ಏಕತೆ, ಧಾರ್ಮಿಕ ಮತ್ತು ರಾಷ್ಟ್ರೀಯ ಭಾವನೆಯನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶದಿಂದ ಸುಳ್ಯ ತಾಲೂಕಿನ 14 ಮಂಡಲಗಳಲ್ಲಿ ಜ.18ರಿಂದ ಫೆ.2ರ ತನಕ ಬೃಹತ್ ಹಿಂದೂ ಸಂಗಮ ಮತ್ತು ಶೋಭಾಯಾತ್ರೆ ನಡೆಯಲಿದೆ ಎಂದು ಹಿಂದೂ ಸಂಗಮ ಆಯೋಜನಾ ಸಮಿತಿಯ ತಾಲೂಕು ಅಧ್ಯಕ್ಷ ಎಂ.ಬಿ.ಸದಾಶಿವ ಹಾಗೂ ಕಾರ್ಯದರ್ಶಿ ಸುದರ್ಶನ್ ಸೂರ್ತಿಲ ಹೇಳಿದರು.
ಸುಳ್ಯದ ಗಿರಿದರ್ಶಿನಿ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಹಿಂದೂ ಸಂಗಮ ಆಯೋಜನಾ ಸಮಿತಿಯಿಂದ ಹಿಂದು ಸಂಗಮ ಕಾರ್ಯಕ್ರಮ ನಡೆಯಲಿದೆ.
ಸಂಘಟನೆಗಳನ್ನು ಬಲಪಡಿಸುವುದು, ಗುಣ ಸಂಪನ್ನ ವ್ಯಕ್ತಿ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುಸುವುದು. ಶಿಸ್ತು, ಧೈರ್ಯ, ದೇಶಭಕ್ತಿ, ಪ್ರಾಮಾಣಿಕತೆ, ಸೇವಾ ಚಟುವಟಿಕೆ ಮುಂತಾದವುಗಳನ್ನು ಒಳಗೊಂಡ ವ್ಯಕ್ತಿತ್ವದ ನಿರ್ಮಾಣ, ಸಾಮಾಜಿಕ ಸಾಮರಸ್ಯದ ಮೇಲು-ಕೀಳು ತೊಡೆದು ಹಾಕಿ ಸಮರಸತೆಯ ಬದುಕು ರೂಪಿಸುವುದು. ಪರಿಸರ ಸಂರಕ್ಷಣೆ ಮಾಡುವುದು. ಭೂಮಿ, ಆಕಾಶ, ನೀರು, ಗಾಳಿ, ಅಗ್ನಿ, ಪಂಚ ಭೂತಗಳಿಂದ ನಿರ್ಮಿತವಾದ ಈ ಪರಿಸರದ ಪೋಷಣೆ ನಮ್ಮೆಲ್ಪರ ಹೊಣೆ,ಪ್ಲಾಸ್ಟಿಕ್ ಮುಕ್ತ ಗ್ರಾಮಗಳನ್ನು ರೂಪಿಸುವುದು.
ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಸಂಗಮದ ಗೌರವ ಸಲಹೆಗಾರರಾದ ಡಾ.ಗಿರೀಶ್ ಭಾರದ್ವಾಜ್, ಡಾ.ಯಶೋಧ ರಾಮಚಂದ್ರ ಹಿಂದೂ ಸಂಗಮ ಆಯೋಜನಾ ಸಮಿತಿಯ ತಾಲೂಕು ಸಂಚಾಲಕ ಡಾ.ಚಂದ್ರಶೇಖರ ನಲ್ಲೂರಾಯ, ಆರ್‌ಎಸ್‌ಎಸ್‌ ದಕ್ಷಿಣ ಪ್ರಾಂತ ಸಹ ಸೇವಾ ಪ್ರಮುಖ್ ನ.ಸೀತಾರಾಮ, ಸಹ ಖಜಾಂಜಿ ರಾಜೇಶ್ ರೈ ಮೇನಾಲ ಸೇರಿದಂತೆ ವಿವಿಧ ಮಂಡಲಗಳ ಸಂಚಾಲಕರು ಸಹಸಂಚಾಲಕರು,ತಾಲೂಕು ಆಯೋಜನಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top