ಎಣ್ಮೂರು ಮಖಾಂ ಉರೂಸ್ ಗೆ ವರ್ಣರಂಜಿತ ತೆರೆ

ಸುಳ್ಯ ತಾಲೂಕಿನ ಇತಿಹಾಸ ಪ್ರಸಿದ್ಧ ಎಣ್ಣೂರು-ಐವತ್ತೊಕ್ಕು ರಹ್ಮಾನಿಯಾ ಕೇಂದ್ರ ಜುಮಾ ಮಸ್ಟಿದ್‌ ದರ್ಗಾ ಶಫ್‌ನಲ್ಲಿ ಎಣ್ಮೂರು ಮಖಾಂ ಉರೂಸ್ ಜ.15ರಿಂದ 17ರದ ರೆಗೆ ನಡೆಯಿತು.
ಜನವರಿ 17ರಂದು ನಡೆದ ಸಮಾರೋಪ ಸಮಾರಂಭಕ್ಕೆ ಸಹಸ್ರಾರು ಮಂದಿ ಭಕ್ತರು ಜಾತಿ ಭೇದವಿಲ್ಲದೆ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.
ಎಣ್ಮೂರು ರಹ್ಮಾನಿಯಾ ಕೇಂದ್ರ ಜುಮಾ ಮಸ್ಟಿದ್ ದರ್ಗಾ ಶರೀಫ್ ನಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ವಲಿಯುಲ್ಲಾಹಿ ಮಶ್ ಹೂರತ್ ಬೀಬಿ ಅವರ ಮಖಾಂ ಹಲವಾರು ಪವಾಡ ಗಳಿಗೆ ಪ್ರಸಿದ್ದಿಯನ್ನು ಪಡೆದಿದ್ದು ಸಾವಿರಾರು ಮಂದಿ ಭಕ್ತರು ಜಾತಿ ಮತ ಭೇಧವಿಲ್ಲದೆ ಇಲ್ಲಿಗೆ ಹರಕೆ ಹೊತ್ತು ಬರುವ ವಾಡಿಕೆ ತಲಾಂತರದಿಂದ ನಡೆದು ಬರುತ್ತಿದೆ.
ಜ.17 ಸಮಾರೋಪ ಸಮಾರಂಭದಂದು ಸಂಜೆ 3ರಿಂದ ಬೃಹತ್ ಉಮರಾ ಸಮಾವೇಶ ನಡೆಯಿತು. ಈ ಕಾರ್ಯಕ್ರಮದಲ್ಲಿ ಹಲವಾರು ಮುಖಂಡರುಗಳು ಭಾಗವಹಿಸಿದ್ದರು.ಕರ್ನಾಟಕ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್ ರವರು ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ ಎಸ್ ಮಹಮ್ಮದ್ ರವರು ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಗಳೂರಿನ ಖ್ಯಾತ ಉದ್ಯಮಿ ಇನಾಯತ್ ಅಲಿ, ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ ಎಂ ಮುಸ್ತಫ, ಜಿಲ್ಲಾ ಪಂಚಾಯತ್ ಸ್ಥಾಯಿ ಕಾಮಗಾರಿ ಸಮಿತಿಯ ಮಾಜಿ ಅಧ್ಯಕ್ಷ ಮೀರಾನ್ ಸಾಹೇಬ್, ಸುಳ್ಯ ಅಲ್ಪಸಂಖ್ಯಾತರ ಸಹಕಾರಿ ಸಂಘದ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿಮಲೆ, , ಮುಖಂಡರುಗಳಾದ ನೂರುದ್ದೀನ್ ಸಾಲ್ಮಾರ, ಮೊಹಮ್ಮದ್ ಕುಕ್ಕುವಳ್ಳಿ, ರಫೀಕ್ ಎಂಎ, ಇಕ್ಬಾಲ್ ಬಾಳಿಲ, ಸಿದ್ದೀಕ್ ಕೊಕ್ಕೋ ಮೊದಲಾದವರು ಉಪಸ್ಥಿತರಿದ್ದರು.
ಮಗ್ರಿಬ್ ನಮಾಝಿನ ನಂತರ ನಡೆದ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಅಸ್ಸಯ್ಯದ್ ಝನುಲ್ ಆಬಿದೀನ್ ತಂಬಳ್ ಆಲ್ ಬುಖಾರಿ ಎಣ್ಣೂರು-ಮುಚ್ಚಿಲ ಇವರು ದುವಾಶೀರ್ವಚನ ನೀಡಿದರು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉರೂಸ್ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಗಪೂರ್ ಕಲ್ಮಡ್ಕರವರು ವಹಿಸಿದ್ದರು. ಖ್ಯಾತ ವಾಗಿ ಹಿರಿಯ ವಿದ್ವಾಂಸರಾದ ಮುಹಮ್ಮದಾಲಿ ಸಖಾಫಿ ಮುಳ್ಳೂರುಕರ ಇವರು ಭಾಗವಹಿಸಿ ಮಹಾನರ ಜೀವನ ಚರಿತ್ರೆಯ ಬಗ್ಗೆ ಮುಖ್ಯಪ್ರಭಾಷಣ ಮಾಡಿ ಇಸ್ಲಾಮಿನಲ್ಲಿ ಶಿಕ್ಷಣಕ್ಕೆ ನೀಡುವ ಮಹತ್ವದ ಕುರಿತು ವಿವರಿಸಿದರು.
ವೇದಿಕೆಯಲ್ಲಿ ಮಹಮ್ಮದ್ ಖಾಸಿಂ ಸಅದಿ ಮುಚ್ಚಿಲ,ಯೂನಿಸ್ ಅಕ್ಸನಿ,ಅನ್ಸಾರ್ ಫಾಲಿಲಿ, ನಿಜಾಮುದ್ದೀನ್ ಫಾಲಿಲಿ,ಸಲ್ಮಾನ್ ಫಾರಿಸ್ ಹಿಮಮಿ,ಅಬ್ದುಲ್ ಅಝೀಝ್ ಅಮ್ಮದಿ, ಇರ್ಷಾದ್ ಸಅದಿ, ಉಮರ್ ಸೀಗೆಯಡಿ, ವೈ ಕೆ ಸುಲೇಮಾನ್, ಹನೀಫ್ ಅಡಿಬಾಯಿ, ಜಮಾಲ್ ಪಡ್ಲಿನಂಗಡಿ, ಅಬ್ದುಲ್ ರಹಿಮಾನ್ ನಿಂತಿಕಲ್ಲು, ಫಾರೂಕ್ ಸಮಹಾದಿ, ಮೊಹಮ್ಮದ್ ಝಿಯಾದ್ ಸಖಾಫಿ, ಮುಕ್ತಾರ್ ಸಅದಿ ಖತೀಬರು, ಹಿರಿಯರಾದ ಇಸಾಕ್ ಸಾಹೇಬ್ ಪಾಜೆಪಳ್ಳ, ಉದ್ಯಮಿ ಅಬೂಬಕ್ಕರ್ ಮಂಗಳ, ಕೆಎಂಎಸ್ ಮಹಮ್ಮದ್ ಹಾಜಿ ಗಾಂಧಿನಗರ ಮೊದಲಾದವರು ಉಪಸ್ಥಿತರಿದ್ದರು.
ಜಮಾಅತ್ ಸಮಿತಿಯ ಕೋಶಾಧಿಕಾರಿ ಸುಲೈಮಾನ್‌ ಸಖಾಫಿ ಸ್ವಾಗತಿಸಿ ಉರೂಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಜಾಕ್ ಕೊಳ್ತಂಗರೆ ವಂದಿಸಿದರು.ಜಮಾಅತ್ ಸಮಿತಿಯ ಪದಾಧಿಕಾರಿಗಳು ಸದಸ್ಯರುಗಳು, ಉರೂಸ್ ಸಮಿತಿಯ ಪದಾಧಿಕಾರಿಗಳು ಸದಸ್ಯರುಗಳು, ಸ್ಥಳೀಯ ಯುವಕರು,ಸಹ ಸಂಘಟನೆಗಳ ಸದಸ್ಯರು ಸಹಕರಿಸಿದರು.
ಕಾರ್ಯಕ್ರಮಗಳಲ್ಲಿ ಜಾತಿ ಧರ್ಮ ಬೇಧವಿಲ್ಲದೆ ಸಹಸ್ರಾರು ಮಂದಿ ಭಾಗವಹಿಸಿ ಅನ್ನಪ್ರಸಾದವನ್ನು ಸ್ವೀಕರಿಸಿದರು. ಉರುಸ್ ಸಮಿತಿ ಉಪಾಧ್ಯಕ್ಷ ಟಿ.ಎಸ್.ಅಬ್ದುಲ್ ಖಾದರ್, ಪ್ರಚಾರ ಸಮಿತಿ ಸಂಚಾಲಕ ಟಿ.ಎಸ್‌. ರಫೀಕ್, ಉರೂಸ್ ಸಮಿತಿ ಸದಸ್ಯ ರಫೀಕ್ ಐವತ್ತೊಕ್ಕು ಮೊದಲಾದವರು ಮಾಹಿತಿ ಕೇಂದ್ರದಲ್ಲಿ ಸಹಕರಿಸಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top